See also 2gloss  3gloss  4gloss
1gloss ಗ್ಲಾಸ್‍
ನಾಮವಾಚಕ
  1. ವಿವರಣ ಪದ; ಗ್ರಂಥ ಭಾಗದ ಯಾವುದೇ ಪದವನ್ನು ವಿವರಿಸಲು, ಪಂಕ್ತಿಗಳ ನಡುವೆಯೋ ಅರುಗಿನಲ್ಲೋ ಸೇರಿಸಿದ ಪದ.
  2. ಟಿಪ್ಪಣಿ.
  3. ವಿವರಣೆ; ಅರ್ಥ ನಿರೂಪಣೆ.
  4. ಭಾವಾನುವಾದ.
  5. (ಇನ್ನೊಬ್ಬನ ಮಾತುಗಳ) ತಿರುಚಣೆ; ಮಿಥ್ಯಾನಿರೂಪಣೆ; ಅಪಾರ್ಥ; ತಪ್ಪು ನಿರೂಪಣೆ.
  6. = glossary.
  7. ಸಾಲುಗಳ ನಡುವೆ ಸೇರಿಸಿರುವ ಭಾಷಾಂತರ, ಅನುವಾದ ಯಾ ವಿವರಣೆ; ಪಂಕ್ತ್ಯಂತರ ಭಾಷಾಂತರ ಯಾ ವಿವರಣೆ.
See also 1gloss  3gloss  4gloss
2gloss ಗ್ಲಾಸ್‍
ಸಕರ್ಮಕ ಕ್ರಿಯಾಪದ
  1. (ಗ್ರಂಥಭಾಗ ಮೊದಲಾದವುಗಳ ನಡುವೆ ಯಾ ಪದ ಮೊದಲಾದವನ್ನು ಕುರಿತು) ಅರ್ಥ, ಟಿಪ್ಪಣಿ, ಮೊದಲಾದವನ್ನು ಸೇರಿಸುವ.
  2. ವ್ಯಾಖ್ಯಾನ, ಟೀಕೆ, ಟಿಪ್ಪಣಿ, ಮೊದಲಾದವನ್ನು ಬರೆ.
  3. ತಪ್ಪರ್ಥ ಮಾಡು; ವಿಪರೀತಾರ್ಥ ಕಲ್ಪಿಸು.
  4. ಸಮಧಾನವಾಗುವಂತೆ ಹೇಳಿ, ಸರಿತೋರುವಂತೆ ಅರ್ಥೈಸಿ ತೇಲಿಸಿ ಬಿಡು, ಬೇರೆ ಬಣ್ಣ ಕೊಡು.
ಅಕರ್ಮಕ ಕ್ರಿಯಾಪದ
  1. ಟೀಕೆ, ಟಿಪ್ಪಣಿ, ವ್ಯಾಖ್ಯಾನ, ವಿವರಣೆ – ಬರೆ, ರಚಿಸು.
  2. (ಮುಖ್ಯವಾಗಿ ಪ್ರತಿಕೂಲವಾದ) ಟೀಕೆಗಳನ್ನು ಮಾಡು.
See also 1gloss  2gloss  4gloss
3gloss ಗ್ಲಾಸ್‍
ನಾಮವಾಚಕ
  1. ಹೊರಹೊಳಪು; ಬಾಹ್ಯಕಾಂತಿ; ಮೇಲೆ ಮೇಲೆ ಕಾಣುವ ಕಾಂತಿ; ಹೊರಗೆ ತೋರುವ ಹೊಳಪು.
  2. ಹುಸಿತೋರ್ಕೆ; ಮಿಥ್ಯಾರೂಪ; ಮೋಸ ಹೋಗಿಸುವ ಹೊರರೂಪ.
  3. ಹೊರಚೆಲುವು; ಬಾಹ್ಯ ಸೌಂದರ್ಯ; ಥಳಕು ಪಳಕು.
See also 1gloss  2gloss  3gloss
4gloss ಗ್ಲಾಸ್‍
ಸಕರ್ಮಕ ಕ್ರಿಯಾಪದ
  1. ಹೊಳೆಯುವಂತೆ ಮಾಡು; ಥಳಥಳಿಸುವಂತೆ ಮಾಡು; ಶೋಭಾಯಮಾನವಾಗಿಸು.
  2. ಹುಸಿಚೆಲುವು ಕೊಡು; ಬಣ್ಣ ಕಟ್ಟು; ಬಣ್ಣ ಕೊಡು; ರಂಗುರಂಗಾಗಿ ಮಾಡು.
  3. ಮರೆಸು; ಕಾಣದಂತೆ ಮಾಡು; ಮುಚ್ಚಿ ಹಾಕು: gloss over the defects ತಪ್ಪುಗಳನ್ನುಮುಚ್ಚಿ ಹಾಕು.