See also 2god
1god ಗಾಡ್‍
ನಾಮವಾಚಕ
  1. ದೇವರು; ದೇವ; ದೇವತೆ.
  2. ದೇವರು; ದೇವತೆ; ದೈವಸಂಕೇತವೆಂದು ಯಾ ದೇವರ ಆವಾಸಸ್ಥಾನವೆಂದು ಭಾವಿಸಿ ಪೂಜಿಸುವ ವಿಗ್ರಹ, ಪ್ರತಿಮೆ, ಪ್ರಾಣಿ ಯಾ ವಸ್ತು.
  3. (ದೇವರ) ವಿಗ್ರಹ; ಮೂರ್ತಿ; ಪ್ರತಿಮೆ.
  4. ಪೂಜ್ಯ (ವ್ಯಕ್ತಿ); ದೇವರು; ಶ್ಲಾಘನೀಯ, ಮೆಚ್ಚಿಗೆ ಪಡೆದ ಯಾ ಪ್ರಭಾವಶಾಲಿ – ವ್ಯಕ್ತಿ.
  5. (ನಾಟಕಶಾಲೆ) (ಬಹುವಚನದಲ್ಲಿ) ‘ಗ್ಯಾಲರಿ’ ಪ್ರಭುಗಳು; ಮೇಲಟ್ಟದ ಪ್ರೇಕ್ಷಕರು; (ಅಗ್ಗದ) ಮೇಲ್ಮಟ್ಟದಲ್ಲಿ ಕುಳಿತಿರುವವರು.
  6. (God) ಭಗವಂತ; ಪರಮಾತ್ಮ; ಪರಮೇಶ್ವರ; ವಿಶ್ವದ ಸೃಷ್ಟಿಕರ್ತ ಮತ್ತು ಪಾಲಕ: the Lord God, Almighty God, God ಪರಮೇಶ್ವರ; ಸರ್ವಶಕ್ತ ಭಗವಂತ.
ಪದಗುಚ್ಛ
  1. act of God ದೈವಘಟನೆ; ಹತೋಟಿಗೆ ಈರಿದ ನಿಸರ್ಗ ಶಕ್ತಿಗಳ ಕ್ರಿಯೆಯಿಂದಾದ ಘಟನೆ.
  2. blind god = ಪದಗುಚ್ಛ \((16)\).
  3. by God ದೇವರಾಣೆ.
  4. for God’s sake (ಬಹಳವಾಗಿ ಗೋಗರೆಯುವಲ್ಲಿ) ದೇವರಿಗಾಗಿ; ದೇವರಿಗೋಸ್ಕರ.
  5. God bless – me!, my soul!, my life!, you! etc. (ಆಶ್ಚರ್ಯಸೂಚಕ ಉದ್ಗಾರಗಳು) ಅಬ್ಬಾ ದೇವರೇ! ದೇವರು ಕಾಪಾಡಲಿ! ಭಗವಂತ ಒಳ್ಳೆಯದು ಮಾಡಲಿ.
  6. God damn (you, him, etc.) (ನಿನಗೆ, ಅವನಿಗೆ, ಇತ್ಯಾದಿ) ದೇವರು ಕೆಡುಕನ್ನುಂಟು ಮಾಡಲಿ; (ನಿನ್ನನ್ನು ಇತ್ಯಾದಿ) ನಾಶಮಾಡಲಿ, ನರಕಕ್ಕೆ ದೂಡಲಿ.
  7. God forbid! (ದೇವರ ದಯೆಯಿಂದ) ಹಾಗಾಗದಿರಲಿ! ದೇವರು – ತಪ್ಪಿಸಲಿ, ಆಗಗೊಡದಿರಲಿ!
  8. god from machine = deus ex machina.
  9. God grant (that etc.) (ಪ್ರಾರ್ಥನೆಯಲ್ಲಿ) ದೇವರೇ (ಅದನ್ನು) ನೆರವೇರಿಸು.
  10. God help (you, him, etc) ದೇವರು (ನಿನಗೆ, ಅವನಿಗೆ) ಸಹಾಯ ಮಾಡಲಿ.
  11. God in heaven good God, my God, oh God (ನೋವು, ಅಳಲು ಯಾ ಕೋಪ ಸೂಚಿಸುವಾಗ ಬಳಸುವ ಉದ್ಗಾರ) ಅಯ್ಯೋ ದೇವರೇ! ಭಗವಂತ!
  12. God knows
    1. (ನನ್ನ ಯಾ ಮರ್ತ್ಯಮಾನವನ ಅರಿವಿಗೆ, ಮನುಷ್ಯನ ಅರಿವಿಗೆ ಈರಿದ್ದು ಎಂಬುದನ್ನು ಸೂಚಿಸಲು ಹೇಳುವ ಮಾತು) ದೇವರೊಬ್ಬನಿಗೆ ಗೊತ್ತು; ಭಗವಂತ ಮಾತ್ರ ಬಲ್ಲ.
    2. ನನ್ನ ಹೇಳಿಕೆಗೆ ದೇವರೇ ಸಾಕ್ಷಿ; ದೇವರ ಸಾಕ್ಷಿಯಾಗಿ ನಾನು ಹೇಳುವುದೇನೆಂದರೆ.
  13. god of day
    1. ಸೂರ್ಯ.
    2. (ಗ್ರೀಕ್‍ ಪುರಾಣ) ಅಪಾಲೋ (ಸೂರ್ಯದೇವ).
    3. (ರೋಮನ್‍ ಪುರಾಣ) ಹೀಬಸ್‍.
  14. god of heaven (ಗ್ರೀಕ್‍ ಪುರಾಣ) ಸೂಸ್‍, (ರೋಮನ್‍ ಪುರಾಣ) ಜೂಪಿಟರ್‍; ಸ್ವರ್ಗಾಧಿಪತಿ; ದಿವಸ್ಪತಿ.
  15. god of hell ನರಕಾಧಿಪತಿ; (ಗ್ರೀಕ್‍ ಪುರಾಣ) ಪ್ಲೂಟೊ; ಡಿಸ್‍; ಯಮ.
  16. god of love ಪ್ರೇಮದೇವತೆ; ಕಾಮದೇವ; ಮನ್ಮಥ; (ಗ್ರೀಕ್‍ ಪುರಾಣ) ಈರಾಸ್‍, (ರೋಮನ್‍ ಪುರಾಣ) ಕ್ಯೂಪಿಡ್‍.
  17. god of the sea ಸಮುದ್ರದೇವತೆ; (ಗ್ರೀಕ್‍ ಪುರಾಣ) ಪೊಸೀಡಾನ್‍, (ರೋಮನ್‍ ಪುರಾಣ) ನೆಪ್ಚೂನ್‍.
  18. god of wine ಮದ್ಯದೇವತೆ; (ಗ್ರೀಕ್‍ ಪುರಾಣ) ಬ್ಯಾಕಸ್‍.
  19. God’s image ಮನುಷ್ಯದೇಹ; ಮಾನವ ಶರೀರ.
  20. God’s (own) country ಭೂಸ್ವರ್ಗ; ದೇವದೇಶ; (ಭೂಲೋಕದ ಸ್ವರ್ಗವೆಂದು ಪರಿಗಣಿಸಲ್ಪಟ್ಟ) ಅಮೆರಿಕಾ ದೇಶ.
  21. God’s plenty (ಆಡುಮಾತು) ಸಮೃದ್ಧಿ; ಧಂಡಿ.
  22. God’s quantity = ಪದಗುಚ್ಛ \((21)\).
  23. God’s truth ಪರಮ ಸತ್ಯ.
  24. God the Father, Son, Holy Ghost ದೇವರು, ದೇವಪುತ್ರ (ಕ್ರಿಸ್ತ), ದಿವ್ಯಾತ್ಮ – ಎಂಬ ಕ್ರೈಸ್ತ ತ್ರಿಮೂರ್ತಿಗಳು.
  25. God willing ದೈವೇಚ್ಛೆ ಇದ್ದರೆ; ಭಗವತ್ಸಂಕಲ್ಪವಿದ್ದರೆ; ದೈವಸಂಕಲ್ಪವಿದ್ದರೆ; ದೇವರ ಚಿತ್ತವಿದ್ದರೆ; ದೈವಾನುಗ್ರಹವಿದ್ದರೆ.
  26. God wot (ಪ್ರಾಚೀನ ಪ್ರಯೋಗ) = ಪದಗುಚ್ಛ \((12)\).
  27. in God’s name.
  28. man of God.
  29. oh, my good, etc. god! (ನೋವು, ದುಃಖ, ಕೋಪ – ಸೂಚಿಸುವ ಉದ್ಗಾರಗಳು) ಅಯ್ಯೋ ನನ್ನ ದೇವರೇ! ಹಾ ದೇವರೆ!
  30. play God ಸರ್ವಶಕ್ತನಾಗಲು ಪ್ರಯತ್ನಿಸು; ದೇವರಂತೆ ವರ್ತಿಸತೊಡಗು, ಆಡತೊಡಗು.
  31. so help me God! (ಪ್ರಾರ್ಥನೆಯಲ್ಲಿ ಯಾ ನಾನು ಭಾಷೆಗೆ ತಪ್ಪುವುದಿಲ್ಲ, ನಾನು ಸತ್ಯವನ್ನು ಆಡುತ್ತಿದ್ದೇನೆ ಎಂದು ಪ್ರಮಾಣ ಮಾಡುವಲ್ಲಿ) ದೇವರು ಸಹಾಯ ಮಾಡಲಿ! ದೇವರು ನಡೆಸಿಕೊಡಲಿ! ದೇವರು ನೆರವೇರಿಸಲಿ!
  32. thank God (ಘಟನೆ ಮೊದಲಾದವುಗಳು ಅನುಕೂಲಕರವಾದುದಕ್ಕೆ ಮಾತಿನ ಮಧ್ಯೆ ಮಾಡುವ ಸಂತೋಷದ ಉದ್ಗಾರ) ಎಲ್ಲ ದೇವರ ಕೃಪೆ! ಬದುಕಿಸಿದೆ ದೇವರೇ! ದೇವರು ದೊಡ್ಡವನು!
  33. under God (ಮನುಷ್ಯನ ಅಸ್ವಾತಂತ್ರ್ಯವನ್ನು ಯಾ ಪೂರ್ಣ ಸ್ವಾತಂತ್ರ್ಯಕ್ಕೆ ಮಿತಿಯನ್ನು ತಿಳಿಸುವಾಗ ಹೇಳುವ) ದೈವಾಧೀನ; ಭಗವದಧೀನ.
  34. with God ಸತ್ತು ಸ್ವರ್ಗದಲ್ಲಿ; ದೇವರ ಸಾಯುಜ್ಯದಲ್ಲಿ, ಸಾಈಪ್ಯದಲ್ಲಿ.
ನುಡಿಗಟ್ಟು
  1. feast for the gods = ನುಡಿಗಟ್ಟು \((3)\).
  2. on the knees or in the lap of the gods (ಮನುಷ್ಯನ ಅಧೀನದಲ್ಲಿಲ್ಲದೆ) ದೇವರ ಕೈಯಲ್ಲಿ; ಭಗವಂತನ ಅಧೀನದಲ್ಲಿ.
  3. sight for the gods ದಿವ್ಯವಾದದ್ದು; ದೇವಯೋಗ್ಯ; ದೇವಭೋಗ್ಯ; ಅತ್ಯಂತ ಮನೋಜ್ಞವಾದದ್ದು; ಸರ್ವೋತ್ಕೃಷ್ಟವಾದದ್ದು.
  4. Ye gods! (and little fishes)! (ವಿಡಂಬನೆಗಾಗಿ ಮಾಡುವ ಅಣಕ ಉದ್ಗಾರಗಳು) ದೇವರುಗಳೇ!
See also 1god
2god ಗಾಡ್‍
ಸಕರ್ಮಕ ಕ್ರಿಯಾಪದ

(ವಿರಳ ಪ್ರಯೋಗ) ದೇವರಾಗಿಸು; ದೈವತ್ವ ಕಲ್ಪಿಸು; ದೈವ ಪದವಿಗೇರಿಸು; ಆರಾಧಿಸು.

ಪದಗುಚ್ಛ

god it ದೇವರಂತೆ ವರ್ತಿಸು, ಆಡು.