See also 2glow
1glow ಗ್ಲೋ
ಅಕರ್ಮಕ ಕ್ರಿಯಾಪದ
  1. ಜ್ವಲಿಸುವಂತಾಗು; ಜ್ವಲಿಸುವಷ್ಟು ಕಾವೇರು; ನಿಗನಿಗಿ ಕಾಯು; ಉರಿಯಿಲ್ಲದೆ, ಜ್ವಾಲೆಯಿಲ್ಲದೆ ಬೆಳಕನ್ನೂ ಕಾವನ್ನೂ ಸೂಸು.
  2. (ತೀಕ್ಷ್ಣವಾಗಿ ಕಾದ ವಸ್ತುವಿನಂತೆ) ಹೊಳೆ; ಪ್ರಕಾಶಿಸು; ಪ್ರಜ್ವಲಿಸು.
  3. ಉಜ್ವಲ ವರ್ಣದಿಂದ – ಹೊಳೆ, ಥಳಥಳಿಸು, ರಂಜಿತವಾಗಿರು: pictures glowing with colour ಉಜ್ವಲ ವರ್ಣದಿಂದ ಥಳಥಳಿಸುವ ಚಿತ್ರಗಳು; ಉಜ್ವಲ ವರ್ಣದ ಚಿತ್ರಗಳು.
  4. (ಮೈ ಬಿಸಿಯಿಂದ ಯಾ ಭಾವದ ಕಾವಿನಿಂದ) ರಂಗಾಗು; ರಂಗೇರು; ತಪಿಸು; ಕೆಂಪೇರು; ಉಜ್ವಲವಾಗು: glowing cheeks ರಂಗೇರಿದ ಕೆನ್ನೆಗಳು. gave me a glowing account of the achievement ಸಾಧನೆಯ ಉಜ್ವಲವಾದ ವರದಿಯನ್ನು ಕೊಟ್ಟನು.
See also 1glow
2glow ಗ್ಲೋ
ನಾಮವಾಚಕ
  1. ಜ್ವಲನ; ಜ್ವಲಿಸುವ ಸ್ಥಿತಿ; ನಿಗಿನಿಗಿಸುವ ಸ್ಥಿತಿ.
  2. ಉಜ್ವಲತೆ; ಪ್ರಜ್ವಲತೆ; ರಂಗುರಂಗಿನ ಥಳಥಳಿಕೆ; ಬಣ್ಣಗಳ ಉಜ್ವಲತೆ, ಪ್ರಕಾಶ (ಉದಾಹರಣೆಗೆ ಕೆನ್ನೆಗಳ ಕೆಂಪು).
  3. (ಶರೀರದ ಯಾ ಭಾವದ) ಉಜ್ವಲತೆ; ಪ್ರಜ್ವಲತೆ; ಕಾಯ್ಪು; ಕಡುರಾಗ; ಭಾವಾವೇಶ.
ಪದಗುಚ್ಛ
  1. all of a glow = ಪದಗುಚ್ಛ \((2)\).
  2. in a glow
    1. ಕಾವೇರಿ; ಪ್ರಜ್ವಲಿಸಿ.
    2. ಕೆಂಪೇರಿ; ಉಜ್ವಲವಾಗಿ.