graffito ಗ್ರಾಹೀಟೋ
ನಾಮವಾಚಕ
(ಬಹುವಚನ graffiti ಉಚ್ಚಾರಣೆ ಗ್ರಹೀಟೀ).

(ಸಾಮಾನ್ಯವಾಗಿ ಬಹುವಚನದಲ್ಲಿ)

  1. ಗೀರು ಚಿತ್ರ; ಗೀರು ಬರಹ; ಗೀಚು ಚಿತ್ರ; ಗೋಡೆ ಮೊದಲಾದವುಗಳ ಮೇಲೆ ಗೀಚಿದ ಚಿತ್ರ ಯಾ ಬರಹ.
  2. ಗೀರಲಂಕಾರ; ಬಗೆಬಗೆಯ ಬಣ್ಣಗಳ ಕೆಳಮೈ ಕಾಣುವಂತೆ ಗಿಲಾವಿನ ಮೇಲ್ಪದರದಲ್ಲಿ ಮಾಡಿದ ಗೀರುಗಳ ಅಲಂಕಾರ.