glee ಗ್ಲೀ
ನಾಮವಾಚಕ
  1. ಚಾರಣ ಗೀತೆ; ಪಕ್ಕವಾದ್ಯವಿಲ್ಲದೆ ಹಾಡುವ ಸಮೂಹ ಗೀತೆ; ಕೃತಿಯ ಒಂದೊಂದು ಭಾಗಕ್ಕೂ ಒಬ್ಬೊಬ್ಬರಂತೆ ಮೂರು ಯಾ ಇನ್ನೂ ಹೆಚ್ಚು ಮಂದಿಯ (ಮುಖ್ಯವಾಗಿ ಪ್ರಾಪ್ತವಯಸ್ಕ ಪುರುಷರ) ಶಾರೀರಗಳಿಗೆ ಅಳವಡಿಸಿ, ಗಂಭೀರವೋ ಲಘುವೋ ಅದ ಪದಸರಣಿಯಲ್ಲಿ ಹೆಣೆದು, ಹಲಮೊಮ್ಮೆ ಪರಸ್ಪರ ವೈದೃಶ್ಯವುಳ್ಳ ಲಯಗಳಲ್ಲಿ ಸಂಚರಿಸುವ ಮತ್ತು ಪಕ್ಕವಾದ್ಯಗಳಿಲ್ಲದೆಯೇ ಹಾಡಲು ಯೋಗ್ಯವಾದ, ಸಂಗೀತ ಕೃತಿ.
  2. ಗೆಲುವು; ಹಿಗ್ಗು; ಹರ್ಷ; ಉಲ್ಲಾಸ ತುಂಬಿ ಹೊರಹೊಮ್ಮುವ ಸಂತೋಷ.