glazing ಗ್ಲೇಸಿಂಗ್‍
ನಾಮವಾಚಕ

(ಕಿಟಕಿ, ಚಿತ್ರಪಟ, ಮೊದಲಾದವುಗಳಿಗೆ) ಗಾಜು – ಹಾಕುವುದು, ಜೋಡಿಸುವುದು.

  1. (ಕಟ್ಟಡಕ್ಕೆ) ಗಾಜಿನ ಕಿಟಕಿಗಳನ್ನು ಇಡುವುದು, ಹವಣಿಸುವುದು.
  2. (ಮಡಕೆ, ಕುಡಿಕೆ, ಮೊದಲಾದವುಗಳಿಗೆ) ಗಾಜುಬಣ್ಣ ಕಚ್ಚಿಸುವುದು.
  3. (ಬಟ್ಟೆ, ಕಾಗದ, ತೊಗಲು, ಹಿಟ್ಟಿನಲ್ಲಿ ಮಾಡಿದ ಭಕ್ಷ್ಯಗಳು, ಮೊದಲಾದವುಗಳಿಗೆ) ಗಾಜು ಮೆರಗು ಕೊಡುವುದು; ನಯವಾದ ಹೊಳಪುಮೈ ಕೊಡುವುದು.
  4. (ಕಣ್ಣನ್ನು ಕಣ್ಣೀರು ಮೊದಲಾದವುಗಳ) ಪೊರೆ ಮುಚ್ಚುವುದು.
  5. ಗಾಜು (ಬಣ್ಣದ) ಲೇಪನ; ಬಣ್ಣ ಬಳಿದ ಮೇಲ್ಮೈಗೆ ಅದರ ಬಣ್ಣದ ಹೊಳಪು ಬದಲಾಯಿಸುವಂತೆ ಬೇರೊಂದು ಪಾರದರ್ಶಕ ಬಣ್ಣವನ್ನು ತೆಳುವಾಗಿ ಬಳಿಯುವುದು.
  6. (ಉಜ್ಜುವುದು ಮೊದಲಾದವುಗಳಿಂದ ಗಾಜಿನಂತೆ) ಹೊಳಪುಮೈ ಕೊಡುವುದು.
  7. (ಮುಖ್ಯವಾಗಿ ಕಣ್ಣುಗಳ ವಿಷಯದಲ್ಲಿ) ಗಾಜಿನಂತಾಗುವುದು; ಗಾಜಿನಂತೆ ಮಂದ ದೃಷ್ಟಿಯಾಗುವುದು.
  8. ಕಿಟಕಿ ಗಾಜುಗಳು.
  9. ಮೆರುಗು; ಮೆರುಗು ಯಾ ಹೊಳಪು ಕೊಡಲು ಬಳಸುವ ಸಾಮಗ್ರಿ.