glib ಗ್ಲಿಬ್‍
ಗುಣವಾಚಕ
  1. (ವಿರಳ ಪ್ರಯೋಗ) (ಮೇಲ್ಮೈ ಮೊದಲಾದವುಗಳ ವಿಷಯದಲ್ಲಿ) ನುಣುಪಾದ; ನಯವಾದ; ಪ್ರತಿಬಂಧ ಉಂಟುಮಾಡದ.
  2. (ಪ್ರಾಚೀನ ಪ್ರಯೋಗ) (ಚಲನೆಯ ವಿಷಯದಲ್ಲಿ) ಅಡೆತಡೆಯಿಲ್ಲದ; ಸರಾಗವಾದ; ಸಲೀಸಾದ; ಸುಗಮವಾದ.
  3. (ಮಾತು, ಭಾಷಣ, ಮೊದಲಾದವುಗಳ ವಿಷಯದಲ್ಲಿ)
    1. ನಿರರ್ಗಳವಾದ; ತಡೆಬಡೆಯಿಲ್ಲದ; ಪ್ರವಾಹದಂತಿರುವ.
    2. ಆಶು; ಸಿದ್ಧತೆ ಬೇಕಿಲ್ಲದ; ತಕ್ಷಣ ಮಾಡಬಹುದಾದ.
    3. (ವಿಚಾರಪೂರ್ಣವಾಗಿ, ಪ್ರಾಮಾಣಿಕವಾಗಿ ಇರುವುದರ ಬದಲು) ಮಾತಿನ ಸುರಿಮಳೆಯ; ವಾಗ್ಝರಿಯ; ಕೇವಲ ವಾಗಾಡಂಬರದ.