See also 2goose
1goose ಗೂಸ್‍
ನಾಮವಾಚಕ

(5ನೆ ಅರ್ಥದಲ್ಲಿ ಹೊರತು ಬಹುವಚನ geese).

  1. ಹೆಬ್ಬಾತು; ವರಟೆ; ತಾಡಿಗ್ಯ.
  2. ಹೆಣ್ಣು ವರಟೆ.
  3. ವರಟೆಯ ಮಾಂಸ.
  4. ಮೊದ್ದುಮಣಿ; ಹೆಡ್ಡ; ಗಾಂಪ; ದಡ್ಡ; ಮಡ್ಡಿ.
  5. (ಬಹುವಚನ goose) (ಬಾತಿನ ಕತ್ತಿನಂತೆ ಹಿಡಿಯುಳ್ಳ ದರ್ಜಿಯವನ) ಇಸ್ತ್ರಿ ಪೆಟ್ಟಿಗೆ.
ನುಡಿಗಟ್ಟು
  1. all his geese are swans ತನ್ನದಕ್ಕೆ, ತನ್ನ ಯೋಜನೆಗಳು, ಸ್ನೇಹಿತರು ಮೊದಲಾದವಕ್ಕೆ – ಮಿತಿಈರಿದ ಬೆಲೆ ಕಟ್ಟುತ್ತಾನೆ; ತನ್ನ ಗೊಡ್ಡು ಹಸುವನ್ನೇ ಕಾಮಧೇನು ಅನ್ನುತ್ತಾನೆ; ತನ್ನ ಬಾತುಗಳನ್ನೇ ರಾಜಹಂಸಗಳೆನ್ನುತ್ತಾನೆ.
  2. $^2$cook person’s goose.
  3. kill the goose that lays the golden eggs ಇಂದಿನ ಲೋಭಕ್ಕೆ ಮುಂದಿನ ಲಾಭವನ್ನು ಬಲಿಕೊಡು.
  4. sauce for goose is sauce for gander.
  5. can’t say $^1$boo to a goose.
See also 1goose
2goose ಗೂಸ್‍
ಸಕರ್ಮಕ ಕ್ರಿಯಾಪದ

(ಅಶಿಷ್ಟ) ವ್ಯಕ್ತಿಯನ್ನು ಮರ್ಮ ಸ್ಥಾನದಲ್ಲಿ, ಮುಖ್ಯವಾಗಿ ಜನನಾಂಗದಲ್ಲಿ ಯಾ ಗುದದ್ವಾರದಲ್ಲಿ – ತಿವಿ, ಚುಚ್ಚು: as she was bending over her work-table..., a playful lab assistant goosed her ಅವಳು ತನ್ನ ಕೆಲಸದ ಮೇಜಿನ ಮೇಲೆ ಬಗ್ಗುತ್ತಿದ್ದಂತೆ ಕೀಟಲೆಯ ಪ್ರಯೋಗಾಲಯ ಸಹಾಯಕನು ಅವಳ ಗುದವನ್ನು ತಿವಿದ.