See also 2gland
1gland ಗ್ಲಾಂಡ್‍
ನಾಮವಾಚಕ

(ಶರೀರ ವಿಜ್ಞಾನ) ಗ್ರಂಥಿ:

  1. ರಕ್ತದಿಂದ ನಿರ್ದಿಷ್ಟ ಪದಾರ್ಥಗಳನ್ನು ಆಯ್ದು, ದೇಹದ ಉಪಯೋಗಕ್ಕಾಗಿ ಯಾ ದೇಹದಿಂದ ಹೊರಹಾಕುವುದಕ್ಕಾಗಿ ಅದನ್ನು ಸೂಕ್ತ ರೀತಿ ಮಾರ್ಪಡಿಸುವ ವಿಶಿಷ್ಟ ಜೀವಕೋಶಗಳಿಂದಾದ ಅಂಗ.
  2. (ಸಸ್ಯವಿಜ್ಞಾನ) ದ್ರವವಿಶೇಷಗಳನ್ನು ಸ್ರವಿಸುವ, ಸಸ್ಯದ ಮೈಮೇಲಿನ ಕೋಶ ಯಾ ಕೋಶಸಮೂಹ.
See also 1gland
2gland ಗ್ಲಾಂಡ್‍
ನಾಮವಾಚಕ

(ಯಂತ್ರಶಾಸ್ತ್ರ) ಗ್ಲ್ಯಾಂಡು; ಪಿಸ್ಟನ್‍ ಬಳೆ; ಪಿಸ್ಟನ್ನನ್ನು ಸಿಲಿಂಡರಿನೊಳಕ್ಕೆ ಪ್ರವೇಶ ಮಾಡುವ ಸ್ಥಳದಲ್ಲಿ ಅನಿಲ ಯಾ ಉಗಿ ಸೋರಿಹೋಗದಂತೆ ಪಿಸ್ಟನ್ನಿಗೆ ತೊಡಿಸಿರುವ ಬಳೆ.