glorious ಗ್ಲೋರಿಅಸ್‍
ಗುಣವಾಚಕ
  1. ಮಹಿಮಾನ್ವಿತ; ಮಹತ್ವವುಳ್ಳ; ಮಹಿಮೆಯುಳ್ಳ.
  2. ಹೆಸರುವೆತ್ತ; ಹೆಸರಾಂತ; ಯಶೋವಂತನಾದ; ಕೀರ್ತಿ ಪಡೆದ; ಖ್ಯಾತಿವೆತ್ತ; ಸುಪ್ರಸಿದ್ಧ; ವಿಖ್ಯಾತ: by nothing is England so glorious as by her poetry ಇಂಗ್ಲೆಂಡ್‍ ತನ್ನ ಕಾವ್ಯದಿಂದ ವಿಖ್ಯಾತವಾಗಿರುವಷ್ಟು ಇನ್ನಾವುದರಿಂದಲೂ ಆಗಿಲ್ಲ.
  3. ಹೆಸರು ತರುವ; ಕೀರ್ತಿದಾಯಕ; ಖ್ಯಾತಿ ಉಂಟುಮಾಡುವ.
  4. ಶೋಭಾಯಮಾನ; ಭವ್ಯ; ವೈಭವಯುತ: a glorious view ಭವ್ಯ ದೃಶ್ಯ.
  5. ದಿವ್ಯ; ಅದ್ಭುತ; ಮಹದಾನಂದಕರ; ಅತ್ಯಾನಂದಕರ: a glorious day ಅತ್ಯಾನಂದಕರ ದಿನ. glorious fun (ಹಾಸ್ಯ ಪ್ರಯೋಗ) ಒಳ್ಳೆ ದಿವ್ಯವಾದ ತಮಾಷೆ. a glorious muddle (ವ್ಯಂಗ್ಯದಲ್ಲಿ) ಅದ್ಭುತ ಅವ್ಯವಸ್ಥೆ. the glorious uncertainty of cricket ಕ್ರಿಕೆಟ್ಟಿನ ದಿವ್ಯ ಅನಿಶ್ಚಿತತೆ.
  6. (ಆಡುಮಾತು) ಕುಡಿದು ಆನಂದಪರವಶನಾಗಿರುವ; ಮದಿರಾನಂದದಲ್ಲಿರುವ: as soon as one man was flogged into sobriety, another became glorious ಒಬ್ಬನನ್ನು ಬಡಿದು ಸಮಸ್ಥಿತಿಗೆ ತರುವಷ್ಟರಲ್ಲೇ ಇನ್ನೊಬ್ಬ ಕುಡಿದು ಆನಂದಪರವಶನಾಗಿಬಿಡುತ್ತಿದ್ದ.