gradation ಗ್ರಡೇಷನ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) ಪರಿವರ್ತನೆಯ ಯಾ ಮುನ್ನಡೆಯ – ಹಂತ(ಗಳು). ಮಜಲು(ಗಳು), ಮೆಟ್ಟಲು(ಗಳು).
  2. (ಸ್ಥಾನ, ಯೋಗ್ಯತೆ, ತೀಕ್ಷ್ಣತೆ, ವ್ಯತ್ಯಾಸ, ಮೊದಲಾದವುಗಳಲ್ಲಿ) ತಾರತಮ್ಯ; ವರ್ಗಶ್ರೇಣಿ; ವರ್ಗಸರಣಿ: gradations between insect and man ಕೀಟ ಮತ್ತು ಮಾನವನ ಮಧ್ಯೆ ಇರುವ ವರ್ಗಸರಣಿ.
  3. ದರ್ಜೆ; ವರ್ಗ; ಶ್ರೇಣಿ.
  4. ಶ್ರೇಣೀಕರಣ; ದರ್ಜೆ ಅಳವಡಿಸುವಿಕೆ; ಶ್ರೇಣಿಗಳಲ್ಲಿ, ದರ್ಜೆಗಳಲ್ಲಿ ಅಳವಡಿಸುವುದು.
  5. (ಲಲಿತಕಲೆಗಳ ವಿಷಯದಲ್ಲಿ) ಕ್ರಮಿಕ ವ್ಯತ್ಯಾಸ; ಕ್ರಮಕ್ರಮವಾದ ಛಾಯಾಂತರತೆ, ಸ್ವರಾಂತರತೆ, ರೂಪಾಂತರತೆ, ವರ್ಣಾಂತರತೆ, ಮೊದಲಾದವು; ಎದ್ದು ಕಾಣುವಂತೆ ಕ್ರಮೇಣ ಛಾಯಾಂತರ, ಸ್ವರಾಂತರ, ಮೊದಲಾದವನ್ನು ಹೊಂದುವುದು: what curvature is to lines, gradation is to shades and colours ರೇಖೆಗಳಿಗೆ ವಕ್ರತೆ ಹೇಗೋ ಬಣ್ಣಗಳಿಗೂ ಛಾಯೆಗಳಿಗೂ ಅನುಕ್ರಮ ಛಾಯಾಂತರತೆ ಹಾಗೆ.
  6. (ಭಾಷಾಶಾಸ್ತ್ರ) ಸ್ವರವ್ಯತ್ಯಯ.
  7. ಮಟ್ಟಸವಾಗುವಿಕೆ; ಸಮತಲೀಕರಣ; ಹರಿಯುವ ನೀರು, ಹವೆ, ಮೊದಲಾದವುಗಳ ಕ್ರಿಯೆಯಿಂದ ಒಂದು ವಿಸ್ತಾರವಾದ ಪ್ರದೇಶದಲ್ಲಿ ಭೂಮಿ ಹೆಚ್ಚು ಕಡಿಮೆ ಮಟ್ಟಸವಾಗುವಿಕೆ.