See also 2grain
1grain ಗ್ರೇನ್‍
ನಾಮವಾಚಕ
  1. ಕಾಳು; ಧಾನ್ಯ; ದವಸ; ಬೀಜ.
  2. (ಸಾಮೂಹಿಕ ಏಕವಚನ) ಗೋದಿ ಯಾ ಅದರಂಥ ಆಹಾರ ನೀಡುವ ಹುಲ್ಲುಸಸ್ಯ ಯಾ ಅದು ಬಿಡುವ ಫಲ, ದವಸ, ಧಾನ್ಯ ಯಾ ಕಾಳು.
  3. (ಸಾಮೂಹಿಕ ಏಕವಚನ) ನಿರ್ದಿಷ್ಟ (ಬಗೆಯ) ಧಾನ್ಯ.
  4. (ಬಹುವಚನದಲ್ಲಿ) ಗಸಿಕಾಳು; ಬಟ್ಟಿಯುಳಿಕೆಯ ಕಾಳು; ಗಸಿಮಾಲ್ಟು; ಸಾರಾಯಿ ಮಾಡಿದ ಮೇಲೆ ಯಾ ಬಟ್ಟಿಯಿಳಿಸಿದ ಮೇಲೆ ಉಳಿಯುವ ಮೊಳೆತ ಜವೆ ಗೋದಿಯ ಕಸರು.
  5. (ಮರಳು, ಚಿನ್ನ, ಲವಣ, ಕೋವಿ ಮದ್ದು, ಸುವಾಸನಾ ದ್ರವ್ಯ, ಮೊದಲಾದವುಗಳ) ಕಾಳು; ಹರಳು; ರವೆ; ಕಣ.
  6. ಹರಳು; ಕಣ; ಬಂಡೆಯಲ್ಲಿನ ಯಾ ಲೋಹದಲ್ಲಿನ ನಿರ್ದಿಷ್ಟ ಆಕಾರವಿಲ್ಲದ, ವಿಭಿನ್ನವಾದ ಕಣಗಳಲ್ಲಿ ಯಾ ಹರಳುಗಳಲ್ಲಿ ಒಂದು.
  7. (ವಾಯುಯಾನ) ರಾಕೆಟ್‍ ಎಂಜಿನಿನಲ್ಲಿ ಬಳಸುವ ಘನನೋದಕದ ತುಂಡು.
  8. ಗ್ರೇನು; ಒಂದು ಅತ್ಯಂತ ಚಿಕ್ಕ ತೂಕಮಾನ (ಟ್ರಾಯ್‍ ಪದ್ಧತಿಯಲ್ಲಿ 1/480 ಔನ್ಸು). (ಅವೆರ್ಡುಪಾಯ್ಸ್‍ ಪದ್ಧತಿಯಲ್ಲಿ 1/437.5 ಔನ್ಸು).
  9. ಅಣು; ಲವ; ಲೇಶ; ಅತ್ಯಲ್ಪ ಪರಿಮಾಣ: without a grain of vanity, of love ಲೇಶಮಾತ್ರವೂ ಒಣಹೆಮ್ಮೆಯಿಲ್ಲದೆ, ಲವಲೇಶವೂ ಪ್ರೇಮವಿಲ್ಲದೆ.
  10. (ಚರಿತ್ರೆ) ‘ಕರ್ಮಿಸ್‍’ ಬಣ್ಣ; ಕರುಮಂಜಿ ಬಣ್ಣ; ಕಡುಗೆಂಪು ವರ್ಣದ್ರವ್ಯ; ‘ಕರ್ಮಿಸ್‍’ ಯಾ ‘ಕಾಚಿನೀಲ್‍’ ಹುಳದಿಂದ ತಯಾರಿಸಿದ ಬಣ್ಣ.
  11. (ಕಾವ್ಯಪ್ರಯೋಗ) ಬಣ್ಣ; ರಂಗು; ವರ್ಣ: a robe of the darkest grain ಅತ್ಯಂತ ದಟ್ಟ ವರ್ಣದ ಮೇಲಂಗಿ.
  12. ಕಣಕಣಗಳಾಗಿರುವ ರಚನೆ.
  13. ಮೇಲ್ಮೈ ತರಿತರಿಯಾಗಿರುವುದು, ತರಕಲಾಗಿರುವುದು; ಮೇಲ್ಮೈಯ ಒರಟು.
  14. ಮೇಲ್ಮೈ ಚುಕ್ಕೆ ಚುಕ್ಕೆಯಾಗಿರುವುದು, (ಬಣ್ಣ ಬಣ್ಣದ) ಮಚ್ಚೆ ಮಚ್ಚೆಯಾಗಿರುವುದು.
  15. (ಮಾಂಸ, ಚರ್ಮ, ಮರ, ಕಲ್ಲು, ಮೊದಲಾದವುಗಳಲ್ಲಿ) ರೇಖಾವಿನ್ಯಾಸ; ಕಣಗಳ ರಚನೆ, ವಿನ್ಯಾಸ ಮತ್ತು ಗಾತ್ರ.
  16. (ಮರದ ಯಾ ಕಾಗದದ ವಿಷಯದಲ್ಲಿ) ಎಳೆರಚನೆ; ಗೆರೆವಿನ್ಯಾಸ; ಒಂದು ನಿರ್ದಿಷ್ಟ ಆಕಾರದಲ್ಲಿರುವ ಎಳೆಗಳ, ಗೆರೆಗಳ ರಚನೆ ಯಾ ವಿನ್ಯಾಸ.
  17. (ಕಲ್ಲಿದ್ದಲು, ಕಲ್ಲು, ಮೊದಲಾದವುಗಳಲ್ಲಿ) ಪೊರೆ (ಏಳುವ) ಪದರಗಳು.
  18. (ರೂಪಕವಾಗಿ) ಸ್ವಭಾವ; ಪ್ರಕೃತಿ; ಮನೋವೃತ್ತಿ; ಮನೋಧರ್ಮ; ಪ್ರವೃತ್ತಿ; ಒಲವು; ಓಲು: against the grain ಸ್ವಭಾವಕ್ಕೆ ವಿರುದ್ದವಾಗಿ; ಮನೋಧರ್ಮಕ್ಕೆ ವ್ಯತಿರಿಕ್ತವಾಗಿ: the mind must not be made to work against the grain ಮನಸ್ಸನ್ನು ಸ್ವಭಾವಕ್ಕೆ ವಿರುದ್ಧವಾಗಿ ಕೆಲಸ ಮಾಡುವಂತೆ ಮಾಡಬಾರದು.
ಪದಗುಚ್ಛ
  1. dye in grain
    1. ಕಿರುಮಂಜಿ ಬಣ್ಣಕಟ್ಟು.
    2. ಯಾವುದೇ ಗಟ್ಟಿಬಣ್ಣ – ಹಾಕು, ಕೊಡು.
    3. ನೂಲಿನಲ್ಲೇ ಬಣ್ಣ – ಕಟ್ಟು, ಕೊಡು.
    4. ಚೆನ್ನಾಗಿ ಬಣ್ಣಕಟ್ಟು; ಪೂರ್ತಾ ಬಣ್ಣ ಕೊಡು.
  2. Guinea grains ಮಸಾಲೆಯಾಗಿಯೂ ಔಷಧ ಸಾಮಗ್ರಿಯಾಗಿಯೂ ಬಳಸುವ, ಪಶ್ಚಿಮ ಆಹ್ರಿಕದ ಸಸ್ಯದ ಬೀಜಕೋಶಗಳು.
  3. in grain
    1. (ರೂಪಕವಾಗಿ) ಪಕ್ಕಾ; ಶುದ್ಧ; ಅಪ್ಪಟ (ತಿರಸ್ಕಾರಪೂರ್ವಕವಾಗಿ ಮುಖ್ಯವಾಗಿ ass, fool, ಮೊದಲಾದವುಗಳೊಡನೆ): he was known to be a scoundrel in grain ಅವನು ಪಕ್ಕಾ ಪಟಿಂಗನೆಂದು ಗೊತ್ತಿತ್ತು.
    2. ಅಚ್ಚಳಿಯದ; ಅಳಿಸಲಾಗದ; ಗಟ್ಟಿಬಣ್ಣದ.
  4. large grain powder ದೊಡ್ಡ ಚರೆ; ದೊಡ್ಡ ಕಣದ ಕೋವಿಮದ್ದು.
  5. small grain powder ಸಣ್ಣ ಚರೆ; ಚಿಕ್ಕ ಕಣದ ಕೋವಿಮದ್ದು.
ನುಡಿಗಟ್ಟು
  1. against the grain (ಒಬ್ಬನ) ಸ್ವಭಾವಕ್ಕೆ ವಿರುದ್ಧವಾಗಿ; ಪ್ರಕೃತಿಗೆ ವ್ಯತಿರಿಕ್ತವಾಗಿ.
  2. with a grain of salt ಸ್ವಲ್ಪ ಸೋಡಿ ಬಿಟ್ಟು; ವಿಮರ್ಶಕ ಬುದ್ಧಿಯಿಂದ; ಜಾಗರೂಕತೆಯಿಂದ: take his predictions with a grain of salt ಅವನು ಹೇಳುವ ಭವಿಷ್ಯನುಡಿಗಳ ವಿಷಯದಲ್ಲಿ ಎಚ್ಚರಿಕೆಯಿಂದಿರು.
See also 1grain
2grain ಗ್ರೇನ್‍
ಸಕರ್ಮಕ ಕ್ರಿಯಾಪದ
  1. ಕಣಕಣವಾಗಿ ಮಾಡು; ಹರಳು ಹರಳಾಗಿಸು: the sugar of this tree is capable of being grained ಈ ಮರದ ಸಕ್ಕರೆಯನ್ನು ಹರಳುಹರಳಾಗಿ ಮಾಡಬಹುದು.
  2. ಗಟ್ಟಿ ಬಣ್ಣ ಹಾಕು; ಗಟ್ಟಿ ಬಣ್ಣ ಕಟ್ಟು: grain a cloth ಬಟ್ಟೆಗೆ ಗಟ್ಟಿ ಬಣ್ಣ ಕಟ್ಟು.
  3. (ಮೇಲ್ಮೈಯನ್ನು) ತರಕಲು ಮಾಡು; ತರಿತರಿಮಾಡು: the stone is grained by being rubbed against another stone ಕಲ್ಲನ್ನು ಇನ್ನೊಂದು ಕಲ್ಲಿನ ಮೇಲೆ ಉಜ್ಜಿ ಅದರ ಮೇಲ್ಮೈಯನ್ನು ತರಕಲು ಮಾಡಲಾಗಿದೆ.
  4. (ಪ್ರಾಣಿಯ ಚರ್ಮದಿಂದ) ಕೂದಲು ತೆಗೆ: he grained a beaver skin ಅವನು ಬೀವರ್‍ ಪ್ರಾಣಿಯ ಚರ್ಮದಿಂದ ಕೂದಲು ತೆಗೆದನು.
  5. (ಯಾವುದೇ ಮೇಲ್ಮೈ ಮೇಲೆ) ಮರದ ಯಾ ಅಮೃತ ಶಿಲೆಯ ಎಳೆಗಳ ವಿನ್ಯಾಸವನ್ನು (ಬಣ್ಣದಲ್ಲಿ) ಚಿತ್ರಿಸು: care should be taken in graining maple ಮೇಪಲ್‍ ದಾರುವಿನ ಮೇಲೆ ಎಳೆಗಳ ರಚನಾ ಮಾದರಿಯನ್ನು ಚಿತ್ರಿಸುವಾಗ ಎಚ್ಚರಿಕೆ ವಹಿಸಬೇಕು.
ಅಕರ್ಮಕ ಕ್ರಿಯಾಪದ

ಕಣಕಣವಾಗು; ಹರಳುಹರಳಾಗು: to make the salt grain better ಲವಣವನ್ನು ಇನ್ನೂ ಹೆಚ್ಚು ಹರಳು ಹರಳಾಗುವಂತೆ ಮಾಡಲು.