See also 2glove
1glove ಗ್ಲವ್‍
ನಾಮವಾಚಕ
  1. ಕೈಗವಸು; ತೊಗಲು, ಹತ್ತಿ, ರೇಷ್ಮೆ, ಉಣ್ಣೆ ಯಾ ಹಿಂದಿನ ಕಾಲದಲ್ಲಿ ಉಕ್ಕು ಇವುಗಳಿಂದ ಮಾಡಿದ, ಸಾಮಾನ್ಯವಾಗಿ ಬೆರಳುಗಳು ವಿಂಗಡವಾಗಿರುವ, ಕೈಗಳನ್ನು ರಕ್ಷಿಸಲು, ಬೆಚ್ಚಗಿಡಲು, ಸ್ವಚ್ಛವಾಗಿಡಲು, ಯಾ ತಂಪಾಗಿರಿಸಲು ಬಳಸುವ ಹೊದಿಕೆ.
  2. (ಮೆತ್ತೆ ಹಾಕಿ ಹೊಲಿದ) ಮುಷ್ಟಿಯುದ್ಧದ ಕೈಗವಸು.
ನುಡಿಗಟ್ಟು
  1. fit like a glove ಸರಿಯಾಗಿ ಹೊಂದಿಕೊ; ಗುತ್ತನಾಗಿ ಹೊಂದಿಕೊ; ಕರಾರುವಾಕ್ಕಾಗಿ ಅಳವಡು.
  2. hand and glove = ನುಡಿಗಟ್ಟು \((3)\).
  3. hand in glove ಅನ್ಯೋನ್ಯವಾಗಿರು; ಆತ್ಮೀಯವಾಗಿರು; ಒಬ್ಬರನ್ನೊಬ್ಬರು ಬಿಟ್ಟಿರದೆ ಒಟ್ಟಿಗೆ ಇರು.
  4. take off the gloves (ವಾದ, ಚರ್ಚೆ, ಮೊದಲಾದವುಗಳಲ್ಲಿ) ಬಿರುಸಾಗಿ, ನಿರ್ದಾಕ್ಷಿಣ್ಯವಾಗಿ, ನಯನಾಜೂಕು ಲೆಕ್ಕಿಸದೆ – ವಾದಮಾಡು.
  5. take up the glove (ಕಾಳಗಕ್ಕಾಗಿ, ವಾದಕ್ಕಾಗಿ) ಕೊಟ್ಟ ಕರೆಯನ್ನು, ಆಹ್ವಾನವನ್ನು, ಸವಾಲನ್ನು ಒಪ್ಪಿಕೊ.
  6. throw down the glove (ಕಾಳಗಕ್ಕೆ, ವಾದಕ್ಕೆ) ಕರೆ; ಆಹ್ವಾನಿಸು; ಸವಾಲುಹಾಕು.
  7. without the golves (ವಾದ, ಚರ್ಚೆ, ಮೊದಲಾದವುಗಳಲ್ಲಿ) ಬಿರುಸಾಗಿ; ನಿರ್ದಾಕ್ಷಿಣ್ಯವಾಗಿ; ನಯನಾಜೂಕು ಲೆಕ್ಕಿಸದೆ.
  8. with the gloves off = ನುಡಿಗಟ್ಟು \((7)\).
See also 1glove
2glove ಗ್ಲವ್‍
ಸಕರ್ಮಕ ಕ್ರಿಯಾಪದ
  1. ಕೈಗವಸುಗಳನ್ನು – ಹವಣಿಸು, ಒದಗಿಸು.
  2. ಕೈಗವಸುಗಳಿಂದ ಯಾ ಕೈಗವಸುಗಳಿಂದಲೋ ಎಂಬಂತೆ ಕೈಗಳನ್ನು ಮುಚ್ಚು, ಆವರಿಸು.