gizzard ಗಿಸರ್ಡ್‍
ನಾಮವಾಚಕ
  1. (ಮೊದಲನೆಯ ಜಠರದಲ್ಲಿ ಜೀರ್ಣರಸದೊಡನೆ ಮಿಶ್ರವಾದ ಆಹಾರವನ್ನು ಅರೆಯಲು ಇರುವ) ಹಕ್ಕಿಯ ಎರಡನೆಯ ಜಠರ.
  2. (ಕೆಲವು ಬಗೆಯ ಈನು, ಹುಳು, ಚಿಪ್ಪುಪ್ರಾಣಿ, ಮೊದಲಾದವುಗಳ) ಸ್ನಾಯುಜಠರ; ಹೆಚ್ಚು ಬಲವುಳ್ಳ ಸ್ನಾಯುಗಳಿಂದ ಕೂಡಿದ ಜಠರ.
ನುಡಿಗಟ್ಟು
  1. fret one’s gizzard ಚಿಂತೆಪಡು; ತೊಂದರೆಪಡು; ಕ್ಲೇಶಪಟ್ಟುಕೊ; ಜಂಜಾಟಪಡು; ಮನಸ್ಸಿಗೆ ಹಚ್ಚಿಕೊ.
  2. stick in one’s gizzard ರುಚಿಸದಿರು; ಸೇರದಿರು; ಹಿತವೆನಿಸದಿರು; ಸಹ್ಯವಾಗದಿರು: it sticks in my gizzard ಅದು ನನಗೆ ರುಚಿಸದು.