See also 2gorge  3gorge
1gorge ಗಾರ್ಜ್‍
ನಾಮವಾಚಕ
  1. (ಅಲಂ.) ಒಳಗಂಟಲು.
  2. ನುಂಗಿದ್ದು; ಕಬಲಿತ; ಜಠರಸ್ಥ; ಹೊಟ್ಟೆಯಲ್ಲಿರುವುದು; ಹೊಟ್ಟೆಯಲ್ಲಿರುವ ಪದಾರ್ಥಗಳು.
  3. (ಕೋಟೆ) ಬುರುಜು ಬಾಗಿಲು; ಬುರುಜಿನ ಯಾ ಇತರ ಹೊರ ರಕ್ಷಕದಿಂದ ಹೊರಕ್ಕೆ ಯಾ ಒಳಕ್ಕೆ ಹೋಗುವ ಭಾಗ.
  4. ಹಿಂಬಾಗಿಲು; ರಕ್ಷಣಾವರಣದ ಹಿಂದುಗಡೆಯ ಮಾರ್ಗ, ಪ್ರವೇಶ.
  5. (ಬೆಟ್ಟಗಳ ನಡುವಣ, ಸಾಮಾನ್ಯವಾಗಿ ಹೊಳೆ ಹರಿಯುತ್ತಿರುವ) ಕಮರಿ.
  6. ಗಾಳದ ಎರೆ(ಯಾಗಿ ಬಳಸುವ ಗಟ್ಟಿವಸ್ತು).
  7. (ಅಮೆರಿಕನ್‍ ಪ್ರಯೋಗ) ಅಡಚು; ಕಿರಿದಾದ ದಾರಿಯನ್ನು ಮುಚ್ಚಿರುವ ಮಂಜುಗಡ್ಡೆ ಮೊದಲಾದವು.
ನುಡಿಗಟ್ಟು
  1. cast the gorge at ಜುಗುಪ್ಸೆಯಿಂದ, ಅಸಹ್ಯದಿಂದ, ಹೇಸಿಕೆಯಿಂದ – ತಳ್ಳಿಬಿಡು, ಹೊರಹಾಕು, ನೂಕಿಬಿಡು; ಓಕರಿಸಿ ಕಕ್ಕಿಬಿಡು.
  2. heave the gorge (ವಾಂತಿಯಾಗುವುದೋ ಎಂಬಂತೆ) ಓಕರಿಸು.
  3. one’s gorge rises at ನೋಡಿದರೆ ಬಹಳ ಅಸಹ್ಯ, ಜುಗುಪ್ಸೆ ಹುಟ್ಟುತ್ತದೆ; ಕಂಡರೆ ಹೊಟ್ಟೆ ತೊಳಸುತ್ತದೆ.
See also 1gorge  3gorge
2gorge ಗಾರ್ಜ್‍
ಸಕರ್ಮಕ ಕ್ರಿಯಾಪದ
  1. ಕಂಠಪೂರ್ತಿ ತಿನ್ನು; ಕಟ್ರೆಯಾಗುವಂತೆ, ಹೊಟ್ಟೆ ಬಿರಿಯುವಂತೆ ಉಣ್ಣು.
  2. ಗಬಗಬನೆ – ನುಂಗು, ಕಬಳಿಸು, ಮುಕ್ಕು.
  3. ಅಡಚು.
  4. ಹಿಗ್ಗುವಷ್ಟು, ಬಿರಿಯುವಷ್ಟು – ತುಂಬು.
  5. ಭರ್ತಿ ತುಂಬು.
ಅಕರ್ಮಕ ಕ್ರಿಯಾಪದ

(ಅತಿ ಆಶೆಯಿಂದ) ಸಿಕ್ಕಾಪಟ್ಟೆ ತಿನ್ನು; ಹೊಟ್ಟೆಬಾಕನಂತೆ ಉಣ್ಣು.

See also 1gorge  2gorge
3gorge ಗಾರ್ಜ್‍
ನಾಮವಾಚಕ

ಗಬಗಬನೆ ತಿನ್ನುವುದು; ಮಿತಿಮೀರಿ, ಕಟ್ಟರೆಯಾಗುವಂತೆ ಉಣ್ಣುವುದು.