gout ಗೌಟ್‍
ನಾಮವಾಚಕ
  1. ಸಂಧಿವಾತ; ದೇಹದ ಸಣ್ಣ ಕೀಲುಗಳು (ಮುಖ್ಯವಾಗಿ ಕಾಲಿನ ಹೆಬ್ಬೆಟ್ಟು) ಊದಿ, ಕೀಲುಗಳಲ್ಲಿ ಸೀಮೆಸುಣ್ಣದಂಥ ಉಂಡೆಗಳುಂಟಾಗಿ ಥಟ್ಟನೆ ಕೆರಳುವ ಒಂದು ರೋಗ.
  2. ಗೌಟ್‍ ರೋಗ; (ಗೌಟ್‍ ನೊಣಗಳ ಮೂಲಕ) ಗೋದಿಗೆ ತಗಲುವ ಒಂದು ತೆರದ ರೋಗ.
  3. (ಮುಖ್ಯವಾಗಿ ರಕ್ತದ) ತೊಟ್ಟು; ಕಲೆ; ಹನಿ.
  4. ಚೆಲ್ಲಿದ್ದು; ಸಿಂಚಿತ; ಚಿಮುಕಿಸಿದ್ದು.
ಪದಗುಚ್ಛ
  1. poor man’s gout ಅಲ್ಪಾಹಾರದಿಂದ ಹುಟ್ಟುವ ಒಂದು ತೆರದ ಸಂಧಿವಾತರೋಗ.
  2. rich man’s gout ಅತ್ಯಾಹಾರ ಮತ್ತು ಕುಡಿತದಿಂದ ಬರುವುದೆಂದು ಹೇಳುವ ಒಂದು ತೆರದ ವಾತರೋಗ.