glassy ಗ್ಲಾಸಿ
ಗುಣವಾಚಕ
  1. ಗಾಜಿನ ಲಕ್ಷಣಗಳುಳ್ಳ.
  2. ಗಾಜಿನಂಥ; ಗಾಜನ್ನು ಹೋಲುವ.
  3. (ಕಣ್ಣು ಮೊದಲಾದವುಗಳ ವಿಷಯದಲ್ಲಿ)
    1. ಹೊಳಪಿಲ್ಲದ; ಕಾಂತಿ ರಹಿತ; ನಿಸ್ತೇಜ; ಮಂಕಾದ.
    2. ಚಲಿಸದ; ನಿಶ್ಚಲ; ದೃಷ್ಟಿ ನಿಂತುಹೋಗಿರುವ.
  4. (ನೀರಿನ ವಿಷಯದಲ್ಲಿ) (ಗಾಜಿನಂತೆ) ಹೊಳಪುಳ್ಳದ್ದೂ ಪಾರದರ್ಶಕವೂ ಸಮತಲ ಶರೀರವುಳ್ಳದ್ದೂ ಆದ; ನಿಶ್ಚಲವೂ ಪ್ರಶಾಂತವೂ ಪ್ರಕಾಶಮಯವೂ ಆದ: glassy surface ಗಾಜಿನ ಮೇಲ್ಮೈ; ಗಾಜಿನಂತೆ ಸಮತಲವೂ, ನಯವಾದುದೂ ಪ್ರಕಾಶಮಯವೂ ಆದ ಹೊರಮೈ.