See also 2graft  3graft  4graft
1graft ಗ್ರಾಹ್ಟ್‍
ನಾಮವಾಚಕ
  1. ಕಸಿಕೊಂಬೆ; ಕಸಿಟೊಂಗೆ; ಕಸಿಕಾಂಡದ ಸೀಳಿನಲ್ಲಿ ಸೇರಿಸಿದ ಮತ್ತೊಂದರಲ್ಲಿಯೂ ಜೀವರಸ ಹರಿಯುವಂತೆ ಕಟ್ಟಿದ ಕೊಂಬೆ ಯಾ ಕುಡಿ.
  2. (ಶಸ್ತ್ರವೈದ್ಯ) ಕಸಿಕೆ; ಕಸಿ ಮಾಡಿ ಸೇರಿಸಿದ ಊತಕ ಭಾಗ. Figure: grafts
  3. ಕಸಿಕೆ; ಕಸಿ ಮಾಡುವಿಕೆ; ಕಸಿ ಕಟ್ಟುವಿಕೆ.
  4. ಕಸಿ ಜಾಗ; ಕಸಿ ಸ್ಥಳ; ಕಸಿ ಕಟ್ಟಿದ ಸ್ಥಳ; ಕಸಿ ಸಂಯೋಜಿಸಿದ ಸ್ಥಳ.
  5. (ಅಶಿಷ್ಟ) ಕಷ್ಟದ ಕೆಲಸ; ಶ್ರಮದ ದುಡಿಮೆ.
See also 1graft  3graft  4graft
2graft ಗ್ರಾಹ್ಟ್‍
ಸಕರ್ಮಕ ಕ್ರಿಯಾಪದ
  1. (ಕುಡಿ, ಕೊನೆ) ಕಸಿಮಾಡು; ಕಸಿಕಟ್ಟು; ಗೂಟಿಕಟ್ಟು; ಕಲಮುಮಾಡು: to graft an old apple with scions of a better variety ಒಂದು ಹಳೆ ಜಾತಿಯ ಸೇಬನ್ನು ಉತ್ತಮ ತೆರನ ಸೇಬುಗಳೊಡನೆ ಕಸಿಮಾಡಲು.
  2. (ರೂಪಕವಾಗಿ) (ಜೀವಂತಿಕೆಯಿಂದ ಕೂಡಿದ ಯಾ ವಿಚ್ಛೇದ ಮಾಡಲಾಗದ ಏಕತೆಯನ್ನು ರೂಪಿಸುವಂತೆ) ಬೆಸೆ; ಸಂಯೋಜಿಸು; ಕೂಡಿಸು; ಒಳಸೇರಿಸು; ನೆಡು; ಬಿಗಿ: a hopeful ending was grafted on to the story ಆಶಾದಾಯಕ ಮುಕ್ತಾಯವನ್ನು ಕತೆಗೆ ಬೆಸೆಯಲಾಯಿತು.
  3. (ಕಾಂಡದೊಳಗೆ) ಕಸಿ – ನೆಡು, ಇಡು.
  4. (ಶಸ್ತ್ರವೈದ್ಯ) ನೆಡು; ನಾಟಿ ಮಾಡು, ಹಾಕು; (ಸಜೀವ ಅಂಗಾಂಶವನ್ನು) ಕಿತ್ತು ನೆಲೆಗೊಳಿಸು, ತೆಗೆದು ಬೇರೆಯ ಭಾಗಕ್ಕೆ ಯಾ ಬೇರೆಯ ಪ್ರಾಣಿಗೆ ಸಂಯೋಜಿಸು.
  5. (ನೌಕಾಯಾನ) (ಬಳೆ, ಅಗುಳಿ, ಮೊದಲಾದವನ್ನು) ಸಣ್ಣ ಹುರಿಹೆಣಿಗೆಯಿಂದ ಸುತ್ತು.
ಅಕರ್ಮಕ ಕ್ರಿಯಾಪದ
  1. ಕಸಿ(ಗಳನ್ನು) ಒಳಕ್ಕೆ – ಹಾಕು, ಸೇರಿಸು, ಜೋಡಿಸು.
  2. ಕಷ್ಟಪಟ್ಟು ದುಡಿ; ಶ್ರಮಿಸು.
See also 1graft  2graft  4graft
3graft ಗ್ರಾಹ್ಟ್‍
ನಾಮವಾಚಕ

(ಆಡುಮಾತು)

  1. (ರಾಜಕೀಯದ ಯಾ ವ್ಯಾಪಾರದ ಸಂಬಂಧದಲ್ಲಿ ಪಡೆಯುವ) ಅಕ್ರಮ ಲಾಭಗಳು; ಅನ್ಯಾಯದ ಸಂಪಾದನೆ; ಲಂಚ; ರುಷುವತ್ತು: no matter how much graft his subordinates may have garnered ಅವನ ಕೈಕೆಳಗಿನವರು ಎಷ್ಟು ಹೆಚ್ಚಾಗಿ ಲೂಟಿ ಹೊಡೆದಿದ್ದರೂ ಪರವಾಯಿಲ್ಲ.
  2. (ಇವುಗಳನ್ನು ಪಡೆಯಲು ಬಳಸುವ) ದುರಾಚಾರ; ಭಷ್ಟಾಚಾರ; ಮುಖ್ಯವಾಗಿ ಲಂಚ: tried to clear the graft from the government ಸರ್ಕಾರದಿಂದ ಭ್ರಷ್ಟಾಚಾರವನ್ನು ತೆಗೆದುಹಾಕಲು ಯತ್ನಿಸಿದನು.
See also 1graft  2graft  3graft
4graft ಗ್ರಾಹ್ಟ್‍
ಅಕರ್ಮಕ ಕ್ರಿಯಾಪದ
  1. ಅಕ್ರಮ ಲಾಭ ಸಂಪಾದನೆಗೆ ಪ್ರಯತ್ನಿಸು; ಅನ್ಯಾಯದ ಸಂಪಾದನೆಗೆ ಆಸೆಪಡು, ಕೈಹಾಕು.
  2. ಅಕ್ರಮ ಲಾಭ ಸಂಪಾದನೆ ಮಾಡು; ಲಂಚ ತೆಗೆದುಕೊ.