gondola ಗಾಂಡಲ
ನಾಮವಾಚಕ
  1. ಗಾಂಡೊಲ; (ಇಟಲಿಯ ವೆನಿಸ್‍ನ ನೀರು ಕಾಲುವೆಗಳಲ್ಲಿ ಉಪಯೋಗಿಸುವ) ಹಗುರ ದೋಣಿ; ನಡುವೆ ಕೋಣೆಯುಳ್ಳ, ಎರಡು ತುದಿಗಳೂ ಎತ್ತರವಾಗಿದ್ದು ಹಿಂಭಾಗದ ಒಂದು ಹುಟ್ಟಿನಿಂದ ನಡೆಸುವ, ವೆನಿಸ್‍ ನಗರದ ಕಾಲುವೆಗಳಲ್ಲಿ ಸಂಚಾರಕ್ಕಾಗಿ ಉಪಯೋಗಿಸುವ, ಚಪ್ಪಟೆ ತಳದ ಹಗುರ ದೋಣಿ. Figure: gondola-1
  2. (ವಾಯುನೌಕೆಯಿಂದ ಇಳಿಬಿಟ್ಟಿರುವ) ತೂಗುದೊಟ್ಟಿಲು.
  3. ತೆರೆದ ವ್ಯಾಗನ್ನು; ಮಟ್ಟಸ ತಳದ, ಮೇಲ್ಭಾಗ ಮುಚ್ಚಿಲ್ಲದ, ಉಕ್ಕು ಮೊದಲಾದವುಗಳನ್ನು ಸಾಗಿಸಲು ಬಳಸುವ ರೈಲ್ವೆ ವ್ಯಾಗನ್ನು.
  4. ಚಲಿಸುತ್ತಿರುವ ಹಗ್ಗ ಯಾ ಕೇಬಲ್ಲಿಗೆ ಅಳವಡಿಸಿರುವ, ಎರಡು ಅಥವಾ ನಾಲ್ಕು ಜನ ಕೂರುವ ವ್ಯವಸ್ಥೆಯಿರುವ, ಹಿಮಗಲ್ಲು ಜಾರುಗರನ್ನು ಕೊಂಡೊಯ್ಯುವ, ಬುಟ್ಟಿ ಯಾ ಗಾಡಿ.
  5. (ಸ್ವಯಂಸೇವಾ ಅಂಗಡಿಯಲ್ಲಿ ವಸ್ತುಗಳನ್ನು ಪ್ರದರ್ಶಿಸುವುದಕ್ಕಾಗಿ ಏರ್ಪಡಿಸಿರುವ) ಬಿಡುವಿನ ಅಂಕಣ(ಗಳು).