See also 2gradual
1gradual ಗ್ರಾಡ್ಯು(ಜು)ಅಲ್‍
ನಾಮವಾಚಕ

(ಕ್ರೈಸ್ತಧರ್ಮ)

  1. (ಪ್ರಭುಭೋಜನ ಆರಾಧನೆಯಲ್ಲಿ ಅಪಾಸಲರ ಪತ್ರಭಾಗಗಳು ಮತ್ತು ಸುವಾರ್ತಾ ಗ್ರಂಥಗಳ ಪಠನಗಳ ಮಧ್ಯೆ ಹಾಡುವ) ಸಂವಾದ ಗೀತ; ಪ್ರತ್ಯುತ್ತರ ಗೀತ.
  2. ಪ್ರಭುಭೋಜನ ಸಂಸ್ಕಾರದ ಸಂಗೀತ ಪುಸ್ತಕ.
See also 1gradual
2gradual ಗ್ರಾಡ್ಯು(ಜು)ಅಲ್‍
ಗುಣವಾಚಕ

ಕ್ರಮಿಕ; ಕ್ರಮಕ್ರಮವಾಗಿ ಬಳಸುವ, ಆಗುವ, ನಡೆಯುವ; ಮೆಟ್ಟಲು ಮೆಟ್ಟಲಾಗಿ, ಹಂತಹಂತವಾಗಿ ಆಗುವ; ನಿಧಾನವಾಗಿ, ಮೆಲ್ಲಮೆಲ್ಲಗೆ, ಕ್ರಮೇಣ – ಮುಂದುವರಿಯುವ; ತ್ವರೆಯಲ್ಲದ; ಥಟಕ್ಕನೆ ಅಲ್ಲದ; ಮೆಲ್ಲಮೆಲ್ಲನೆಯ; ಅನುಕ್ರಮವಾದ: gradual improvement in health ಆರೋಗ್ಯದಲ್ಲಿ ಕ್ರಮೇಣ ಸುಧಾರಣೆ.

ಪದಗುಚ್ಛ

gradual psalm ಸೋಪಾನ ಸ್ತೋತ್ರ; ಮೆಟ್ಟಿಲು ಗೀತ; ಜೆರೂಸಲೆಮ್ಮಿಗೆ ಹೋಗುವ ಮಾರ್ಗದಲ್ಲಿ ಯಾ ಮೌಂಟ್‍ ಸೆಯಾನನ ಯಾ ದೇವಾಲಯದ ಮೆಟ್ಟಲುಗಳನ್ನು ಹತ್ತುವಾಗ ಹೀಬ್ರೂ ಯಾತ್ರಿಕರು ಹಾಡುವ (ಸ್ತೋತ್ರ ಗೀತ ಗ್ರಂಥದಲ್ಲಿ 120ರಿಂದ 134ರ ವರೆಗಿನ) ಹದಿನೈದು ಸ್ತೋತ್ರಗೀತಗಳಲ್ಲೊಂದು (= Song of Degrees).