See also 2gracious
1gracious ಗ್ರೇಷಸ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಸಂತೋಷದಾಯಕ; ಹಿತವಾದ; ಸುಖಾವಹವಾದ; ಹರ್ಷದಾಯಕ: a gracious gift ಸಂತೋಷದಾಯಕ ಕೊಡುಗೆ.
  2. (ಮುಖ್ಯವಾಗಿ ಕಾವ್ಯದಲ್ಲಿ) ದಯೆಯುಳ್ಳ; ಉಪಕಾರ ಸ್ವಭಾವದ; ಮರ್ಯಾದೆಯ; ವಿನಯಶೀಲ; ವಿನೀತ; ಸೌಜನ್ಯಶೀಲ: he was gracious to all ladies ಆತ ಎಲ್ಲ ಮಹಿಳೆಯರ ವಿಷಯದಲ್ಲಿಯೂ ಸೌಜನ್ಯಶೀಲನಾಗಿದ್ದನು.
  3. (ತನ್ನ ಕೆಳಗಿನವರಿಗೆ) ಅನುಗ್ರಹ ತೋರುವ; ಕೃಪೆದೋರಿ ಉಪಕಾರ ಮಾಡುವ; ಔದಾರ್ಯದ ಸಹನೆ ತೋರುವ; (ಕೆಳಗಿನವರ) ಹಿತಬಯಸುವ.
  4. (ಘನತೆವೆತ್ತ ವ್ಯಕ್ತಿಗಳ ವಿಷಯದಲ್ಲಿ ಯಾ ವ್ಯಂಗ್ಯವಾಗಿ ಯಾ ಹಾಸ್ಯವಾಗಿ, ಮುಖ್ಯವಾಗಿ ರಾಜವಂಶದ ವ್ಯಕ್ತಿಗಳ ಯಾ ಅವರ ಕಾರ್ಯಗಳ ವಿಷಯದಲ್ಲಿ ಗೌರವಸೂಚಕವಾಗಿ ಬಳಸುವ ವಿಶೇಷಣ): the gracious speech from the throne ದೊರೆಯ ಅನುಗ್ರಹ ಭಾಷಣ.
  5. (ದೇವರ ವಿಷಯದಲ್ಲಿ) ಕೃಪೆ ತೋರುವ; ದಯಾಮಯ; ಕೃಪಾಪೂರ್ಣ; ಕರುಣಾಪೂರಿತ.
See also 1gracious
2gracious ಗ್ರೇಷಸ್‍
ಭಾವಸೂಚಕ ಅವ್ಯಯ

(gracious God ಎಂಬುದರಲ್ಲಿ God ಅಧ್ಯಾಹಾರ ಮಾಡಿದ ಪ್ರಯೋಗ) ಕೋಪ ಯಾ ಆಶ್ಚರ್ಯಸೂಚಕ ಉದ್ಗಾರ: good gracious! my gracious! gracious me! gracious goodness!