See also 2gossip
1gossip ಗಾಸಿಪ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಗೆಳತಿ; ಸಲಿಗೆಯ, ಆಪ್ತ, ಪರಿಚಿತ ವ್ಯಕ್ತಿ (ಮುಖ್ಯವಾಗಿ ಹೆಂಗಸು).
  2. ಹರಟಾಳಿ ಹರಟೆಮಲ್ಲ(ಲ್ಲಿ); ಸುದ್ದಿಮಲ್ಲ(ಲ್ಲಿ); ಗೊಡ್ಡು ಹರಟೆಯ ಸುದ್ದಿ ಹೇಳುವ ವ್ಯಕ್ತಿ (ಮುಖ್ಯವಾಗಿ ಹೆಂಗಸು).
  3. ಗೊಡ್ಡುಹರಟೆ; ಕಾಡುಹರಟೆ; ಬುಡವಿಲ್ಲದ ಗಾಳಿಮಾತು; ಬೀದಿ ಮಾತು; (ಮುಖ್ಯವಾಗಿ ವ್ಯಕ್ತಿಗಳ ಯಾ ಸಾಮಾಜಿಕ ಘಟನೆಗಳ ವಿಷಯವಾಗಿ) ಸಲೀಸಾಗಿ ಅಡ್ಡಿ ಆತಂಕವಿಲ್ಲದೆ ಆಡುವ ಮಾತು, ಬರೆಯುವ ಬರವಣಿಗೆ ಯಾ ಹರಟೆ.
See also 1gossip
2gossip ಗಾಸಿಪ್‍
ಅಕರ್ಮಕ ಕ್ರಿಯಾಪದ
  1. ಹರಟೆಹೊಡಿ; ಹರಟೆಕೊಚ್ಚು; (ಕೆಲಸವಿಲ್ಲದೆ ಕುಳಿತು, ಸಲೀಸಾಗಿ, ಹಗುರವಾಗಿ) ಹರಟು; ಜೊಳ್ಳು ಮಾತನಾಡು.
  2. ಹರಟೆಯ ಶೈಲಿಯಲ್ಲಿ ಬರೆ.