graduation ಗ್ರಾಡ್ಯು(ಜು)ಏಷನ್‍
ನಾಮವಾಚಕ
  1. ಅಳತೆ ಗುರುತಿಸುವಿಕೆ; ಕ್ರಮಾಂಕನ; ಯಾವುದೇ ಮಾಪಕವನ್ನು ಅಳತೆ ಗುರುತುಗಳಿಂದ ವಿಭಜಿಸುವುದು: faulty graduation of the thermometer ತಾಪಮಾಪಕದ ದೋಷಪೂರಿತ ಕ್ರಮಾಂಕನ.
  2. ಅಳತೆ ಗುರುತುಗಳು; ಕ್ರಮಾಂಕಗಳು.
  3. ಪದವಿ ಸ್ವೀಕಾರ; ಶಿಕ್ಷಣದ ಒಂದು ಹಂತದ ವಿಧಿವತ್ತಾದ ಮುಕ್ತಾಯ; (ಮುಖ್ಯವಾಗಿ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯದ) ಡಿಪ್ಲೊಮ, ಯೋಗ್ಯತಾಪತ್ರ, ಯಾ ಪದವಿ – ಸ್ವೀಕಾರ.
  4. (ವಿಶ್ವವಿದ್ಯಾನಿಲಯದ) ಪದವಿದಾನ ಸಮಾರಂಭ; ಡಿಪ್ಲೊಮಾ, ಯೋಗ್ಯತಾಪತ್ರ, ಯಾ ಪದವಿ – ಪ್ರದಾನ.
  5. ವರ್ಗೀಕರಣ; ವರ್ಗವ್ಯವಸ್ಥೆ; ಅಂಶ, ದರ್ಜೆ, ಅಂತಸ್ತು, ಮಜಲು, ವರ್ಗಗಳಾಗಿ ಮಾಡಿದ ವ್ಯವಸ್ಥೆ: the abolition of the graduation rank ವರ್ಗವ್ಯವಸ್ಥೆಯ ರದ್ದಿಯಾತಿ.
  6. ಸಾಧನೆ; ಬೆಳವಣಿಗೆ ಯಾ ಘನತೆಯಲ್ಲಿ ಉನ್ನತಮಟ್ಟಕ್ಕೆ ಏರಿಕೆ; ಉತ್ಕರ್ಷ: his graduation from the most brilliant childhood ಅತ್ಯಂತ ಪ್ರತಿಭಾಪೂರ್ಣ ಶೈಶವದಿಂದ ಏರಿಕೆ.
  7. ಸಾರೀಕರಣ; ದ್ರಾವಣವನ್ನು ಇಂಗಿಸುವ ಮೂಲಕ ಸಾರ ಹೆಚ್ಚಿಸುವಿಕೆ.