See also 2glide
1glide ಗ್ಲೈಡ್‍
ಸಕರ್ಮಕ ಕ್ರಿಯಾಪದ
  1. ಜಾರಿಸು; ಸರಾಗವಾಗಿ ಮುಂದೂಡು: light airs glided the ship on her course ಮಂದಮಾರುತ ಹಡಗನ್ನು ಸರಾಗವಾಗಿ ಮುಂದೂಡಿತು.
  2. ಗ್ಲೈಡರ್‍ ವಿಮಾನದಲ್ಲಿ ಪ್ರಯಾಣ ಮಾಡು.
ಅಕರ್ಮಕ ಕ್ರಿಯಾಪದ
  1. (ದ್ರವ, ಹಡಗು, ಹಕ್ಕಿ, ಗಾಡಿ, ಹಾವು, ಸ್ಕೇಟ್‍ ಮಾಡುವವನು, ಮೊದಲಾದವರ ವಿಷಯದಲ್ಲಿ) ತಡೆಯಿಲ್ಲದೆ, ನಿಲ್ಲದೆ, ಮಂದಗತಿಯಿಂದ – ಸರಿ, ಮುಂದುವರಿ, ಸ್ಥಳದಿಂದ ಸ್ಥಳಕ್ಕೆ ಹೋಗು.
  2. (ವಿಮಾನದ ವಿಷಯದಲ್ಲಿ) ಎಂಜಿನ್ನಿನ ಶಕ್ತಿ ಬಳಸದೆ, ಎಂಜಿನ್ನಿಲ್ಲದೆ ಹಾರು.
  3. ಜಾರು; ಮೌನವಾಗಿ, ಸದ್ದಿಲ್ಲದೆ, ಯಾರಿಗೂ ತಿಳಿಯದಂತೆ – ಜಾರಿಕೊ, ನುಸುಳು, ಹೋಗು.
  4. (ಕಾಲ ಮೊದಲಾದವುಗಳ ವಿಷಯದಲ್ಲಿ) ಸರಿದುಹೋಗು; ಜಾರಿಹೋಗು; ಮೆಲ್ಲಗೆ, ತಿಳಿಯದಂತೆ, ಅರಿವೇ ಆಗದೆ – ಕಳೆದುಹೋಗು.
  5. (ಕ್ರಮಕ್ರಮವಾಗಿ, ಅರಿವಾಗದೆಯೇ ಬೇರೊಂದರೊಡನೆ) ಬೆರೆತು ಹೋಗು; ಲೀನವಾಗಿ ಹೋಗು.
See also 1glide
2glide ಗ್ಲೈಡ್‍
ನಾಮವಾಚಕ
  1. ಜಾರುವುದು; ಸರಿತ; ಜಾರಿಕೆ; ಜಾರಿ, ಸರಿದು ಹೋಗುವುದು.
  2. (ಸಂಗೀತ) ಸ್ವರಜಾರು; ಗಾಯನ ಯಾ ವಾದನವನ್ನು ನಿಲ್ಲಿಸದೆ, ಸ್ವರಸ್ಥಾನವನ್ನು ಬದಲಾಯಿಸುವಾಗ ಉಂಟಾಗುವ ಸ್ವರವಾಹಿನಿ.
  3. (ಧ್ವನಿವಿಜ್ಞಾನ) ಧ್ವನಿಜಾರು; ಉಚ್ಚಾರಣೆಯನ್ನು ಮಾಡುತ್ತಿರುವಂತೆಯೇ ಉಚ್ಚಾರಣಾಂಗಗಳ ಸ್ಥಾನವನ್ನು ವ್ಯತ್ಯಾಸ ಮಾಡಿದಾಗ ಹೊರಡುವ, ಕ್ರಮೇಣ ವ್ಯತ್ಯಾಸವಾಗುವ ಧ್ವನಿ.
  4. (ಕ್ರಿಕೆಟ್‍) = 2glance \((2)\)
  5. ಜಾರು ಕುಣಿತ; ಜಾರುನರ್ತನ ಯಾ ಜಾರು ನರ್ತನದ ಹೆಜ್ಜೆ.
  6. ಗ್ಲೈಡರ್‍ ವಿಮಾನದಲ್ಲಿ ಹಾರಾಟ.