glorification ಗ್ಲೋರಿಹಿಕೇಷನ್‍
ನಾಮವಾಚಕ
  1. (ಮುಖ್ಯವಾಗಿ ಏಸುಕ್ರಿಸ್ತನ ವಿಷಯದಲ್ಲಿ) ದಿವ್ಯತೆಗೇರಿಸುವುದು; ದೈವೀಪದವಿ ಕೊಡುವುದು.
  2. (ಮಾನವ ಆತ್ಮಗಳ) ಸ್ವರ್ಗ ಪ್ರವೇಶ; ಸ್ವರ್ಗದ ಆನಂದದಲ್ಲಿ ಭಾಗಿಗಳನ್ನಾಗಿ ಮಾಡುವುದು.
  3. ಮಹತ್ವಗೊಳಿಸುವುದು; ಘನತೆಗೊಳಿಸುವುದು.
  4. ವೈಭವೀಕರಣ:
    1. ಭವ್ಯಗೊಳಿಸುವುದು.
    2. (ಸಾಮಾನ್ಯವಾದುದನ್ನು ಯಾ ಕೀಳಾದುದನ್ನು) ಭವ್ಯವಾಗಿ ಕಾಣುವಂತೆ ಮಾಡುವುದು; ಭವ್ಯಾಕಾರ ಕೊಡುವುದು; ಡಬ್ಬುಗೊಳಿಸುವುದು: nothing more than a glorification of a cottage ಡಬ್ಬುಗೊಳಿಸಿದ ಕೇವಲ ಒಂದು ಕುಟೀರ.
  5. (ಒಬ್ಬ ವ್ಯಕ್ತಿಯ ಯಾ ಒಂದು ವಸ್ತುವಿನ ವಿಷಯದ) ಕೊಂಡಾಟ; ಹೊಗಳಿಕೆ; ಸ್ತುತಿ; ಸ್ತೋತ್ರ; ಶ್ಲಾಘನೆ: Huxley’s glorification of science ಹಕ್ಸ್ಲೀ ಮಾಡಿರುವ ವಿಜ್ಞಾನದ ಕೊಂಡಾಟ.