government ಗವರ್ನ್‍ಮೆಂಟ್‍, ಗವಮಂಟ್‍
ನಾಮವಾಚಕ
  1. = governance.
  2. ಆಧಿಪತ್ಯ; ರಾಜ್ಯ; ಪ್ರಾಂತ ರಾಜ್ಯಪಾಲರು ಆಳುತ್ತಿರುವ ದೇಶಭಾಗ, ಪ್ರಾಂತ.
  3. ಆಡಳಿತ – ವ್ಯವಸ್ಥೆ, ಕ್ರಿಯೆ ಯಾ ಕ್ರಮ.
  4. ರಾಜ್ಯ (ಶಾಸನ) ಪದ್ಧತಿ.
  5. ಸರ್ಕಾರ; ಮಂತ್ರಿಮಂಡಲ; ಸಚಿವ ಸಂಪುಟ.
  6. (ವ್ಯಾಕರಣ) ಅನ್ವಯ; ಆಕಾಂಕ್ಷೆ; ಒಂದು ಪದಕ್ಕೂ ಅದರ ಆಶ್ರಯವಾದ ಇನ್ನೊಂದು ಪದಕ್ಕೂ ಇರುವ ಸಂಬಂಧ.
ಪದಗುಚ್ಛ
  1. form a Government (ಪ್ರಧಾನಮಂತ್ರಿಯ ವಿಷಯದಲ್ಲಿ) ಸಚಿವ ಸಂಪುಟ ರಚಿಸು; ಮಂತ್ರಿಮಂಡಲ ಏರ್ಪಡಿಸು; ಸರ್ಕಾರ ರಚಿಸು.
  2. Government House ರಾಜ್ಯಪಾಲ ಭವನ; ರಾಜ್ಯಪಾಲರ ಅಧಿಕೃತ ನಿವಾಸ.
  3. Government paper, securities ಸರ್ಕಾರದ ಸಾಲಪತ್ರಗಳು, ಖಜಾನೆಯ ಹುಂಡಿಗಳು, ಮೊದಲಾದವು.