goodness ಗುಡ್‍ನಿಸ್‍
ನಾಮವಾಚಕ
  1. ಒಳ್ಳೆಯತನ; ಸುಗುಣ; ಸದ್ಗುಣ.
  2. ಶ್ರೇಷ್ಠತೆ; ಸ್ವಂತದ ಯಾ ಹೋಲಿಕೆಯಿಂದ ಕಾಣುವ ಹೆಚ್ಚುಗಾರಿಕೆ.
  3. ಸಹಾಯ; ಉಪಕಾರ; ದಯೆ: have the goodness to do ದಯೆಮಾಡಿ ಇಷ್ಟು ಮಾಡು.
  4. ಔದಾರ್ಯ.
  5. (ವಸ್ತುವಿನ, ವಿಷಯದ) ತಿರುಳು; ಹುರುಳು; ಸಾರ; ಸತ್ತ್ವ; ಶಕ್ತಿ.
  6. (ಉದ್ಗಾರಗಳಲ್ಲಿ God ಎಂಬುದಕ್ಕೆ ಪ್ರತಿಯಾಗಿ ಬಳಸುವ ಮಾತಾಗಿ) ದೇವರು: goodness knows ದೇವರೇ ಬಲ್ಲ! ದೇವರಿಗೇ ಗೊತ್ತು! thank goodness! ದೇವರ ದಯೆ! ದೇವರು ಕಾಪಾಡಿದ!
ಪದಗುಚ್ಛ
  1. for goodness’ sake ನಿನ್ನ ಪುಣ್ಯಕ್ಕೆ; ನಿನ್ನ ಧರ್ಮಕ್ಕೆ; ನಿನ್ನ ದಮ್ಮಯ್ಯ; ದೇವರ ಹೆಸರಿನಲ್ಲಿ ನಿನ್ನನ್ನು ಬೇಡಿಕೊಳ್ಳುತ್ತೇನೆ.
  2. goodness gracious! (ಆಶ್ಚರ್ಯವನ್ನು, ಅನ್ಯಾಯದ ವಿರುದ್ಧ ಕೋಪವನ್ನು ಸೂಚಿಸುವ ಉದ್ಗಾರ) ಅಯ್ಯೋ ದೇವರೆ!
  3. goodness me! = ಪದಗುಚ್ಛ \((2)\).
  4. I wish to goodness ದೇವರನ್ನು ಬೇಡಿಕೊಳ್ಳುತ್ತೇನೆ.