See also 2goggle  3goggle
1goggle ಗಾಗ್‍ಲ್‍
ಸಕರ್ಮಕ ಕ್ರಿಯಾಪದ

(ಕಣ್ಣುಗಳನ್ನು) ಪಕ್ಕಕ್ಕೆ, ಒಂದು ಕಡೆಗೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ – ತಿರುಗಿಸು, ಹೊರಳಿಸು, ಮಾಲಿಸು.

ಅಕರ್ಮಕ ಕ್ರಿಯಾಪದ
  1. ಓರೆಯಾಗಿ ನೋಡು.
  2. ಕಣ್ಣು ತಿರುಗಿಸು, ಸುತ್ತಿಸು, ಹೊರಳಿಸು.
  3. (ಕಣ್ಣುಗಳ ವಿಷಯದಲ್ಲಿ)
    1. ಸುತ್ತ ತಿರುಗು; ಹೊರಳು.
    2. ಮುಂದಕ್ಕೆ ಚಾಚು.
  4. (ಅಗಲವಾಗಿ ತೆರೆದ ಕಣ್ಣುಗಳಿಂದ) ದಿಟ್ಟಿಸಿ ನೋಡು; ಕಣ್ಣು ಉಬ್ಬಿಸಿ ನೋಡು; ಕಣ್ಣರಳಿಸಿ ನೋಡು.
See also 1goggle  3goggle
2goggle ಗಾಗ್‍ಲ್‍
ಗುಣವಾಚಕ

(ಕಣ್ಣುಗಳ ವಿಷಯದಲ್ಲಿ)

  1. ಉಬ್ಬಿದ; ಮುಂಚಾಚಿದ; ಉಬ್ಬಿಕೊಂಡಿರುವ.
  2. ಪೂರ್ತಿ ತೆರೆದಿರುವ, ಅರಳಿರುವ.
  3. ಸುತ್ತುತ್ತಿರುವ; ಸುತ್ತ ತಿರುಗುತ್ತಿರುವ; ಹೊರಳುತ್ತಿರುವ.
See also 1goggle  2goggle
3goggle ಗಾಗ್‍ಲ್‍
ನಾಮವಾಚಕ
  1. (ಬಹುವಚನದಲ್ಲಿ) ಗಾಗಲ್ಸು; ಬಿಸಿಲು ಕನ್ನಡಕ; ತಂಪು ಕನ್ನಡಕ; ಬಿಸಿಲಿನ ಝಳ, ಧೂಳು, ಮೊದಲಾದವುಗಳಿಂದ ಕಣ್ಣುಗಳನ್ನು ರಕ್ಷಿಸಲು ಉಪಯೋಗಿಸುವ, ಬಹುಮಟ್ಟಿಗೆ ಬಣ್ಣದ ಗಾಜು, ತಂತಿ ಜಾಲರಿ, ಮೊದಲಾದವುಗಳುಳ್ಳ ಕನ್ನಡಕ. Figure: goggles
  2. ಕುರಿರೋಗ; ತತ್ತರ ಬೇನೆ; ಗಿರಿಕಿ ರೋಗ; ತತ್ತರಿಸುವ ರೋಗ.