See also 2glamour
1glamour ಗ್ಲಾಮರ್‍
ನಾಮವಾಚಕ
  1. ಮಂತ್ರಶಕ್ತಿ; ಮಾಯಾಜಾಲ; ಕಣ್ಕಟ್ಟು; ಇಂದ್ರಜಾಲ; ಮಾಟ; ಮೋಹನ ವಿದ್ಯೆ ಯಾ ಶಕ್ತಿ: this species of witchcraft is well known in Scotland as the glamour ಈ ಬಗೆಯ ಮಾಟಗಾರಿಕೆಗೆ ಸ್ಕಾಟ್ಲಂಡಿನಲ್ಲಿ ಮಾಯಾಜಾಲವೆಂದು ಹೆಸರು.
  2. ಮೋಹಕ ಲಾವಣ್ಯ; ಭ್ರಮೆಗೊಳಿಸುವ ಯಾ ಮನಮೋಹಕವಾದ ಸೌಂದರ್ಯ ಮತ್ತು ಆಕರ್ಷಣೆ.
  3. (ಮುಖ್ಯವಾಗಿ ಹೆಂಗಸಿನ) ದೈಹಿಕ ಸೌಂದರ್ಯ; ಸೊಬಗಿನ ಮೈಮಾಟ; ಶರೀರ ಲಾವಣ್ಯ.
ಪದಗುಚ್ಛ

cast a glamour over ಸಂಮೋಹನಗೊಳಿಸು; ಮಾಯಾಜಾಲ ಬೀಸು; ಮರುಳುಮಾಡು; ಮಂತ್ರಶಕ್ತಿ ಬೀರು; ಮಂತ್ರಮುಗ್ಧಗೊಳಿಸು; ಮೋಹಕ ಲಾವಣ್ಯದಿಂದ ಮನಸ್ಸು ಸೆಳೆ.

See also 1glamour
2glamour ಗ್ಲಾಮರ್‍
ಸಕರ್ಮಕ ಕ್ರಿಯಾಪದ
  1. ಮಾಯಾಜಾಲ ಬೀಸು; ಇಂದ್ರಜಾಲಕ್ಕೊಳಪಡಿಸು; ಮಂತ್ರಮುಗ್ಧನನ್ನಾಗಿಸು; ಮಾಟಕ್ಕೆ ವಶಮಾಡಿಕೊ; ಮೋಡಿ ಹಾಕು.
  2. ಮೋಹಗೊಳಿಸು; ಮೋಹಕ್ಕೆ – ಸಿಕ್ಕಿಸು, ಬೀಳಿಸು, ವಶಪಡಿಸು.
  3. (ಆಡುಮಾತು) ಮನಮೋಹಕಗೊಳಿಸು.