goal ಗೋಲ್‍
ನಾಮವಾಚಕ
  1. ಗುರಿಗಂಬ; ರೇಸಿನ ಕೊನೆಯ ಎಲ್ಲೆಯನ್ನು ತೋರಿಸುವ ಗುರುತು.
  2. (ಪ್ರಯತ್ನದ, ಹೆಬ್ಬಯಕೆಯ) ಗುರಿ; ಲಕ್ಷ್ಯ; ಧ್ಯೇಯ; ಉದ್ದೇಶ.
  3. ಗಮ್ಯಸ್ಥಾನ; ತಲುಪಬೇಕಾದ ಸ್ಥಾನ.
  4. (ಕಾಲ್ಚೆಂಡು ಮೊದಲಾದ ಆಟಗಳಲ್ಲಿ) (ಚೆಂಡನ್ನು ತೂರಿಸಬೇಕಾದ) ಗುರಿಗಂಬಗಳು; ಗೋಲು.
  5. (ಇದೇ ರೀತಿ ಇತರ ಆಟಗಳಲ್ಲಿ ಬಳಸುವ) ಪಂಜರ ಯಾ ಬುಟ್ಟಿ.
  6. (ಗೋಲಿನೊಳಕ್ಕೆ ಚೆಂಡನ್ನು ಹೊಡೆದು ಪಡೆದ) ಗೆಲ್ಲಂಕ(ಗಳು); ಗೋಲು(ಗಳು).
  7. (ರೋಮನ್‍ ಪ್ರಾಚೀನ ಪ್ರಯೋಗ) ತಿರುವು ಕಂಬ; ರಥಪಂದ್ಯದ ಪಥದಲ್ಲಿಯ ತಿರುವಿನಲ್ಲಿ ನೆಟ್ಟಿರುವ ಕಂಬ.
ಪದಗುಚ್ಛ
  1. drop a goal ಗೋಲು ಬಿಡು; ಎದುರಾಳಿಯ ಚೆಂಡನ್ನು ತಡೆಯದೆ ಯಾ ಹಿಡಿಯದೆ, ಗೋಲಿನೊಳಕ್ಕೆ ತೂರುವಂತೆ ಬಿಡು.
  2. kick a goal ಗೋಲಿನೊಳಕ್ಕೆ ಒದಿ ಯಾ ಒದ್ದು ಗೋಲುಗಳಿಸು.
  3. make a goal ಒಂದು ಗೋಲು ಹೊಡಿ.
  4. score a goal ಒಂದು ಗೋಲು – ಗಳಿಸು, ಗಿಟ್ಟಿಸು, ಸಂಪಾದಿಸು.