See also 2go-ahead
1go-ahead ಗೋಅಹೆಡ್‍
ಗುಣವಾಚಕ
  1. ಮುನ್ನುಗ್ಗುವ; ಅಡೆತಡೆಯಿಲ್ಲದೆ, ಹಿಂದುಮುಂದು ನೋಡದೆ ಮುಂದೆಹೋಗುವ.
  2. ಧೈರ್ಯಶಾಲಿ; ಸಾಹಸಿಗನಾದ: a go - ahead yankee peddler ಸಾಹಸಿಗನಾದ ಯಾಂಕೀ ತಿರುಗು ವ್ಯಾಪಾರಿ.
  3. ಮುಂದೆ ಹೋಗಲು ಸೂಚನೆ ನೀಡುವ, ಸೂಚಿಸುವ: a go-ahead signal ಮುಂದೆ ಹೋಗಲು ಸೂಚಿಸುವ ಸಂಕೇತ.
See also 1go-ahead
2go-ahead ಗೋಅಹೆಡ್‍
ನಾಮವಾಚಕ
  1. ಮುಂದುವರಿಕೆ ಸೂಚನೆ ಯಾ ಅನುಮತಿ; ಮುಂದೆ ಹೋಗಬಹುದೆಂಬ – ಸೂಚನೆ, ಅನುಮತಿ: they got the go-ahead on the construction work ಕಟ್ಟಡದ ಕೆಲಸದಲ್ಲಿ ಮುಂದುವರಿಯಲು ಅವರಿಗೆ ಅನುಮತಿ ಸಿಕ್ಕಿತು.
  2. (ಅಮೆರಿಕನ್‍ ಪ್ರಯೋಗ) (ಆಡುಮಾತು)
    1. ಮುನ್ನುಗ್ಗುವ ಕ್ರಿಯೆ, ಉತ್ಸಾಹ ಯಾ ಶಕ್ತಿ.
    2. ಪ್ರಗತಿ.
    3. ಮಹತ್ವಾಕಾಂಕ್ಷೆ.