See also 2glory
1glory ಗ್ಲೋರಿ
ನಾಮವಾಚಕ
  1. ಘನತೆ; ಮಹಿಮೆ; ವೈಭವ.
  2. ಹಿರಿಮೆವೆತ್ತ ಹೆಸರು; ಮೇಲ್ಮೆ ಪಡೆದ ಹೆಸರು; ಉನ್ನತ ಕೀರ್ತಿ; ಗೌರವಯುತ ಖ್ಯಾತಿ; ನಿರ್ಮಲ ಯಶಸ್ಸು; ಧವಳಕೀರ್ತಿ.
  3. ಭಕ್ತಿಪೂರ್ಣ ಕೊಂಡಾಟ ಮತ್ತು ಕೃತಜ್ಞತೆ (ಸಮರ್ಪಣೆ).
  4. ಭೂಷಣ; ಹೆಮ್ಮೆ; ಪ್ರತಿಷ್ಠೆ; ವಿಶೇಷ – ಗೌರವ, ಬಿರುದು, ಸನ್ಮಾನ; ಹೆಮ್ಮೆಪಡುವಂಥ ವಿಷಯ: this grand old castle is the chief glory of the district ಈ ಪ್ರಾಚೀನವಾದ ಭವ್ಯಸೌಧವೇ ಈ ಪ್ರದೇಶದ ಪ್ರಧಾನ ಭೂಷಣ.
  5. ಉಜ್ಜ್ವಲ ಗಾಂಭೀರ್ಯ, ಸೌಂದರ್ಯ, ಭವ್ಯತೆ.
  6. ದಿವ್ಯ ತೇಜೋರಾಶಿ.
  7. (ಕಲ್ಪನೆಯ) ಅಲೌಕಿಕ ಸೌಂದರ್ಯ.
  8. ಸ್ವರ್ಗದ ಆನಂದ ಮತ್ತು ವೈಭವ.
  9. ವೈಭವ; ಅಭ್ಯುದಯ; ಏಳಿಗೆ; ಉಚ್ಛ್ರಾಯಸ್ಥಿತಿ: is in his glory ಅವನು ವೈಭವ ಸ್ಥಿತಿಯಲ್ಲಿ, ಬಹಳ ಏಳಿಗೆಯಲ್ಲಿ ಇದ್ದಾನೆ.
  10. (ದೇವತೆಯ ಸುತ್ತಲೂ ಹರಡಿರುವ) ಪ್ರಭಾವಲಯ; ಪ್ರಭಾಮಂಡಲ; ಪರಿವೇಶ; ದಿವ್ಯಪ್ರಭೆ; ತೇಜಸ್ಸು.
  11. ಹೆಸರು, ಗೌರವ ತರುವಂಥ ವಸ್ತು.
  12. ವೈಶಿಷ್ಟ್ಯ; ವೈಲಕ್ಷಣ್ಯ;
  13. = anthelion.
ಪದಗುಚ್ಛ

glory! ಯಾ glory be!

  1. (ಪೂಜಾದಿಗಳಲ್ಲಿ ಅರ್ಪಿಸುವ ಸ್ತುತಿ ಹಾಗೂ ಕೃತಜ್ಞತಾ ಸಮರ್ಪಣೆ) ಜಯ ಜಯ!
  2. (ಅಶಿಷ್ಟ) ಸಾಮಾನ್ಯ ಜನರ ಆಶ್ಚರ್ಯ ಯಾ ಸಂತೋಷ ಸೂಚಕ ಉದ್ಗಾರ: is it only you? Oh, glory be! ಅಯ್ಯೋ, ನೀನೇ? ಎಂಥ ಆಶ್ಚರ್ಯ! ಎಷ್ಟು ಸಂತೋಷ!
ನುಡಿಗಟ್ಟು
  1. go to glory! (ಅಶಿಷ್ಟ) ಸಾಯು; ಮೃತನಾಗು; ಸ್ವರ್ಗಸ್ಥನಾಗು; ದಿವಂಗತನಾಗು.
  2. send to glory (ಹಾಸ್ಯ ಪ್ರಯೋಗ) ಕೊಲ್ಲು; ಸ್ವರ್ಗಕ್ಕೆ ಕಳುಹಿಸು.
See also 1glory
2glory ಗ್ಲೋರಿ
ಅಕರ್ಮಕ ಕ್ರಿಯಾಪದ

(ಒಂದು ವಿಷಯಕ್ಕಾಗಿ ಯಾ ಕಾರ್ಯ ಮಾಡುವುದರಲ್ಲಿ) ಹಿಗ್ಗು; ಉಬ್ಬು; ಹೆಮ್ಮೆಪಡು.