governor ಗವರ್ನರ್‍
ನಾಮವಾಚಕ

ಗವರ್ನರು:

  1. ರಾಜ್ಯಪಾಲ; ಆಳುವವನು; ರಾಜ್ಯಭಾರ ಮಾಡುವವನು.
  2. ಮಂಡಲಾಧಿಪತಿ; ಪ್ರಾಂತಾಧಿಪತಿ; ಒಂದು ಪ್ರಾಂತವನ್ನು, ಪಟ್ಟಣವನ್ನು ಆಳಲು ನಿಯಮಿತನಾದ ಅಧಿಕಾರಿ.
  3. (ಬ್ರಿಟಿಷ್‍ ಚಕ್ರಾಧಿಪತ್ಯದಲ್ಲಿ ಸ್ವಯಮಾಡಳಿತ ಪಡೆದಿರುವ) ಡೊಮಿನಿಯನ್ನಿನಲ್ಲಿ ಯಾ ವಸಾಹತಿನಲ್ಲಿ ಸಮ್ರಾಟರ ಪ್ರತಿನಿಧಿ.
  4. (ಅಮೆರಿಕನ್‍ ಪ್ರಯೋಗ ಸಂಯುಕ್ತ ಸಂಸ್ಥಾನಗಳಲ್ಲಿ) ಪ್ರತಿ ಸಂಸ್ಥಾನದ ಗವರ್ನರು, ಕಾರ್ಯಾಧ್ಯಕ್ಷ.
  5. ದುರ್ಗಾಧಿಪತಿ; ಕೋಟೆಯ ಯಾ ಕೋಟೆಯ ಸೈನ್ಯದ ಅಧಿಪತಿ.
  6. (ಒಂದು ಸಂಸ್ಥೆಯ) ಆಡಳಿತ ಮಂಡಳಿಯ ಸದಸ್ಯ ಯಾ ಅಧ್ಯಕ್ಷ.
  7. (ಬಂದೀಖಾನೆಯ) ಮುಖ್ಯಾಧಿಕಾರಿ.
  8. (ಅಶಿಷ್ಟ) ಒಬ್ಬನ ಯಜಮಾನ; ದಣಿ.
  9. (ಒಬ್ಬನ) ತಂದೆ.
  10. (ಸಂಬೋಧನೆಯಲ್ಲಿ) ಸ್ವಾಈ! ಯಜಮಾನರೇ!
  11. (ಯಂತ್ರಶಾಸ್ತ್ರ) ನಿಯಂತ್ರಕ; ಯಂತ್ರದ ಚಲನೆ ಒಂದೇ ಸಮನಾಗಿರುವಂತೆ ಅದಕ್ಕೆ ಒದಗಿಸುವ ಅನಿಲ, ಹಬೆ, ನೀರು, ಮೊದಲಾದವನ್ನು ನಿಯಂತ್ರಿಸುವ ಸಾಧನ.
  12. ಒಂದು ಬಗೆಯ ಗಾಳದ ನೊಣ.