golden ಗೋಲ್ಡನ್‍
ಗುಣವಾಚಕ
  1. ಚಿನ್ನದ; ಹೊನ್ನಿನ; ಸುವರ್ಣದ; ಚಿನ್ನದಿಂದ ಮಾಡಿದ.
  2. ಚಿನ್ನ ತುಂಬಿರುವ, ಹೇರಳವಾಗಿರುವ; ಸುವರ್ಣ – ವಿಶಿಷ್ಟ.
  3. ಚಿನ್ನ ಕೊಡುವ; ಸ್ವರ್ಣದ; ಸುವರ್ಣದಾಯಿ.
  4. ಹೊಂಬಣ್ಣದ; ಚಿನ್ನದ ಬಣ್ಣದ; ಸ್ವರ್ಣವರ್ಣದ; ಚಿನ್ನದಂತೆ ಹೊಳೆಯುವ: golden hair ಹೊಂಬಣ್ಣದ ಕೂದಲು.
  5. ಬಹಳ ಬೆಲೆಯುಳ್ಳ; ಅಮೂಲ್ಯ; ಪ್ರಶಸ್ತ; ಉತ್ಕೃಷ್ಟ; ಅಮೋಘ; ಅತ್ಯುತ್ತಮ; ಶ್ರೇಷ್ಠ; ಪ್ರಧಾನ; ಪ್ರಮುಖ; ಮಹತ್ವವುಳ್ಳ: a golden remedy ಸಂಜೀವಿನಿ; ಪರಮೌಷಧ; ಅತ್ಯುತ್ತಮ ಪರಿಹಾರ. a golden opportunity ಸುವರ್ಣಾವಕಾಶ; ಉತ್ಕೃಷ್ಟ ಅವಕಾಶ. a golden saying ಚಿನ್ನದಂಥ ಮಾತು; ಮಹತ್ವದ ಉಕ್ತಿ; ಅಮೋಘ ವಚನ.