See also 2glaze
1glaze ಗ್ಲೇಸ್‍
ಸಕರ್ಮಕ ಕ್ರಿಯಾಪದ
  1. (ಕಿಟಕಿ, ಚಿತ್ರಪಟ, ಮೊದಲಾದವುಗಳಿಗೆ) ಗಾಜು – ಹಾಕು, ಜೋಡಿಸು.
  2. (ಕಟ್ಟಡಕ್ಕೆ) ಗಾಜಿನ ಕಿಟಕಿಗಳನ್ನು – ಹಾಕು, ಹವಣಿಸು.
  3. (ಮಡಕೆ, ಕುಡಿಕೆ, ಮೊದಲಾದವುಗಳಿಗೆ ಗಾಜಾಗುವ ಪದಾರ್ಥ ಬಳಿದು ಕರಗಿಸಿ) ಗಾಜುಮೈ ಕೊಡು; ಗಾಜಿನ ಹೊರಮೈ ಉಂಟುಮಾಡು; ಗಾಜುಲೇಪ ಕೊಡು.
  4. (ಮಡಕೆ, ಕುಡಿಕೆ, ಮೊದಲಾದವುಗಳಿಗೆ ಈ ವಿಧಾನದಿಂದ) ಬಣ್ಣ ಹಚ್ಚು.
  5. (ಬಟ್ಟೆ, ಕಾಗದ, ತೊಗಲು, ಹಿಟ್ಟಿನಲ್ಲಿ ಮಾಡಿದ ಭಕ್ಷ್ಯಗಳು, ಮೊದಲಾದವುಗಳಿಗೆ) ಗಾಜುಮೈ ಕೊಡು; ಗಾಜು ಮೆರಗು ಕೊಡು; ನಯವಾದ ಹೊಳಪುಮೈ ಕೊಡು.
  6. (ಕಣ್ಣನ್ನು) (ಕಣ್ಣೀರು ಮೊದಲಾದವುಗಳ) ಪೊರೆ ಮುಚ್ಚು.
  7. ಗಾಜು ಬಳಿ; ಗಾಜುಲೇಪ ಬಳಿ; (ಬಣ್ಣ ಬಳಿದ ಮೇಲ್ಮೈಯನ್ನು) ಅದರ ಬಣ್ಣದ ಹೊಳಪನ್ನು ಬದಲಾಯಿಸುವಂತೆ ಬೇರೊಂದು ಪಾರದರ್ಶಕ ಬಣ್ಣವನ್ನು ತೆಳುವಾಗಿ ಬಳಿ, ಸವರು.
  8. (ಉಜ್ಜುವುದು ಮೊದಲಾದವುಗಳಿಂದ) ಹೊಳಪು ಕೊಡು; ಮೆರಗು ಕೊಡು; ಗಾಜಿನಂತೆ ಹೊಳೆಯುವ ಮೇಲ್ಮೈ ಕೊಡು.
ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಕಣ್ಣುಗಳ ವಿಷಯದಲ್ಲಿ) ಗಾಜಿನಂತಾಗು; ನಿಸ್ತೇಜವಾಗು; ಕಾಂತಿರಹಿತವಾಗು.

ಪದಗುಚ್ಛ

glaze in (ಸುತ್ತಲೂ) ಗಾಜು ಹಾಕು; ಗಾಜಿನ ಆವರಣ ಕೊಡು.

See also 1glaze
2glaze ಗ್ಲೇಸ್‍
ನಾಮವಾಚಕ
  1. ಗ್ಲೇಸು; ಕರಗಿಸಿದಾಗ ಗಾಜಾಗುವ ಪದಾರ್ಥ.
  2. ಗಾಜುಮೈ; ಇಂತಹ ಪದಾರ್ಥವನ್ನು ಬಳಿಯುವುದರಿಂದಾದ ನುಣುಪು ಮೈ.
  3. (ಬಟ್ಟೆ, ತೊಗಲು, ಹಿಟ್ಟಿನಲ್ಲಿ ಮಾಡಿದ ಭಕ್ಷ್ಯಗಳು, ಮೊದಲಾದವುಗಳಿಗೆ ಕೊಟ್ಟ) ಗಾಜು ಮೆರಗು:
    1. ನುಣುಪಾದ ಹೊಳಪು ಲೇಪ.
    2. ಹೀಗಾದ ಹೊಳಪು ಮೈ.
  4. (ಕಣ್ಣೀರು ಮೊದಲಾದ) ಪೊರೆ ಮುಚ್ಚಿದ ನೋಟ.
  5. ಗಾಜು ಲೇಪ; (ಬಣ್ಣ ಬಳಿದ ಮೇಲ್ಮೈಯ ಬಣ್ಣದ ಹೊಳಪನ್ನು ಬದಲಾಯಿಸಲು) ಬೇರೊಂದು ಪಾರದರ್ಶಕ ಬಣ್ಣವನ್ನು ತೆಳುವಾಗಿ ಬಳಿದ ಲೇಪ.
  6. ಮೆರುಗು; ಹೊಳಪು; ಮೆರುಗು ಯಾ ಹೊಳಪು ಕೊಟ್ಟದ್ದರಿಂದ ಕಾಣುವ ಪ್ರಕಾಶ.
  7. (ಅಮೆರಿಕನ್‍ ಪ್ರಯೋಗ) (ತಿಂಡಿ ತಿನಿಸುಗಳಿಗೆ ಬಳಿಯುವ) ಸಕ್ಕರೆಯ ಯಾ ಹಿಟ್ಟಿನ ಲೇಪ.