govern ಗವರ್ನ್‍
ಸಕರ್ಮಕ ಕ್ರಿಯಾಪದ
  1. (ಹಕ್ಕಿನಿಂದ) ಆಳು; ಆಧಿಪತ್ಯ ನಡೆಸು.
  2. ಆಡಳಿತ, ಅಧಿಕಾರ ನಡೆಸು, ನಿರ್ವಹಿಸು; ರಾಜ್ಯಭಾರ ಮಾಡು; (ಸರ್ಕಾರದ, ಪ್ರಜೆಗಳ) (ನೀತಿನಿಯಮ, ಕಾರ್ಯ ಕಲಾಪಗಳು, ಕಾರುಬಾರು, ಮೊದಲಾದವನ್ನು) ನಿರಂಕುಶವಾಗಿ ಯಾ ಸಂವಿಧಾನಾತ್ಮಕವಾಗಿ ನಡೆಸು, ನಿರ್ವಹಿಸು.
  3. (ಒಂದು ಸಂಸ್ಥೆ ಮೊದಲಾದವುಗಳ) ಕಾರ್ಯನಿರ್ವಹಿಸು; ಕೆಲಸ ಕಾರ್ಯಗಳನ್ನು, ಕಾರ್ಯಕ್ರಮಗಳನ್ನು ನಿಯಮಬದ್ಧವಾಗಿ ನಡೆಸು.
  4. (ಕೋಟೆಯ, ಪಟ್ಟಣದ ಮೇಲೆ) ಸೈನಿಕಾಧಿಕಾರ ಹೊಂದಿರು, ಪಡೆದಿರು.
  5. (ವ್ಯಕ್ತಿ, ಅವನ ಕಾರ್ಯಗಳು, ಘಟನೆಗಳ ಗತಿ, ಪರಿಣಾಮ, ಮೊದಲಾದವನ್ನು) ಆಳು; ನಿಯಂತ್ರಿಸು; ಪ್ರಭಾವಗೊಳಿಸು; ವ್ಯವಸ್ಥೆಗೊಳಿಸು; ರೂಪಿಸು; ನಿಶ್ಚಯಿಸು.
  6. (ಕಾರ್ಯಾವಳಿ) ನಡೆಸು; ನಿರ್ದೇಶಿಸು.
  7. (ಆತ್ಮಾರ್ಥಕ) (ಯಾವುದೋ ಒಂದು ರೀತಿಯಲ್ಲಿ) ನಡೆದುಕೊ; ವರ್ತಿಸು: let him know how to govern himself ತಾನು ಹೇಗೆ ನಡೆದುಕೊಳ್ಳಬೇಕೆಂಬುದನ್ನು ಅವನು ಅರಿತುಕೊಳ್ಳಲಿ.
  8. (ಕೋಪ ಮೊದಲಾದವನ್ನು) ಅಡಗಿಸು; ನಿಗ್ರಹಿಸು; ದಮನ ಮಾಡು.
  9. (ತನ್ನನ್ನು ತಾನು) ನಿಯಂತ್ರಿಸು; ಹತೋಟಿಯಲ್ಲಿಟ್ಟುಕೊ: govern one’s temper ಕೋಪವನ್ನು ಹತೋಟಿಯಲ್ಲಿಟ್ಟುಕೊ.
  10. (ವ್ಯವಹಾರ ನಿರ್ಣಯದಲ್ಲಿ ಯಾವುದೋ ಒಂದಕ್ಕೆ) ನಿರ್ಣಾಯಕವಾಗಿರು; ಶಾಸನವಾಗಿ, ವಿಧಿಯಾಗಿ, ಸೂತ್ರವಾಗಿ, ತತ್ತ್ವವಾಗಿ – ಇರು.
  11. (ವ್ಯವಹಾರ ನಿರ್ಣಯದಲ್ಲಿ ಒಂದು ಸಂದರ್ಭ ಇನ್ನೊಂದಕ್ಕೆ) ಅನ್ವಯವಾಗು; ಅನ್ವಯಿಸುವಂತಿರು: the law stated there clearly governs this case ಅಲ್ಲಿ ಉಲ್ಲೇಖಿಸಿರುವ ಕಾನೂನು (ಕಾಯಿದೆ) ಈ ಮೊಕದ್ದಮೆಗೆ ಸ್ಪಷ್ಟವಾಗಿ ಅನ್ವಯಿಸುತ್ತದೆ.
  12. (ವ್ಯಾಕರಣ) ನಾಮಪದದೊಡನೆ, ವಿಭಕ್ತಿಯೊಡನೆ – ಅನ್ವಯವಾಗು, ಅನ್ವಯಿಸು: a transitive verb governs a noun in the objective case ಸಕರ್ಮಕ ಕ್ರಿಯಾಪದವು ದ್ವಿತೀಯಾ ವಿಭಕ್ತಿಯ ನಾಮಪದದೊಡನೆ ಅನ್ವಯವಾಗುತ್ತದೆ.
ಅಕರ್ಮಕ ಕ್ರಿಯಾಪದ
  1. (ಕೋಟೆಯನ್ನು, ಪಟ್ಟಣವನ್ನು) ಸೈನಿಕ ಅಧಿಕಾರದಿಂದ ಆಳು.
  2. ಸ್ವತಃ ಆಳು; ಸರ್ಕಾರದ ಆಡಳಿತ ನಡೆಸು: the king reigns but does not govern ರಾಜ ಪ್ರಭುತ್ವ ನಡೆಸುತ್ತಾನೆ ಆದರೆ ಸರ್ಕಾರ ನಡೆಸುವುದಿಲ್ಲ; ರಾಜ ದೊರೆತನ ಮಡುತ್ತಾನೆ, ಆದರೆ ರಾಜ್ಯಭಾರ ಮಾಡುವುದಿಲ್ಲ, ಸ್ವತಃ ಆಳುವುದಿಲ್ಲ (ಎಂದರೆ ತಾನೇ ಆಡಳಿತ ನಡೆಸದೆ, ಆಡಳಿತಗಾರರನ್ನು ನೇಮಿಸುತ್ತಾನೆ).
  3. ಪ್ರಬಲ ವ್ಯಾಪ್ತಿಯುಳ್ಳದ್ದಾಗಿರು; ಕೈಮೇಲಾಗಿರು; ವಿಶೇಷ ಪ್ರಭಾವ ಬೀರು: yet chance will govern at last ಕಟ್ಟಕಡೆಯಲ್ಲಿ ಅದೃಷ್ಟದ ಕೈಯೇ ಮೇಲಾಗುತ್ತದೆ.