See also 2grab
1grab ಗ್ರಾಬ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ grabbed, ವರ್ತಮಾನ ಕೃದಂತ Grabbing).
ಸಕರ್ಮಕ ಕ್ರಿಯಾಪದ
  1. ಥಟ್ಟನೆ ಹಿಡಿದುಕೊ; ಫಕ್ಕನೆ ಸೆಳೆದುಕೊ; ತುಡುಕು: he grabbed me by the collar ಅವನು ಕತ್ತುಪಟ್ಟಿಯಿಂದ ನನನ್ನು ಥಟ್ಟನೆ ಹಿಡಿದುಕೊಂಡನು.
  2. ದೋಚು; ಅನ್ಯಾಯದಿಂದ ಕಸಿದಿಟ್ಟುಕೊ, ಕಿತ್ತುಕೊ; ಲೋಭದಿಂದ ಸ್ವಾಧೀನಪಡಿಸಿಕೊ: to grab land ಭೂಮಿಯನ್ನು ದೋಚಿಕೊಳ್ಳಲು.
  3. ಸೆರೆಹಿಡಿ; ವಶಪಡಿಸಿಕೊ; ಬಂಧಿಸು; ಹಿಡಿದು ನಿಲ್ಲಿಸು: a criminal whom we won’t be able to grab in a hurry ನಾವು ಆತುರದಲ್ಲಿ ಬಂಧಿಸಲು ಸಾಧ್ಯವಾಗದ ಅಪರಾಧಿ.
  4. (ಅಶಿಷ್ಟ) (ವ್ಯಕ್ತಿಯ)
    1. ಗಮನಸೆಳೆ.
    2. ಮನಸ್ಸಿಗೆ ಹಿಡಿಸು.
ಅಕರ್ಮಕ ಕ್ರಿಯಾಪದ
  1. ಹಿಡಿಯಲು ಕೈಹಾಕು; ಕೂಡಲೆ ಹಿಡಿದುಕೊ: he grabbed at the opportunity ಅವನು ಅವಕಾಶವನ್ನು ಕೂಡಲೆ ಹಿಡಿದುಕೊಂಡನು.
  2. (ಮೋಟಾರುವಾಹನದ ಬ್ರೇಕಿನ ವಿಷಯದಲ್ಲಿ) ಜೋರಾಗಿ ಯಾ ಥಟ್ಟನೆ ನಿಂತು ಕುಲುಕುವಂತೆ – ಹಿಡಿ, ವರ್ತಿಸು, ಕೆಲಸ ಮಾಡು.
See also 1grab
2grab ಗ್ರಾಬ್‍
ನಾಮವಾಚಕ
  1. ಫಕ್ಕನೆಯ – ಹಿಡಿತ, ಮುಷ್ಟಿ, ತುಡುಕು.
  2. ಥಟ್ಟನೆ ತುಡುಕುವ ಪ್ರಯತ್ನ; ಫಕ್ಕನೆ ಹಿಡಿದುಕೊಳ್ಳುವ ಪ್ರಯತ್ನ.
  3. ಕಸಿದುಕೊಳ್ಳುವ ಅಭ್ಯಾಸ; ತುಡುಕಾಟ; ದೋಚಾಟ.
  4. (ಮುಖ್ಯವಾಗಿ ರಾಜಕೀಯದಲ್ಲಿ ಯಾ ವಾಣಿಜ್ಯದಲ್ಲಿ) ದೋಚಿಕೊಳ್ಳುವ ನಡವಳಿಕೆ; ಅಪಹರಣ ನೀತಿ; ಸುಲಿಗೆಯ – ವರ್ತನೆ, ವ್ಯವಹಾರ.
  5. ಬಂಧಿಸುವವ ಯಾ ಬಂಧಿಸುವಂಥದು; ಸೆರೆ ಹಿಡಿಯುವವ ಯಾ ಸೆರೆ ಹಿಡಿಯುವಂಥದು: land grab ಭೂಮಿ ಕಸಿಯುವವ.
  6. (ಯಂತ್ರಶಾಸ್ತ್ರ) (ಭದ್ರವಾಗಿ ಹಿಡಿದುಕೊಳ್ಳುವ) ಕ್ಲಚ್ಚು; ಹಿಡಿಕೆ.
  7. ದೋಚಿ – ಸ್ಪೀಟು; ಮೇಜಿನಿಂದ ಕೆಲವು ಎಲೆಗಳನ್ನು ಥಟ್ಟನೆ ಎಗರಿಸಿಕೊಳ್ಳುವ ಒಂದು ಬಗೆಯ ಮಕ್ಕಳ ಇಸ್ಪೀಟಾಟ.
ನುಡಿಗಟ್ಟು

up for grabs (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಸುಲಭವಾಗಿ ಸಿಕ್ಕುವ; ಸುಲಭವಾಗಿ ಹಾರಿಸಿಕೊಳ್ಳಬಹುದಾದ: right now every position is up for grabs ಸದ್ಯದಲ್ಲಿ ಎಲ್ಲಾ ಸ್ಥಾನವೂ ಸುಲಭವಾಗಿ ಸಿಕ್ಕುತ್ತದೆ.