See also 2glue
1glue ಗ್ಲೂ
ನಾಮವಾಚಕ

ಗ್ಲೂ; ಮರವಜ್ರ; ಸರಿ; ಚರ್ಮ ಮತ್ತು ಮೂಳೆಗಳನ್ನು ನೀರಿನೊಡನೆ ಕುದಿಸಿ ತಯಾರಿಸಿ, ಗಡುಸಾಗಿಯೂ ಭಿದುರವಾಗಿಯೂ ಇರುವ, ಬಿಸಿಯಲ್ಲಿ ಅಂಟಾಗಿ ಉಪಯೋಗಿಸುವ, ಕಂದು ಬಣ್ಣದ ಜೆಲಟಿನ್‍.

  1. ಅಂಟು; ಗೋಂದು; ಇತರ ಮೂಲಗಳಿಂದ ತಯಾರಿಸಿದ ಇಂತಹದೇ ಅಂಟಿಸುವ ಪದಾರ್ಥ: fish glue ಈನಿನಂಟು; ಈನಿನಿಂದ ತಯಾರಿಸಿದ ಅಂಟು.
See also 1glue
2glue ಗ್ಲೂ
ಸಕರ್ಮಕ ಕ್ರಿಯಾಪದ
  1. ಮರವಜ್ರದಿಂದ ಯಾ ಅದರಿಂದಲೋ ಎಂಬಂತೆ – ಅಂಟಿಸು, ಕೂಡಿಸು, ಬಂಧಿಸು.
  2. ಬಲವಾಗಿ – ಅಂಟಿಸು, ನೆಡಿಸು, ಕೂಡಿಸು, ಹಚ್ಚಿಸು: eyes glued to the picture ಚಿತ್ರದ ಮೇಲೆ ಕಣ್ಣನ್ನು ನೆಟ್ಟು.