See also 2goof
1goof ಗೂಹ್‍
ನಾಮವಾಚಕ

(ಅಶಿಷ್ಟ)

  1. ಪೆದ್ದ; ದಡ್ಡ.
  2. (ಮುಖ್ಯವಾಗಿ ಅಜಾಗರೂಕತೆಯಿಂದ ಉಂಟಾದ) ತಪ್ಪು; ಎಡವಟ್ಟು.
See also 1goof
2goof ಗೂಹ್‍
ಸಕರ್ಮಕ ಕ್ರಿಯಾಪದ

(ಅಶಿಷ್ಟ)

  1. (ಕೆಲಸವನ್ನು) ಹೊಲಸೆಬ್ಬಿಸು; ಹಾಳುಮಾಡು; ಹಗರಣ ಮಾಡು; ಗಲಿಬಿಲಿ ಮಾಡು; ಎಡವಟ್ಟು ಮಾಡು: he goofed up one opportunity after another ಅವನು ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಹಾಳುಮಾಡಿಕೊಂಡ.
  2. (ಭೂತಕೃದಂತದಲ್ಲಿ) ಮಾದಕ ವಸ್ತುಗಳಿಂದ, ನಶೀಲಿ ಪದಾರ್ಥಗಳಿಂದ ಮತ್ತು ಬರಿಸು.
ಅಕರ್ಮಕ ಕ್ರಿಯಾಪದ

(ಅಶಿಷ್ಟ)

  1. ತಪ್ಪುಮಾಡು; ಎಡವಟ್ಟು ಮಾಡಿಕೊ; ಅವಿವೇಕ ಮಾಡು.
  2. ಕಾಲಕಳೆ; ಕಾಲಹರಣ ಮಾಡು: we just goofed around till train time ರೈಲಿನ ವೇಳೆಯ ತನಕ ನಾವು ಸುಮ್ಮನೆ ಕಾಲಕಳೆದೆವು.