See also 2gouge
1gouge ಗೌ(ಗೂ)ಜ್‍
ನಾಮವಾಚಕ
  1. (ಮರಗೆಲಸ, ಶಿಲ್ಪಕಲೆ, ಶಸ್ತ್ರಚಿಕಿತ್ಸೆಗಳಲ್ಲಿ ಬಳಸುವ) ಉಗುರುಳಿ; ಒಳಬಾಗಿದ ಅಲುಗುಳ್ಳ ಉಳಿ. Figure: gouges
  2. (ಮರ, ಲೋಹ, ಮೊದಲಾದವುಗಳ ಮೇಲೆ ಉಳಿಯಿಂದ ಮಾಡಿದ) ಗಾಡಿ; ತೋಡು; ಜಾಡು; ಉಳಿ ತೋಡು.
  3. (ಅಮೆರಿಕನ್‍ ಪ್ರಯೋಗ) (ಆಡುಮಾತು) ಕಳ್ಳತನ ಯಾ ಮೋಸ.
See also 1gouge
2gouge ಗೌ(ಗೂ)ಜ್‍
ಸಕರ್ಮಕ ಕ್ರಿಯಾಪದ
  1. (ಉಗುರುಳಿಯಿಂದ) ಕೆತ್ತು; ಕತ್ತರಿಸು.
  2. (ಕಾರ್ಕನ್ನು, ನಾಳಿಗುಂಡಿಯನ್ನು ಉಗುರುಳಿಯಿಂದಲೋ ಎಂಬಂತೆ) ಕೆತ್ತು; ತೋಡು.
  3. (ಮುಖ್ಯವಾಗಿ ಒಬ್ಬನ ಕಣ್ಣನ್ನು ಹೆಬ್ಬೆಟ್ಟಿನಿಂದ ಈಟಿ) ಕೀಳು; ಕಿತ್ತುಹಾಕು.
  4. (ಅಮೆರಿಕನ್‍ ಪ್ರಯೋಗ) (ಆಡುಮಾತು)
    1. ದಗಾ ಹಾಕು; ಮೋಸ ಮಾಡು.
    2. ಹಣ ಕೀಳು; ದುಡ್ಡು ದೋಚು.
ಅಕರ್ಮಕ ಕ್ರಿಯಾಪದ

(ಆಸ್ಟ್ರೇಲಿಯ) ಓಪಲ್‍ ಶಿಲೆಗಾಗಿ (ನೆಲ, ಭೂಮಿ) ಅಗೆ.