goodwill ಗುಡ್‍ವಿಲ್‍
ನಾಮವಾಚಕ
  1. (ವ್ಯಕ್ತಿಯ ಬಗ್ಗೆ) ಸೌಹಾರ್ದ; ಸದಾಶಯ; ಪ್ರಸನ್ನತೆ; ಒಳ್ಳೆಯ ಮನೋಭಾವ; ಸದ್ಭಾವನೆ; ವಿಶ್ವಾಸ; ಪ್ರೀತಿ; ಅಭಿಮಾನ.
  2. (ಒಬ್ಬನಿಗೆ ಮಾಡುವ) ಉಪಕಾರ; ಸಹಾಯ; ಅನುಗ್ರಹ.
  3. (ಸಂತೋಷದಿಂದ ನೀಡಿದ) ಒಪ್ಪಿಗೆ; ಸಮ್ಮತಿ; ಅನುಮೋದನೆ.
  4. ಹಾರ್ದಿಕತೆ; ಹೃತ್ಪೂರ್ವಕತೆ.
  5. ಉತ್ಸಾಹ; ಹುರುಪು.
  6. (ವ್ಯಾಪಾರ ಮೊದಲಾದವುಗಳಲ್ಲಿ ಸ್ಥಾಪಿತವಾಗಿರುವ) ಪ್ರಖ್ಯಾತಿ; ಒಳ್ಳೆಯ ಹೆಸರು; ಹೆಸರು ಮತ್ತು ಗಿರಾಕಿ.
  7. ವ್ಯಾಪಾರದ ಹಕ್ಕು; ವ್ಯಾಪಾರ ವಹಿವಾಟನ್ನು ಮಾರಿಬಿಡುವವನು ತನ್ನ ಉತ್ತರಾಧಿಕಾರಿಯಾಗಿ ವ್ಯಾಪಾರ ನಡೆಸಲು ಕೊಳ್ಳುವವನಿಗೆ ನೀಡುವ ಹಕ್ಕು.
  8. ಪಗಡಿ; ವ್ಯಾಪಾರದ ಹಕ್ಕನ್ನು ಬಿಟ್ಟುಕೊಡಲು ಕೊಡುವ ಹಣ.