glacial ಗ್ಲೇಸಿಅಲ್‍, ಗ್ಲೇಷಲ್‍
ಗುಣವಾಚಕ
  1. ಹಿಮಗಡ್ಡೆಯ; ನೀರ್ಗಲ್ಲಿನ; ಹಿಮಶಿಲೆಯ.
  2. ಹಿಮಗಡ್ಡೆಯಂತಹ; ಹಿಮಶಿಲೆಯಂಥ; ನೀರ್ಗಲ್ಲಿನಂತಹ.
  3. (ಹಿಮಗಡ್ಡೆಯಂತೆ) ಕೊರೆಯುವ; ವಿಪರೀತ ಶೈತ್ಯದ; ಅತಿಶೀತಲವಾದ.
  4. (ರಸಾಯನವಿಜ್ಞಾನ) ಹಿಮವತ್‍; ಘನೀಕರಿಸಿದಾಗ ಹಿಮಗಲ್ಲಿನಂತಿರುವ: glacial phosphoric acid ಹಿಮವತ್ಪಾಸಾರಿಕಾಮ್ಲ.
  5. (ಭೂವಿಜ್ಞಾನ)
    1. ಹಿಮವಿರುವ; ಹಿಮಶಿಲಾ ವಿಶಿಷ್ಟ; ನೀರ್ಗಲ್ಲುಳ್ಳ.
    2. ಹಿಮಶಿಲಾಕೃತ; ಹಿಮಗಲ್ಲಿನ ಪರಿಣಾಮದಿಂದಾದ.
  6. (ರೂಪಕವಾಗಿ) ನಿರ್ಭಾವದ; ಭಾವರಹಿತ; ಭಾವಶೂನ್ಯ: a glacial stare ಭಾವಶೂನ್ಯ ಬಿರುನೋಟ.