gospel ಗಾಸ್ಪಲ್‍
ನಾಮವಾಚಕ
  1. (ಕ್ರಿಸ್ತನು ಉಪದೇಶಿಸಿದ) ಶುಭನುಡಿ; ಸುವಾರ್ತೆ; ಒಸಗೆ (ನುಡಿ); ಒಳ್ನುಡಿ.
  2. ಕ್ರಿಸ್ತನ ಮತ್ತು ಅವನ ಅಪಾಸಲರ ಮತ, ತತ್ತ್ವ.
  3. ಕ್ರೈಸ್ತ ವೇದ; ದೈವೋಕ್ತ ಶಾಸ್ತ್ರ.
  4. ಪ್ರಾಟೆಸ್ಟೆಂಟ್‍ (ಮತ) ತತ್ತ್ವ ಯಾ ‘ಇವ್ಯಾಂಜಲಿಕಲ್‍’ ತತ್ತ್ವ.
  5. (Gospel) (ಹೊಸ ಒಡಂಬಡಿಕೆಯ ನಾಲ್ಕು ಅಪಾಸಲರ ಗ್ರಂಥಗಳಲ್ಲಿ ಪ್ರಕಟವಾಗಿರುವ) ಕ್ರಿಸ್ತನ ಜೀವನ ಚರಿತ್ರೆ.
  6. ಆ (ನಾಲ್ಕು) ಸುವಾರ್ತೆಗಳಲ್ಲೊಂದು.
  7. (ಪ್ರಭುಭೋಜನ ಸಂಸ್ಕಾರ ಕಾಲದಲ್ಲಿ ಓದುವ) ಸುವಾರ್ತೆಗಳ ಒಂದು ಭಾಗ.
  8. ಪರಮಸತ್ಯ; ಸತ್ಯಸ್ಯ ಸತ್ಯ; ವೇದವಾಕ್ಯ; ಸಂಶಯವಿಲ್ಲದೆ ಧೈರ್ಯವಾಗಿ ನಂಬಬಹುದಾದದ್ದು: takes his dreams for gospel ತನ್ನ ಕನಸುಗಳೇ ವೇದವಾಕ್ಯಗಳೆಂದು ನಂಬುತ್ತಾನೆ.
  9. (ಒಬ್ಬನು ಆಚರಿಸುವ, ನಂಬಿರುವ ಯಾ ಉಪದೇಶಿಸುವ) ಆದರ್ಶ; ಅಭಿಮತ; ತತ್ವ; ವಿಚಾರ: the gospel of efficiency ಕಾರ್ಯದಕ್ಷತೆಯೆಂಬ ಆದರ್ಶ. gospel of soap and water ಸ್ವಚ್ಛತೆಯ ತತ್ತ್ವ; ಸೋಪು ನೀರಿನ ತತ್ತ್ವ.
  10. = gospel song.
ಪದಗುಚ್ಛ

gospel oath ಗಾಸ್ಪೆಲ್‍ ಪ್ರಮಾಣ; ಸುವಾರ್ತೆ ಆಣೆ; ಸುವಾರ್ತೆಗಳ ಸಾಕ್ಷಿಯಾಗಿ ಮಾಡಿದ ಪ್ರಮಾಣ, ಆಣೆ.