See also 2grace
1grace ಗ್ರೇಸ್‍
ನಾಮವಾಚಕ
  1. (ಮುಖ್ಯವಾಗಿ ಅಂಗಾಂಗಗಳ ಸೌಷ್ಠವ, ನಡಿಗೆಯ ಠೀವಿ, ಕಾರ್ಯವಿಧಾನ, ಭಾವಭಂಗಿ, ಶೈಲಿ – ಇವುಗಳ ನಯನಾಜೂಕುಗಳಿಗೆ ಸಂಬಂಧಿಸಿದಂತೆ) ಚೆಲುವು; ಚೆಂದ; ಚೆನ್ನು; ಸೊಗಸು; ಲಾವಣ್ಯ; ಲಾಲಿತ್ಯ; ರಮ್ಯತೆ; ಸೊಬಗು; ಬೆಡಗು; ಗಾಡಿ; ವಿಲಾಸ; ಮನೋಹರತೆ; ಮೋಹಕತೆ.
  2. ಒಪ್ಪ; ಔಚಿತ್ಯ; ಮರ್ಯಾದೆ; ಘನತೆ: cannot with any grace ask him ನಾನು ಯಾವುದೇ ಮರ್ಯಾದೆ ಇಟ್ಟುಕೊಂಡು ಅವನನ್ನು ಕೇಳಲಾರೆ. have the grace to do this ಇದನ್ನು ಮಾಡುವ ಘನತೆಯನ್ನು ತೋರು.
  3. (ಯಾವುದೇ ಕೆಲಸ ಮಡುವ) ರೀತಿ; ಧಾಟಿ; ಠೀವಿ.
  4. ಆಕರ್ಷಕ ಲಕ್ಷಣ; ಸೊಗಸು; ಭೂಷಣ; ಅಲಂಕಾರ.
  5. (ಸಂಗೀತ) ಬೆಡಗು ಸ್ವರ; ರಂಜಕ ಸ್ವರ; ಅಲಂಕಾರ ಸ್ವರ; ಸ್ವರಮೇಳಕ್ಕಾಗಲಿ ಮಾಧುರ್ಯಕ್ಕಾಗಲಿ ಅಗತ್ಯವಲ್ಲದ, ಆದರೆ ರಂಜನೆ ಹೆಚ್ಚಿಸುವ ಸ್ವರ.
  6. (ದೊಡ್ಡವರು ತೋರುವ) ಉಪಕಾರ; ಅನುಗ್ರಹ; ಕೃಪೆ; ದಯೆ; ಪ್ರಸಾದ: be in one’s good graces ಯಾವುದೇ ವ್ಯಕ್ತಿಯ ಅನುಗ್ರಹಕ್ಕೆ, ಕೃಪೆಗೆ ಪಾತ್ರನಾಗಿರು; ವ್ಯಕ್ತಿಯ ಪ್ರೀತಿ ಗಳಿಸಿರು.
  7. (ರಿಯಾಯಿತಿ ತೋರಲು ಆಧಾರವಾದ) ವಿಶೇಷ – ಅಭಿಮಾನ, ವಿಶ್ವಾಸ, ಅನುಗ್ರಹ:act of grace ಹಕ್ಕಾಗಿ ಕೇಳಲಾಗದಿರುವ ಸವಲತ್ತು ಯಾ ರಿಯಾಯಿತಿ.
  8. (ಬ್ರಿಟಿಷ್‍ ಪ್ರಯೋಗ) (ಪದವಿ ಸ್ವೀಕರಿಸಲು ಸದಸ್ಯರ ಸಭೆಯ ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ) ಒಪ್ಪಿಗೆ; ಅನುಮತಿ; ಅನುಜ್ಞೆ.
  9. (ವಿಶ್ವವಿದ್ಯಾನಿಲಯದ ಲಿಖಿತ ಶಾಸನಗಳಿಂದ) ವಿನಾಯಿತಿ.
  10. (ದೇವತಾಶಾಸ್ತ್ರ) ಭಗವಂತನ ನಿರ್ವ್ಯಾಜ ಕೃಪೆ, ಅವ್ಯಾಜ ಕರುಣೆ; ದೈವಾನುಗ್ರಹ.
  11. (ದೇವರ) ಉದ್ಧಾರಕ ಕೃಪೆ; ಮುಕ್ತ್ಯನುಗ್ರಹ; ವಿಮೋಚಕ ಕರುಣೆ (ರೂಪಕವಾಗಿ ಸಹ).
  12. (ದೇವತಾಶಾಸ್ತ್ರ) (ಸ್ಫೂರ್ತಿ, ಶಕ್ತಿಗಳನ್ನು ಕೊಟ್ಟು ಆತ್ಮೋನ್ನತಿಯನ್ನುಂಟುಮಾಡುವ) ದೈವ ಪ್ರಭಾವ.
  13. (ದೇವತಾಶಾಸ್ತ್ರ) ದೈವ ಅನುಗ್ರಹಕ್ಕೆ, ಪ್ರಭಾವಕ್ಕೆ, ಕೃಪೆಗೆ – ಒಳಗಾದ ಸ್ಥಿತಿ.
  14. ದೈವದತ್ತ – ಪ್ರತಿಭೆ, ಸಾಮರ್ಥ್ಯ, ಕೌಶಲ, ಮೊದಲಾದವು.
  15. ವಾಯಿದೆ ಮಾಫಿ; ಸಾವಕಾಶ ರಿಯಾಯಿತಿ; ವಾಯಿದೆ ಮೀರಿದ ಸಾವಕಾಶಕ್ಕೆ ಅನುಮತಿ ನೀಡುವ ರಿಯಾಯತಿ; ತಡಮಾಡಲು ಒಪ್ಪಿಗೆ ಕೊಡುವ ಉಪಕಾರ: give a day’s grace (ಪಾವತಿಯ ದಿನ ಮೀರಿ) ಒಂದು ದಿನ ಹೆಚ್ಚಿಗೆ ಅವಧಿ ಕೊಡು.
  16. (ಊಟಕ್ಕೆ ಮೊದಲು ಯಾ ಊಟದ ಬಳಿಕ ಹೇಳುವ) ಸಂಕ್ಷಿಪ್ತ ವಂದನಾರ್ಪಣೆ; ಭೋಜನ ಪ್ರಾರ್ಥನೆ; ಭೋಜನ ವಂದನೆ.
  17. (ಗ್ರೀಕ್‍ ಪುರಾಣ) (Grace) ಸೌಂದರ್ಯದಾತೆ; ಸೌಂದರ್ಯ ಮತ್ತು ಸೊಬಗುಗಳನ್ನು ದಯಪಾಲಿಸುವ ಮೂವರು ಸೋದರಿಯರಲ್ಲಿ ಒಬ್ಬಳು.
  18. (ಕೇಂಬ್ರಿಡ್ಜ್‍ ವಿಶ್ವವಿದ್ಯಾನಿಲಯ) ಸೆನೆಟ್‍ ಯಾ ರೀಜೆಂಟ್‍ ಹೌಸ್‍ನ – ನಿರ್ಣಯ.
  19. ಕ್ಷಮೆ; ಕರುಣೆ; ಕೃಪೆ; ದಯೆ.
ಪದಗುಚ್ಛ
  1. Act of grace (ಪಾರ್ಲಿಮೆಂಟ್‍ ಶಾಸನದ ಮೂಲಕ ಕೊಡುವ) ವಿಧಿವತ್ತಾದ (ಸಾಮಾನ್ಯವಾಗಿ ಸಾರ್ವತ್ರಿಕ) ಕ್ಷಮಾಪಣೆ; ಕ್ಷಮಾ ಕಾನೂನು.
  2. airs and graces (ಗಮನ ಸೆಳೆಯುವುದಕ್ಕಾಗಿ ಯಾ ಆಕರ್ಷಣೆಗಾಗಿ ತೋರುವ) ಒನಪು ಒಯ್ಯಾರ; ಅಂದಚೆಂದ; ಬೆಡಗು ಬಿನ್ನಾಣ(ದ ನಡವಳಿಕೆ).
  3. by the grace of God ದೇವರ ಕೃಪೆಯಿಂದ; ಭಗವದನುಗ್ರಹದಿಂದ (ಮುಖ್ಯವಾಗಿ ದೊರೆಗಳ ಬಿರುದಾವಳಿಗಳಲ್ಲಿ ಸೇರಿಸುವ ಮಾತುಗಳು).
  4. days of grace (ಹುಂಡಿ ಯಾ ಜೀವವಿಮಾ ಕಂತಿನ ವಿಷಯದಲ್ಲಿ) (ಕಾನೂನು ಪ್ರಕಾರವೇ ದೊರಕುವ) ಹೆಚ್ಚಿನ ಗಡವು, ಕಾಲಾವಕಾಶ; ಅಧಿಕಾರವಧಿ.
  5. Her Grace ಮಹಾಮಾನ್ಯೆ; ಡಚೆಸಳ ಬಿರುದನ್ನು ಹೇಳುವಾಗ ಬಳಸುವ ಒಕ್ಕಣೆ.
  6. His Grace ಮಹಾಮಾನ್ಯ; ಡ್ಯೂಕನ ಯಾ ಆರ್ಚ್‍ ಬಿಷಪ್ಪನ ಬಿರುದನ್ನು ಹೇಳುವಾಗ ಬಳಸುವ ಒಕ್ಕಣೆ.
  7. in this year of grace (ಸಾಮಾನ್ಯವಾಗಿ ವ್ಯಂಗ್ಯ ಪ್ರಯೋಗ) ಕ್ರೈಸ್ತಧರ್ಮ ನೆಲೆಸಿ ಇಷ್ಟು ವರ್ಷಗಳಾದ ಮೇಲೂ
  8. state of grace ಕೃಪಾಪಾತ್ರತೆ; ದೈವಕೃಪೆಗೆ ಪಾತ್ರನಾಗಿರುವಿಕೆ.
  9. the Graces (ಗ್ರೀಕ್‍ ಪುರಾಣ) ಸುಂದರ ದೇವತಾ ಸೋದರಿಯರು; ಮೋಹನ ದೇವಿಯರು; ಸೌಂದರ್ಯವನ್ನೂ ಮೋಹಕತೆಯನ್ನೂ ಅನುಗ್ರಹಿಸುವ ಲಾವಣ್ಯವತಿಯರಾದ ಮೂವರು ದೇವಸೋದರಿಯರು (ಅಗ್ಲೇಯ, ಯೂಹ್ರೊಸೈನಿ, ಥೇಲಿಯ).
  10. the graceth year of grace ಕ್ರಿಸ್ತಶಕ... ನೆಯ ಇಸವಿಯಲ್ಲಿ.
  11. with a bad grace ಮನಸ್ಸಿಲ್ಲದೆ; ಇಷ್ಟವಿಲ್ಲದೆ; ಒಲ್ಲದ ಮನಸ್ಸಿನಿಂದ; ಸಮಾಧಾನವಿಲ್ಲದೆ; ಅವಿನಯದಿಂದ: he apologized, but did so with a bad grace ಅವನು ಕ್ಷಮಾಪಣೆ ಕೇಳಿದ, ಆದರೆ ಒಲ್ಲದ ಮನಸ್ಸಿನಿಂದ ಕೇಳಿದ.
  12. with a good grace ಮನಃಪೂರ್ವಕವೆಂಬಂತೆ; ಮನಸ್ಸಿರುವಂತೆ; ಇಷ್ಟವೆಂದು ತೋರುವಂತೆ.
  13. Your Grace (ಡ್ಯೂಕನನ್ನೋ ಡಚೆಸಳನ್ನೋ ಆರ್ಚ್‍ ಬಿಷಪನನ್ನೋ ಸಂಬೋಧಿಸುವಾಗ ಬಳಸುವ ಒಕ್ಕಣೆ) ಮಹಾಮಾನ್ಯರೇ.
ನುಡಿಗಟ್ಟು
  1. fall from grace
    1. (ದೇವತಾಶಾಸ್ತ್ರ) ಪಾಪಕ್ಕೆ ಮತ್ತೆ ಬೀಳು, ಇಳಿ; ಅವಕೃಪೆಗೆ ಗುರಿಯಾಗು; ಅನುಗ್ರಹ ಕಳೆದುಕೊ.
    2. (ಅಧಿಕಾರ ಸ್ಥಾನದಲ್ಲಿರುವ ವ್ಯಕ್ತಿಯ) ವಿಶ್ವಾಸ, ಪ್ರೀತಿ – ಕಳೆದುಕೊ: despite his good connections he fell from grace again ಅವನಿಗೆ ಒಳ್ಳೆಯ ಸಂಬಂಧಗಳಿದ್ದಾಗ್ಯೂ ಅವನು ಪುನಃ (ಮೇಲಧಿಕಾರಿಯ) ವಿಶ್ವಾಸ ಕಳೆದುಕೊಂಡನು.
  2. in someone’s good graces (ಯಾವುದೇ ವ್ಯಕ್ತಿಯ) ಕೃಪೆಗೆ ಪಾತ್ರನಾಗಿರು: I have stayed in her good graces this long ಇಷ್ಟು ಕಾಲವೂ ಅವಳ ಕೃಪೆಗೆ ಪಾತ್ರನಾಗಿ ಉಳಿದಿದ್ದೇನೆ.
  3. have the graces to (ಯಾವುದರದೇ ಬಗ್ಗೆ) ಸಾಕಷ್ಟು ಕರ್ತವ್ಯ ಪ್ರಜ್ಞೆ, ಮರ್ಯಾದೆ – ಹೊಂದಿರು ಯಾ ತೋರು.
See also 1grace
2grace ಗ್ರೇಸ್‍
ಸಕರ್ಮಕ ಕ್ರಿಯಾಪದ
  1. ಶೋಭಿಸುವಂತೆ ಮಾಡು; ಅಲಂಕರಿಸು; ಭೂಷಣವಾಗುವಂತೆ ಮಾಡು; ಅಂದಗೊಳಿಸು: Einstein graced the chair of physics in Princeton ಐನ್‍ಸ್ಟೈನ್‍ ಅವರು ಪ್ರಿನ್ಸ್‍ಟನ್‍ನ ಭೌತವಿಜ್ಞಾನದ ಪೀಠವನ್ನು ಅಲಂಕರಿಸಿದರು.
  2. ಗೌರವ ಕೊಡು; ಪ್ರಶಸ್ತಿ ನೀಡು; (ಬಿರುದು ಮೊದಲಾದವುಗಳಿಂದ) ಸನ್ಮಾನಿಸು: he was graced with the title of Princeps ಅವನು ಪ್ರಿನ್ಸೆಪ್ಸ್‍ ಬಿರುದಿನಿಂದ ಸನ್ಮಾನಿಸಲ್ಪಟ್ಟನು.
  3. ಕೀರ್ತಿತರು; ಗೌರವತರು: discoveries which would have graced a century ಒಂದು ಶತಮಾನಕ್ಕೆ ಕೀರ್ತಿ ತರುವಂಥ ಆವಿಷ್ಕಾರಗಳು.