gone ಗಾನ್‍
ಗುಣವಾಚಕ
  1. ಅಗಲಿದ; ಹೋದ; ಗತ; ನಿರ್ಗತ.
  2. ಹಾಳಾದ; ಕೈತಪ್ಪಿದ; ಆಸೆ ಬಿಟ್ಟ; ನಷ್ಟವಾದ; ಕೆಟ್ಟುಹೋದ: a gone man ಬಾಳು ಹಾಳು ಮಾಡಿಕೊಂಡ ಮನುಷ್ಯ; ಪೂರ್ತಿ ಕೆಟ್ಟು ಹೋದವನು. a gone case ತೀರ ಕೆಟ್ಟುಹೋದ ವ್ಯವಹಾರ; ಕೈತಪ್ಪಿದ ವ್ಯವಹಾರ.
  3. ಸತ್ತು ಹೋದ; ಗತಿಸಿದ; ಮೃತ: limbs of the gone wretch ಸತ್ತ ಪಾಪಿಯ ಅವಯವಗಳು.
  4. (ಕಾಲದ ವಿಷಯದಲ್ಲಿ) ಕಳೆದ; ಆಗಿ ಕಳೆದು ಹೋದ; ಸಂದ; ಗತ: sweet memories of gone springs ಕಳೆದ ವಸಂತಗಳ ಸವಿ ನೆನಪುಗಳು. not until gone nine ಒಂಬತ್ತು ಗಂಟೆ ಕಳೆಯುವ ಮುಂಚೆ ಅಲ್ಲದೆ.
  5. ನಿತ್ರಾಣದ; ನಿಶ್ಯಕ್ತಿಯ; ದುರ್ಬಲವಾದ: a gone feeling ನಿಶ್ಯಕ್ತಿಯ ಭಾವ.
  6. ಸುಸ್ತಾದ; ಬಳಲಿದ; ಆಯಾಸಗೊಂಡ.
  7. (ಆಡುಮಾತು) ಬಸಿರಾದ; ಗರ್ಭಿಣಿಯಾದ: a woman seven months gone ಏಳು ತಿಂಗಳ ಗರ್ಭಿಣಿ(ಯಾದ ಹೆಂಗಸು).
  8. (ಆಡುಮಾತು) ತಾತ್ಕಾಲಿಕವಾಗಿ ಹಾಜರಿಲ್ಲದ, ಕಾಣದಾದ.
ಪದಗುಚ್ಛ
  1. be gone
    1. ತೊಲಗಾಚೆ! ನಡೆಯಾಚೆ! ತೊಲಗಿ ಹೋಗು!
    2. (ಆಡುಮಾತು) ತಾತ್ಕಾಲಿಕವಾಗಿ ಗೈರುಹಾಜರಾಗಿರು.
  2. gone with child = gone (7).
  3. dead and gone = gone (3).
  4. gone away! (ನರಿಯ ಬೇಟೆಯಲ್ಲಿ ನರಿಯು ಬಿಲದಿಂದ ಹೊರಟಿದೆಯೆಂಬುದನ್ನು ಸೂಚಿಸುವ ಉದ್ಗಾರ) ಹೊರಟಿದೆ!
  5. far gone
    1. ಬಹಳ ಮುಂದುವರೆದ; ಬಹಳ ದೂರ ಹೋದ; ತೀರ ತೊಡಗಿಸಿಕೊಂಡ; ಸಿಕ್ಕಿಕೊಂಡ.
    2. ಆಯಾಸಗೊಂಡ; ಸುಸ್ತಾದ; ನಿತ್ರಾಣಗೊಂಡ.
    3. ಸಾಯುತ್ತಿರುವ; ಮರಣ ಸಈಪಿಸುತ್ತಿರುವ.
  6. gone on (ಅಶಿಷ್ಟ) ವ್ಯಾಮೋಹದಿಂದಿರುವ; ಹಂಬಲ ಹಚ್ಚಿಕೊಂಡ; ಗೀಳು ಹಿಡಿದ; ತೀವ್ರಾಸಕ್ತನಾಗಿರುವ; ಮೋಹಕ್ಕೆ, ಪ್ರೇಮಕ್ಕೆ ಸಿಲುಕಿದ: he is still gone on the girl who jilted him ತನ್ನನ್ನು ವಂಚಿಸಿದ ಹುಡುಗಿಯ ಮೋಹಕ್ಕೆ ಅವನು ಇನ್ನೂ ಸಿಲುಕಿದ್ದಾನೆ.
  7. past and gone ಗತಿಸಿದ; ಕಳೆದುಹೋದ; ಭೂತಕಾಲದ.