glorify ಗ್ಲೋರಿಹೈ
ಸಕರ್ಮಕ ಕ್ರಿಯಾಪದ
  1. ದಿವ್ಯತೆಗೇರಿಸು; ದೈವೀಪದವಿ ಕೊಡು: Jesus shall glorify the good and bring them joy without end ಪುಣ್ಯಾತ್ಮರನ್ನು ಯೇಸುವು ಖಂಡಿತ ದಿವ್ಯತೆಗೇರಿಸಿ ಅವರಿಗೆ ಅನಂತವಾದ ಆನಂದ ತರುವನು.
  2. ತೇಜೋಮಯಗೊಳಿಸು; ಪ್ರಕಾಶಮಾನವನ್ನಾಗಿ ಮಾಡು: the beams of the setting sun glorify the mountain peaks ಮುಳುಗುತ್ತಿರುವ ಸೂರ್ಯನ ಕಿರಣಗಳು ಪರ್ವತ ಶಿಖರಗಳನ್ನು ತೇಜೋಮಯಗೊಳಿಸುತ್ತವೆ.
  3. ಭವ್ಯವಾಗಿಸು; ವೈಭವಗೊಳಿಸು; ಭವ್ಯತೆಗೊಳಿಸು: Wordsworth knows how to glorify common life ಸಾಮಾನ್ಯ ಜನರ ಬಾಳನ್ನು ಭವ್ಯಗೊಳಿಸುವುದು ಹೇಗೆಂಬುದನ್ನು ವರ್ಡ್ಸ್‍ವರ್ತ್‍ ಕವಿ ಬಲ್ಲ.
  4. (ಸಾಮಾನ್ಯವಾದ ಯಾ ಕಳಪೆ ವಸ್ತುವನ್ನು ಇರುವುದಕ್ಕಿಂತ ಹೆಚ್ಚು) ವೈಭವೀಕರಿಸು; ಆಕರ್ಷಕವಾಗಿ ಯಾ ಚೆಲುವಾಗಿ ಕಾಣುವಂತೆ ಮಾಡು ಯಾ ಮಾಡಲು ಪ್ರಯತ್ನಿಸು; ರಮಣೀಯವಾದ ಹೊರರೂಪ ಕೊಡು ಯಾ ಕೊಡಲು ಶ್ರಮಿಸು: nothing more than a glorified cottage ಆಕರ್ಷಕವಾಗಿ ಮಾಡಿದ ಬರಿ ಒಂದು ಗುಡಿಸಲು, ಕೇವಲ ಒಂದು ಕುಟೀರ.
  5. (ಬಹುವಾಗಿ) ಕೊಂಡಾಡು; ಹೊಗಳು; ಶ್ಲಾಘಿಸು; ಕೀರ್ತಿಸು; ಪ್ರಶಂಸಿಸು; ಸ್ತೋತ್ರ ಮಾಡು: Caeser was glorified ಸೀಸರ್‍ನ ಮಹಿಮೆಯನ್ನು ಅತಿಯಾಗಿ ಕೊಂಡಾಡಿದರು.
  6. ಘನತೆಗೊಳಿಸು; ಮಹತ್ವಕ್ಕೇರಿಸು; ಮಹಿಮಾನ್ವಿತವಾಗಿ ಮಾಡು.
  7. (ದೇವರ) ಮಹಿಮೆಯನ್ನು ಕೊಂಡಾಡು, ಹೊಗಳು.