gnomon ನೋಮನ್‍
ನಾಮವಾಚಕ

ನೋಮನ್‍:

  1. (ಗುರುತು ಮಾಡಿರುವ ಮೇಲ್ಮೈ ಮೇಲೆ ಬಿದ್ದ ತನ್ನ ನೆರಳಿನಿಂದ ಕಾಲವನ್ನು ತೋರಿಸುವ) ನೆರಳು ಗಡಿಯಾರದ – ಕಂಬ, ಸರಳು, ಶಂಕು, ಸೂಚಿ, ಕೀಲಕ, ಫಲಕ.
  2. ಸೂರ್ಯನ ಮಧ್ಯಾಹ್ನರೇಖೆಯ ಉನ್ನತಿಯನ್ನು ನಿರ್ಧರಿಸಲು ಹಿಂದೆ ಬಳಸುತ್ತಿದ್ದ, ಕ್ಷಿತಿಜೀಯಕ್ಕೆ ಲಂಬವಾಗಿ ನೆಟ್ಟ ಸ್ತಂಭ ಮೊದಲಾದವು.
  3. (ಜ್ಯಾಮಿತಿ) ಸಮಾಂತರ ಚತುರ್ಭುಜದ ಒಂದು ಮೂಲೆಯಲ್ಲಿ ಅದರ ಸಮರೂಪ ಚತುರ್ಭುಜವೊಂದನ್ನು ತೆಗೆದರೆ ಉಳಿಯುವ ಆಕೃತಿ. Figure: atod-21