See also 2give
1give ಗಿವ್‍
ಕ್ರಿಯಾಪದ
(ಭೂತರೂಪ gave ಉಚ್ಚಾರಣೆ ಗೇವ್‍; ಭೂತಕೃದಂತ given).
ಸಕರ್ಮಕ ಕ್ರಿಯಾಪದ
  1. ಕೊಡು; ನೀಡು; ಈಯು.
  2. ಉಚಿತವಾಗಿ ಕೊಡು; ಬಹುಮಾನವಾಗಿ – ನೀಡು, ದಯಪಾಲಿಸು.
  3. (ವಸ್ತು ಮೊದಲಾದವನ್ನು ವಾಸ್ತವವಾಗಿ ಕೊಟ್ಟು ಯಾ ಕೊಡದೆಯೇ) ಸ್ವಾಮ್ಯ ಕೊಡು; ವಶಪಡಿಸು; ಸ್ವಾಧೀನ ಮಾಡು.
  4. (ಪ್ರೀತಿ, ಸ್ನೇಹ, ಗೌರವ, ಮೊದಲಾದವನ್ನು) ನೀಡು; ದಯಪಾಲಿಸು; ಅನುಗ್ರಹಿಸು; ಕರುಣಿಸು; ಪ್ರದಾನ ಮಾಡು: give me the liberty ನನಗೆ ಸ್ವಾತಂತ್ರ್ಯವನ್ನು ದಯಪಾಲಿಸು.
  5. (ತನ್ನ ಹೃದಯ, ಪ್ರೀತಿ, ವಿಶ್ವಾಸ, ನಂಬಿಕೆ) ಸಮರ್ಪಿಸು; ಕೊಡು; ನೀಡು; ಒದಗಿಸು: he does not readily give a stranger his confidence ಅವನು ಅಪರಿಚಿತರಲ್ಲಿ ಕೂಡಲೆ ವಿಶ್ವಾಸ ಇಡುವುದಿಲ್ಲ.
  6. (ದೇವರು ಮೊದಲಾದವರ ವಿಷಯದಲ್ಲಿ) (ಶಕ್ತಿ, ಸಾಮರ್ಥ್ಯ, ಮೊದಲಾದವನ್ನು) ಕರುಣಿಸು; ಅನುಗ್ರಹಿಸು; ಸಲ್ಲಿಸು; ಕೊಡು.
  7. ಆಸ್ತಿ ಬಿಡು; ಆಸ್ತಿ – ಬರೆದುಕೊಡು, ವಹಿಸಿಕೊಡು: I give and devise my polyglot Bible ನಾನು ನನ್ನ ಬಹುಭಾಷೆಗಳ ಬೈಬಲ್‍ ಗ್ರಂಥವನ್ನು ಆಸ್ತಿಯಾಗಿ ಬಿಡುತ್ತೇನೆ.
  8. (ಸಾಮಾನ್ಯವಾಗಿ in marriage ಜೊತೆ ಪ್ರಯೋಗ) (ಮಗಳು ಮೊದಲಾದವರನ್ನು) ಮದುವೆಮಾಡಿಕೊಡು: he would not give his daughter in marriage to a stranger ಅಪರಿಚಿತನಿಗೆ ಮಗಳನ್ನು ಮದುವೆ ಮಾಡಿಕೊಡಲು ಅವನು ಒಪ್ಪಲಿಲ್ಲ.
  9. (ಸ್ವಾಮ್ಯಕ್ಕೆ ಸಂಬಂಧಿಸಿರದಂತೆ) ವಹಿಸಿಕೊಡು.
  10. (ಸುದ್ದಿ, ಶುಭಾಶಯ, ಮೊದಲಾದವುಗಳನ್ನು) ಕೊಡು; ತಲುಪಿಸು; ಮುಟ್ಟಿಸು.
  11. (ಆಹಾರ ಮೊದಲಾದವನ್ನು) ಬಡಿಸು; ನೀಡು.
  12. (ಔಷಧಿ) ಕೊಡು; ನೀಡು.
  13. ಒಪ್ಪಿಸು; ವಹಿಸು; ಅರ್ಪಿಸು; ಸುಫರ್ದಿಗೆ ಕೊಡು; ವಶಕ್ಕೆ ಕೊಡು: give into custody ಪೊಲೀಸನ ವಶಕ್ಕೆ ಕೊಡು. give in charge ವಶಕ್ಕೆ ವಹಿಸು.
  14. ಭಾಷೆ ಕೊಡು; ಮಾತುಕೊಡು; ಆಣೆ ಇಡು; ಪ್ರಮಾಣಮಾಡು: give one’s word, honour, etc. ತನ್ನ ಮಾತು ಕೊಡು; ತನ್ನ ಗೌರವದ ಮೇಲೆ ಆಣೆ ಇಡು. I gave them the word of a sailor ನಾನು ಅವರಿಗೆ ನಾವಿಕನ ವಚನ ಕೊಟ್ಟೆ.
  15. (ಯಾವುದೇ ಪದಾರ್ಥ ಯಾ ಹಣವನ್ನು) ಪ್ರತಿಯಾಗಿ ಕೊಡು; ಬದಲಿಗೆ ಕೊಡು; ವಿನಿಮಯವಾಗಿ ಕೊಡು: what will you give for my car ನನ್ನ ಕಾರಿಗೆ ಪ್ರತಿಯಾಗಿ ನೀನು ಏನನ್ನು ಯಾ ಎಷ್ಟು ಹಣವನ್ನು ಕೊಡುತ್ತೀಯೆ?
  16. ಹಣಕೊಡು; ಪಾವತಿಮಾಡು; ಬಟವಾಡೆಮಾಡು; ಸಲ್ಲಿಸು; ಸಂದಾಯಮಾಡು.
  17. (ಬೆಲೆಗೆ) ಮಾರು; ಮಾರಾಟಮಾಡು.
  18. ಈಸಲಿಡು; ಮುಡುಪಿಡು; ಒಪ್ಪಿಸಿಬಿಡು; ಅರ್ಪಿಸು; ಸಮರ್ಪಿಸು; ನಿವೇದಿಸು; ವಿನಿಯೋಗಿಸು: gave his life to the nation ರಾಷ್ಟ್ರಕ್ಕಾಗಿ ತನ್ನ ಬಾಳನ್ನು ಮುಡುಪಿಟ್ಟ, ಸಮರ್ಪಿಸಿದ. much given to these pursuits ಈ ಹವ್ಯಾಸಗಳಿಗೆ ಬಹಳ ನಿರತವಾಗಿ.
  19. ಕೊಡು; (ಮುಖ್ಯವಾಗಿ ಇನ್ನೊಬ್ಬನ ಮೇಲೆ) ಪರಿಣಾಮ ಉಂಟುಮಾಡಲು ಕಾರ್ಯ ಯಾ ಪ್ರಯತ್ನ ಮಾಡು: give him a kick ಅವನಿಗೆ ಒಂದು ಲಾತ, ಒದೆ ಕೊಡು. give orders ಆಜ್ಞೆ ಕೊಡು. give person one’s blessing (ವ್ಯಕ್ತಿಯನ್ನು) ಆಶೀರ್ವದಿಸು; ಹರಸು. give you joy (ದೇವರು) ನಿನಗೆ ಸಂತೋಷ ಕೊಡಲಿ; ನಿನಗೆ ಸಂತೋಷವಾಗಲಿ.
  20. (ಆಡುಮಾತು) (ಮುಖ್ಯವಾಗಿ ಒಪ್ಪಿಗೆಯಾಗದಿರುವ ಯಾವುದನ್ನೇ) ಹೇಳು; ಕೊಡು.
  21. (ತೀರ್ಪು ಮೊದಲಾದವನ್ನು ಅಧಿಕಾರಪೂರ್ವಕವಾಗಿ) ಕೊಡು; ನೀಡು; ಹೇಳು; ತಿಳಿಸು: give batsman out or not out (ಕ್ರಿಕೆಟ್ಟಿನ ಅಂಪೈರಿನ ವಿಷಯದಲ್ಲಿ) ಬ್ಯಾಟುಗಾರನನ್ನು ಔಟಾದನೆಂದು ಯಾ ಔಟಾಗಲಿಲ್ಲವೆಂದು ಹೇಳು. give the case for or against person ವ್ಯಕ್ತಿಯ ಪರವಾಗಿ ಯಾ ವಿರುದ್ಧವಾಗಿ ತೀರ್ಪುಕೊಡು.
  22. (ಭೂತಕೃದಂತದಲ್ಲಿ) (ದಾಖಲೆ ಪತ್ರದ ವಿಷಯದಲ್ಲಿ) ತಾರೀಖು ಹಾಕು, ಕೊಡು.
  23. ಆತಿಥೇಯನಾಗಿ (ನೃತ್ಯಕೂಟ, ಸಂತೋಷಕೂಟ, ಭೋಜನಗಳನ್ನು) ಏರ್ಪಡಿಸು: intended giving the young ladies a ball ತರುಣಿಯರಿಗೆ ನೃತ್ಯಕೂಟವನ್ನು ಏರ್ಪಡಿಸಲು ಉದ್ದೇಶಿಸಿದ್ದನು.
  24. ಕೊಡು; ನೀಡು; ಒಡ್ಡು: give person one’s hand ಕೈನೀಡು; ಹಸ್ತಲಾಘವ ಕೊಡು.
  25. ಹೊರಗೆಡಹು; ಪ್ರಕಟಿಸು; ಪ್ರದರ್ಶಿಸು; ಕಾಣಿಸು; ತೋರಿಸು: Prajavani gives the facts ಪ್ರಜಾವಾಣಿ ಪತ್ರಿಕೆ ನಡೆದ ಸಂಗತಿಗಳನ್ನು ಹೊರಗೆಡಹುತ್ತದೆ, ಪ್ರಕಟಿಸುತ್ತದೆ. gives no sign of life ಬದುಕಿರುವ ಚಿಹ್ನೆಯನ್ನೇ ತೋರುವುದಿಲ್ಲ. thermometer gives $80^\circ$ in the shade ತಾಪಮಾಪಕವು ನೆರಳಿನಲ್ಲಿ $80^\circ$ ತೋರಿಸುತ್ತದೆ.
  26. (ಯಾವುದೇ ಪಠ್ಯಭಾಗ, ನಾಟಕ, ಮೊದಲಾದವನ್ನು) ಓದು, ವಾಚನಮಾಡು, ಹಾಡು, ಅಭಿನಯಿಸು, ನಟಿಸು, ಆಡು ಯಾ ಪ್ರದರ್ಶಿಸು: he promised to give another chapter out of his book ಅವನು ತನ್ನ ಪುಸ್ತಕದಿಂದ ಇನ್ನೊಂದು ಅಧ್ಯಾಯವನ್ನು ಓದುವುದಾಗಿ ಮಾತುಕೊಟ್ಟನು. who will give us a song? ನಮ್ಮ ಮುಂದೆ ಯಾರು ಹಾಡು ಹೇಳುತ್ತಾರೆ? the opera was given again ಗೀತನಾಟಕವನ್ನು ಮತ್ತೊಮ್ಮೆ ಪ್ರದರ್ಶಿಸಲಾಯಿತು.
  27. ಪಾಲ್ಗೊಳ್ಳುವಂತೆ ಮಾಡು; ಭಾಗಿಯಾಗಿಸು; ಹಂಚು: give me his sore throat ಅವನ ಗಂಟಲ ನೋವನ್ನು ನನಗೆ ಕೊಟ್ಟ.
  28. ಮೂಲವಾಗು; ಕಾರಣವಾಗು; ಮೂಲ ಒದಗಿಸು: gave its name to the battle ಯುದ್ಧಕ್ಕೆ ಅದರ ಹೆಸರು ಬಂದಿತು (ಮೂಲವಾಯಿತು).
  29. (ಪಾಲೆಂದು, ಪಾಲಿಗೆ, ವಶಕ್ಕೆ) ಕೊಡು: give him the best room available ಇರುವುದರಲ್ಲಿ ಅತ್ಯುತ್ತಮವಾದ ಕೊಠಡಿಯನ್ನು ಅವನಿಗೆ ಕೊಡು. he was given the contract ಅವನಿಗೆ ಗುತ್ತಿಗೆ ಕೊಡಲಾಯಿತು.
  30. ಕರೆ; ಹೆಸರು ಕೊಡು; ನಾಮಕರಣ ಮಾಡು: he gave the child the name John ಅವನು ಮಗುವನ್ನು ಜಾನ್‍ ಎಂದು ಕರೆದ.
  31. ಆರೋಪಿಸು; ಸೇರಿದುದೆಂದು – ಹೇಳು, ತಿಳಿಸು, ಎಣಿಸು: a good argument for giving the painting to Rembrandt ವರ್ಣಚಿತ್ರವನ್ನು ರೆಂಬ್ರಾಂಟನದೆಂದು ಹೇಳಲು ಒಳ್ಳೆಯ ವಾದ.
  32. (ನಿಜವೆಂದು) ಇಟ್ಟುಕೊ; ಎಣಿಸು; ಭಾವಿಸು; ತಿಳಿದುಕೊ: given good health, the work is possible ಆರೋಗ್ಯ ಚೆನ್ನಾಗಿರುವುದೆಂದು ಇಟ್ಟುಕೊಡರೆ ಈ ಕೆಲಸ ಸಾಧ್ಯ.
  33. (ಫಲವಾಗಿ, ಉತ್ಪನ್ನವಾಗಿ) ನೀಡು; ಕೊಡು: analysis gives the following figures ವಿಶ್ಲೇಷಣೆಯು ಈ ಮುಂದಿನ ಅಂಕಿ ಸಂಖ್ಯೆಗಳನ್ನು ಕೊಡುತ್ತದೆ; ವಿಶ್ಲೇಷಣೆಯಿಂದ ಈ ಮುಂದಿನ ಅಂಕಿಸಂಖ್ಯೆಗಳು ಹೊರಡುತ್ತವೆ. lamp gives a dim light ದೀಪ ಮಂದ ಬೆಳಕನ್ನು ನೀಡುತ್ತದೆ.
  34. ಉಂಟುಮಾಡು; ಎಡೆಗೊಡು; ಆಸ್ಪದ – ಕೊಡು, ಕಲ್ಪಿಸು; ಕಾರಣವಾಗು; ಅವಕಾಶಮಾಡಿಕೊಡು: solitude gives it its only charm ಅದರ ಸೊಬಗಿಗೆ ಏಕಾಂತತೆ ಒಂದೇ ಕಾರಣ. gave me much pain ನನಗೆ ಬಹಳ ನೋವುಂಟುಮಾಡಿತು. this gives him a right to complain ಇದು ಅವನಿಗೆ ದೂರು ಕೊಡುವ ಅವಕಾಶ ನೀಡುತ್ತದೆ. gave myself an hour to go there ಅಲ್ಲಿಗೆ ಹೋಗಲು ಒಂದು ಗಂಟೆ (ಅವಕಾಶ) ಕೊಟ್ಟುಕೊಂಡೆ. give him one minute start ಅವನಿಗೆ ಒಂದು ನಿಮಿಷ ಮುಂಚೆ ಹೋಗುವ ಅವಕಾಶ ಕೊಡು.
ಅಕರ್ಮಕ ಕ್ರಿಯಾಪದ
  1. ದಾನಕೊಡು; ಧರ್ಮಮಾಡು; ಭಿಕ್ಷೆ ಯಾ ಕೊಡುಗೆಯನ್ನು ನೀಡು.
  2. ತನಗೆ ತಿಳಿದಿರುವುದನ್ನು ಹೇಳು, ತಿಳಿಸು.
  3. ಕುಸಿ; ಕುಸಿದು ಬೀಳು; ಒತ್ತಡಕ್ಕೆ ಬಗ್ಗು: the haystack is giving ಹುಲ್ಲುಮೆದೆ ಕುಸಿಯುತ್ತಿದೆ.
  4. ಬಿಗಿ ಕಳೆದುಕೊ; ಸಡಿಲವಾಗು: rendered useless by his knee giving ಅವನ ಮಂಡಿ ಸಡಿಲವಾಗಿ ಪ್ರಯೋಜನಕ್ಕೆ ಬರದ ಹಾಗಾಯಿತು.
  5. ಸ್ಥಳ ಕೊಡು; ಅವಕಾಶ ನೀಡು; ಆಸ್ಪದ ಕೊಡು; ಎಡೆಗೊಡು.
  6. ಕುಗ್ಗು; ಮುದುರಿಕೊ; ಸುರುಟಿಕೊ; ಸುಕ್ಕಾಗು: like seasoned timber, never gives ಹದಗೊಳಿಸಿದ ಚೌಬೀನೆಯಂತೆ ಎಂದಿಗೂ ಸುಕ್ಕಾಗುವುದಿಲ್ಲ.
  7. (ಕಿಟಕಿ ಮೊದಲಾದವುಗಳ ವಿಷಯದಲ್ಲಿ) ದೃಶ್ಯ ಕಾಣು, ಕಾಣಿಸು, ತೆರೆ: no window giving on to the street ಬೀದಿಯ ಕಡೆ ಕಾಣಿಸುವ ಕಿಟಕಿಯಿಲ್ಲ.
  8. (ಹಾದಿ, ಓಣಿ, ಮೊದಲಾದವುಗಳ ವಿಷಯದಲ್ಲಿ) ಕೊಂಡೊಯ್ಯು; ಸೇರು: the road which gave on to the highway ರಾಜಮಾರ್ಗಕ್ಕೆ ಸೇರುವ ದಾರಿ.
  9. (ಆಡುಮಾತು) ಆಗು; ಆಗುತ್ತಿರು; ಉಂಟಾಗು; ಸಂಭವಿಸು: what gives? ಏನಾಗುತ್ತಿದೆ?
ಪದಗುಚ್ಛ
  1. give away
    1. (ದಾನವಾಗಿ) ಕೊಟ್ಟುಬಿಡು: he gave away most of his income ತನ್ನ ವರಮಾನದ ಬಹುಭಗವನ್ನು ಅವನು ದಾನವಾಗಿ ಕೊಟ್ಟುಬಿಟ್ಟ.
    2. ಕನ್ಯಾದಾನ ಮಾಡು; ಮದುವೆ ಮಾಡಿಕೊಡು: I gave her away ನಾನು ಅವಳನ್ನು ಮದುವೆಮಾಡಿಕೊಟ್ಟೆ.
    3. ಬಯಲು ಮಾಡು; ಬಿಟ್ಟು ಕೊಡು; ಬಹಿರಂಗಗೊಳಿಸು; ಪ್ರಕಟಪಡಿಸು: give away the show ಕೊಂದುಕೊರತೆಗಳನ್ನು ತೋರಗೊಡು; ಪೊಳ್ಳುತನವನ್ನು ಬಯಲು ಮಾಡು.
    4. ನಗೆಗೀಡು ಮಾಡು; ಅಪಹಾಸ್ಯಕ್ಕೆ ಗುರಿಮಾಡು.
    5. ಪತ್ತೆ ಸಿಕ್ಕುವಂತೆ ಮಾಡು.
    6. (ಬಹುಮಾನ) ಹಂಚು; ವಿತರಣೆ ಮಾಡು; ವಿನಿಯೋಗಮಾಡು.
    7. ತ್ಯಾಗ ಮಾಡು; ಇನ್ನೊಬ್ಬನಿಗಾಗಿ ಬಿಟ್ಟುಕೊಡು: he gave away a good chance of winning the match ಅವನು ಪಂದ್ಯ ಗೆಲ್ಲುವ ಒಳ್ಳೆಯ ಅವಕಾಶವನ್ನು ಬಿಟ್ಟುಬಿಟ್ಟ, ಬಿಟ್ಟುಕೊಟ್ಟ.
  2. give back ಹಿಂದಕ್ಕೆ – ಕೊಡು, ಒಪ್ಪಿಸು; ಸ್ವಾಧೀನಕ್ಕೆ ಹಿಂದಿರುಗಿಸು.
  3. give birth to
    1. ಹೆರು; ಹಡೆ; ಈಯು; ಪ್ರಸವಿಸು; ಜನ್ಮ ಕೊಡು.
    2. (ರೂಪಕವಾಗಿ) ಪರಿಣಾಮವಾಗು; ಫಲಿಸು; ಉಂಟುಮಾಡು: her hobby gave birth to a successful business ಅವಳ ಹವ್ಯಾಸ ಯಶಸ್ವಿಯಾದ ಒಂದು ಉದ್ಯೋಗದಲ್ಲಿ ಫಲಿಸಿತು.
  4. give chase ಬೆನ್ನಟ್ಟಿ ಹೊರಡು; ಅಟ್ಟಿಕೊಂಡು ಹೋಗು.
  5. give down
    1. (ಹಸುವಿನ ವಿಷಯದಲ್ಲಿ) ಸೊರು ಬಿಡು; ಹಾಲನ್ನು ಕೆಚ್ಚಲಿನಿಂದ ಬಿಡು.
    2. (ಹಸುವಿನ ಹಾಲಿನ ವಿಷಯದಲ್ಲಿ) ಕೆಚ್ಚಲಿನಿಂದ ಹರಿ, ಸುರಿ.
  6. give ear ಕೇಳು; ಕಿವಿಗೊಡು.
  7. give forth
    1. ಹೊರಸೂಸು; ಹೊರಬಿಡು; ಹೊರಚೆಲ್ಲು: the fields give forth an odour of spring ಹೊಲಗಳು ವಸಂತದ ಕಂಪನ್ನು ಹೊರಸೂಸುತ್ತವೆ.
    2. ಪ್ರಕಟಿಸು; ಸಾರು ಪ್ರಸಿದ್ಧಪಡಿಸು; ವರದಿಮಾಡು: the king gave forth a proclamation ದೊರೆ ಘೋಷಣೆಯನ್ನು ಪ್ರಕಟಿಸಿದನು.
  8. give ground ಹಿಮ್ಮೆಟ್ಟು; ಹಿಂದಕ್ಕೆ – ಸರಿ, ಹೋಗು: the enemy was beginning to give ground ಶತ್ರುವು ಹಿಮ್ಮೆಟ್ಟಲು ಪ್ರಾರಂಭಿಸಿದ್ದನು.
  9. give in
    1. (ಹೋರಾಟ ಯಾ ವಾದದಲ್ಲಿ) ಬಿಟ್ಟುಕೊಡು; ನಿಲ್ಲಿಸಿ ಸೋಲೊಪ್ಪಿಕೊ; ಮಣಿ: they tire and give in ಅವರು ಆಯಾಸಗೊಂಡು ಹೋರಾಟ ನಿಲ್ಲಿಸುತ್ತಾರೆ. she did not give in on that point ಆ ಅಂಶದ ವಿಷಯದಲ್ಲಿ ಅವಳು ವಾದ ಬಿಟ್ಟು ಕೊಡಲಿಲ್ಲ.
    2. (ದಸ್ತೈವಜನ್ನು) ಸೂಕ್ತ ಅಧಿಕಾರಿಗೆ ತಲುಪಿಸು, ಒಪ್ಪಿಸು, ಕೊಡು: please give in your examination papers ದಯವಿಟ್ಟು ನಿಮ್ಮ ಪರೀಕ್ಷಾ ಪತ್ರಿಕೆಗಳನ್ನು ಕೊಡಿ.
  10. give off (ಆವಿ ಮೊದಲಾದವನ್ನು) ಹೊರಸೂಸು; ಹೊರಬಿಡು; ಹೊರಗೆ ಕಳುಹಿಸು.
  11. give one best (ಕರ್ಮಪದದೊಡನೆ) (ಆಡುಮಾತು) ಒಬ್ಬನ ಹಿರಿಮೆಯನ್ನು ಒಪ್ಪಿಕೊ.
  12. give oneself trouble ತೊಂದರೆ – ವಹಿಸು, ತೆಗೆದುಕೊ.
  13. give or take (ಆಡುಮಾತು) (ಅಂದಾಜು ನಿಷ್ಕೃಷ್ಟವಾದುದಕ್ಕೆ ಹತ್ತಿರವಾದುದು ಎಂದು ಭಾವಿಸಬೇಕು ಎನ್ನುವಲ್ಲಿ) ಕಾಲ, ಪ್ರಮಾಣ, ಹಣದ ಮೊತ್ತ, ಮೊದಲಾದವನ್ನು ಸೇರಿಸು ಯಾ ತೆಗೆ, ಕೂಡು, ಯಾ ಕಳೆ.
  14. give out
    1. ತಿಳಿಯಪಡಿಸು; ಸಾರು; ಪ್ರಕಟಿಸು; it was given out that the minister would be the chief speaker ಮಂತ್ರಿಗಳೇ ಪ್ರಧಾನ ಭಾಷಣಕಾರರೆಂದು ಪ್ರಕಟಿಸಲಾಗಿತ್ತು.
    2. ಹೊರಸೂಸು; ಹೊರಬಿಡು: the gold gave out its red glow ಬಂಗಾರ ತನ್ನ ಕೆಂಪು ಪ್ರಕಾಶವನ್ನು ಹೊರಸೂಸಿತು.
    3. ಹಂಚು; ವಿನಿಯೋಗಮಾಡು: the king gave out the arms to them ದೊರೆಯು ಅವರಿಗೆ ಶಸ್ತ್ರಗಳನ್ನು ಹಂಚಿದನು.
    4. (ವ್ಯಕ್ತಿಗಳ ವಿಷಯದಲ್ಲಿ) ತ್ಯಜಿಸು; ತೊರೆ; ದೂರವಿಡು; ಬಿಟ್ಟುಬಿಡು; ನಿಲ್ಲಿಸಿಬಿಡು: he is willing rather to play small play, than to give out ನೆಪಮಾತ್ರದ ಆಟವಾದರೂ ಅದನ್ನು ಆಡಿಯಾನು, ಸಂಪೂರ್ಣವಾಗಿ ಬಿಟ್ಟುಬಿಡಲು ಅವನಿಗೆ ಇಷ್ಟವಿಲ್ಲ.
    5. (ಯಂತ್ರ, ಅವಯವ, ಮೊದಲಾದವುಗಳ ವಿಷಯದಲ್ಲಿಬಳಲಿಕೆ ಮೊದಲಾದವುಗಳಿಂದ) ಕೆಟ್ಟು ಹೋಗು; ಮುರಿದುಬೀಳು; ನಿಂತುಹೋಗು; ಕುಸಿ: his eyes have given out ಅವನ ಕಣ್ಣುಗಳು ಕೆಟ್ಟುಹೋಗಿವೆ.
    6. ಸಾಲದೆ ಹೋಗು; ಕಡಿಮೆಯಾಗಿರು; ಸಾಕಾಗದೆ ಹೋಗು; ಮುಗಿದು ಹೋಗು: before spring, their finances may give out ವಸಂತಕ್ಕೆ ಮೊದಲೇ ಅವರ ಹಣ ಮುಗಿದುಹೋಗಬಹುದು.
  15. give over
    1. ಮಾಡದೆ ಬಿಟ್ಟುಬಿಡು; ನಿಲ್ಲಿಸು: plese give over crying ದಯವಿಟ್ಟು ಅಳು ನಿಲ್ಲಿಸು.
    2. (ಅಭ್ಯಾಸ ಮೊದಲಾದವನ್ನು) ಕೈಬಿಡು; ಬಿಡು; ತೊರೆ; ತ್ಯಜಿಸು; ದೂರವಾಗು: they gave over the contest ಅವರು ಸ್ಪರ್ಧೆಯನ್ನು ಕೈಬಿಟ್ಟರು.
    3. ಕೊಡು; ಒಪ್ಪಿಸು; ವಶಮಾಡು; ಸ್ವಾಧೀನಗೊಳಿಸು: she gave over all her property to her son ಆಕೆ ತನ್ನ ಎಲ್ಲ ಆಸ್ತಿಯನ್ನೂ ಮಗನಿಗೆ ಕೊಟ್ಟುಬಿಟ್ಟಳು.
    4. ತೊಡಗು; ಮಗ್ನನಾಗು; ಅನುರಕ್ತನಾಗು; ನಿರತನಾಗು: give over to sports ಆಟಪಾಟಗಳಲ್ಲಿ ಮಗ್ನನಾಗಿ.
    5. ವಶನಾಗು; ಅಧೀನನಾಗು; ಬೀಳು: given over to despair or evil courses ನಿರಾಶೆಗೆ ವಶವಾಗಿ ಯಾ ಕೆಟ್ಟ ಚಾಳಿಗಳಿಗೆ ಬಿದ್ದು.
  16. give person to understand, know, etc. ತಿಳಿಸು; ತಿಳಿಯಹೇಳು; ಭರವಸೆಕೊಡು; ನೆಚ್ಚಿಕೆ ಕೊಡು: he gave me to understand that his intentions were honourable ಅವನ ಉದ್ದೇಶಗಳು ಗೌರವಯುತವೆಂದು ಅವನು ನನಗೆ ಭರವಸೆಕೊಟ್ಟನು.
  17. give place to
    1. ಸ್ಥಳ ಬಿಟ್ಟುಕೊಡು; ಜಾಗಬಿಡು; ಅವಕಾಶಕೊಡು; ಎಡೆಕೊಡು.
    2. ಮುಂದಕ್ಕೆ ಬಿಡು; ಹಿಂದಕ್ಕೆ ಸರಿ; ಮೇಲಿನ ಯಾ ಮುಂದಿನ ಸ್ಥಾನ ಬಿಟ್ಟುಕೊಡು.
    3. ತಳ್ಳಿಹಾಕಲ್ಪಡು; ಕೆಳಗಿನ ವ್ಯಕ್ತಿ ಯಾ ವಸ್ತು ಮೇಲೇರುವಂತಾಗು; ತಲೆಯ ಮೇಲೆ ಕೂರಿಸಲ್ಪಡು.
  18. give rise to ಕಾರಣವಾಗು; ಆಗುವಂತೆ ಮಾಡು; ಉಂಟುಮಾಡು: the industrial revolution gave rise to urbanization ಔದ್ಯಮಿಕ ಕ್ರಾಂತಿ ನಗರೀಕರಣಕ್ಕೆ ಕಾರಣವಾಯಿತು.
  19. give the time of day ಅಭಿನಂದಿಸು; ಬೆಳಗ್ಗೆ, ಸಂಜೆ, ಮೊದಲಾದವುಗಳ ನಮಸ್ಕಾರ ಹೇಳು.
  20. give tongue
    1. (ಬೇಟೆನಾಯಿಗಳ ವಿಷಯದಲ್ಲಿ) (ಮುಖ್ಯವಾಗಿ ಬೇಟೆಯ ವಾಸನೆ ಬಂದಾಗ) ಬೊಗಳು.
    2. ಗಟ್ಟಿಯಾಗಿ, ಎಲ್ಲರಿಗೂ ಕೇಳುವಂತೆ – ಹೇಳು, ನುಡಿ.
  21. give up
    1. ತೊರೆ; ತ್ಯಜಿಸು; ವರ್ಜಿಸು; ಬಿಟ್ಟುಬಿಡು.
    2. ವಶಪಡಿಸು; ಒಪ್ಪಿಸು; ಕೊಟ್ಟುಬಿಡು; ಕೊಡು; ನೀಡು: give up a fortress ಕೋಟೆಯನ್ನು ಒಪ್ಪಿಸು. give up a seat in a crowded train ನೂಕುನುಗ್ಗಲಿನ ರೈಲಿನಲ್ಲಿ ತನ್ನ ಜಾಗವನ್ನು (ಇನ್ನೊಬ್ಬನಿಗೆ) ಕೊಡು.
    3. ವಿಸರ್ಜಿಸು; ತ್ಯಜಿಸು; ಬೇರ್ಪಡು: give up ghost ಸಾಯು; ಪ್ರಾಣಬಿಡು; ತ್ಯಜಿಸು.
    4. (ತಪ್ಪಿಸಿಕೊಂಡು ಓಡಿಬಂದವನು ಮೊದಲಾದವರನ್ನು ಅವನ ಬೆನ್ನಟ್ಟಿ ಬರುವವರು ಮೊದಲಾದವರಿಗೆ) ಒಪ್ಪಿಸು; ವಶಪಡಿಸು: give up the thief to the police ಕಳ್ಳನನ್ನು ಪೊಲೀಸರಿಗೆ ಒಪ್ಪಿಸು. the escaped criminal gave himself up ತಪ್ಪಿಸಿಕೊಂಡಿದ್ದ ಅಪರಾಧಿ ತನ್ನನ್ನು ತಾನು ಒಪ್ಪಿಸಿಕೊಂಡು, ತಾನೇ ವಶನಾದ.
    5. (ಭಾವ, ಉದ್ರೇಕ, ಮೊದಲಾದವುಗಳಿಗೆ) ವಶನಾಗು; ಅಧೀನನಾಗು.
    6. ಸಂಬಂಧ – ತೊರೆ, ಕಡಿದುಕೊ.
    7. (ಯಾವುದೇ ಪ್ರಯತ್ನ ಯಾ ಕಾರ್ಯವನ್ನು) ಬಿಟ್ಟುಬಿಡು; ಕೈಬಿಡು; ನಿಲ್ಲಿಸು: give up smoking ಧೂಮಪಾನ ಬಿಡು.
    8. (ಆತ್ಮಾರ್ಥಕ ಯಾ ಭೂತಕೃದಂತದಲ್ಲಿ) ಒಪ್ಪಿಸಿಕೊ; ಸಮರ್ಪಿಸಿಕೊ; ಮಗ್ನನಾಗು; ನಿರತನಾಗು: give oneself up to studies ವ್ಯಾಸಂಗಕ್ಕೆ ಅರ್ಪಿಸಿಕೊ; ಓದಿನಲ್ಲಿ ಮಗ್ನನಾಗು.
    9. (ಭಾಗಿಗಳಾದವರ ಹೆಸರು ಮೊದಲಾದವುಗಳನ್ನು) ತಿಳಿಸು; ಬಯಲುಮಾಡು; ಹೊರಗೆಡಹು.
    10. ಅಪರಿಹಾರ್ಯವೆಂದು ಹೇಳು; ಬಗೆಹರಿಯದ್ದೆಂದು ಹೇಳು; ಪರಿಹಾರವಾಗದ್ದೆಂದು ತಿಳಿಸು; ಸಮಸ್ಯೆಯನ್ನು ಬಿಡಿಸಲಾಗದ್ದೆಂದು ಯಾ ರೋಗವನ್ನು ಗುಣಪಡಿಸಲಾಗದ್ದೆಂದು ಕೈಬಿಡು: the teachers gave up the child as incorrigible ಮಗು ತಿದ್ದಲಾಗದ್ದೆಂದು ಉಪಾಧ್ಯಾಯರು ಅದರ ಕೈಬಿಟ್ಟರು. the doctors have given him up ಅವನನ್ನು ಗುಣಪಡಿಸಲು ಆಗದೆಂದು ವೈದ್ಯರು ಕೈಬಿಟ್ಟಿದ್ದಾರೆ.
    11. (ಒಂದರ) ಆಸೆಬಿಡು; ನಿರಾಶನಾಗು.
    12. (ಆಡುಮಾತು) ಇನ್ನು (ಮುಂದೆ) ನಿರೀಕ್ಷಿಸದಿರು; ಎದುರು ನೋಡದಿರು: she was so late that we had given her up ಅವಳು ಎಷ್ಟು ತಡವಾಗಿದ್ದಳೆಂದರೆ, ನಾವು ಅವಳನ್ನು ನಿರೀಕ್ಷಿಸುವುದನ್ನೇ ಬಿಟ್ಟುಬಿಟ್ಟಿದ್ದೆವು.
ನುಡಿಗಟ್ಟು
  1. give a $^1$back.
  2. give a cry ಕೂಗು.
  3. give a good $^2$account of oneself.
  4. give a jump ಹಾರು; ನೆಗೆ.
  5. give a performance (ಸಂಗೀತ, ನಾಟಕ, ಮೊದಲಾದವುಗಳ) ಪ್ರದರ್ಶನ ನೀಡು.
  6. give a piece of one’s $^1$mind.
  7. give a reading ವಾಚನ ಮಾಡು.
  8. give a Roland for an Oliver ತಕ್ಕ ಜವಾಬು ಕೊಡು; ಪರಿಣಾಮಕಾರಿಯಾದ ಪ್ರತಿಜವಾಬು ಕೊಡು; ಮುಯ್ಯಿಗೆ ಮುಯ್ಯಿ ತೀರಿಸು; ತಕ್ಕ ಪ್ರತೀಕಾರ ಮಾಡು.
  9. give as good as one gets ಮಾತಿಗೆ ಮಾತು – ಆಡು, ತಿರುಗಿಸು; ಏಟಿಗೆ ಏಟು – ಕೊಡು, ತಿರುಗಿಸು; (ಮುಯ್ಯಿಗೆ) ಮುಯ್ಯಿ ತೀರಿಸು.
  10. give a song ಹಾಡು.
  11. give child etc. something to cry for ನಿಷ್ಕಾರಣವಾಗಿ ಅಳುವ ಮಗು ಮೊದಲಾದವನ್ನು – ಹೊಡೆ, ಶಿಕ್ಷಿಸು, ದಂಡಿಸು; ಅಳುವುದಕ್ಕೆ ಕಾರಣ ಒದಗಿಸು.
  12. give dinner ಔತಣಕೂಟ, ಭೋಜನ ಸಮಾರಂಭ – ಏರ್ಪಡಿಸು.
  13. give ground
    1. ಹಿಮ್ಮೆಟ್ಟು; ಹಿಂಜರಿ.
    2. ಎಡೆಗೊಡು; ಅವಕಾಶಕೊಡು.
  14. give it him etc. hot ಅವನಿಗೆ ಬಿಸಿ ತೋರಿಸು; ಅವನಿಗೆ ಶಿಕ್ಷೆ ಕೊಡು; ಅವನನ್ನು ದಂಡಿಸು.
  15. give me (ವಿಧಿರೂಪದಲ್ಲಿ) ನನಗೆ ಇಷ್ಟ, ಸರಿ ಚೆನ್ನ, ಮೆಚ್ಚಿಕೆ: give me the good old times ನನಗೆ ಹಳೆಯ ಕಾಲವೇ ಇಷ್ಟ, ಚೆನ್ನ; ನಾನು ಹಿಂದಿನ ಆ ದಿನಗಳನ್ನು ಬಯಸುತ್ತೇನೆ ಯಾ ಮೆಚ್ಚುತ್ತೇನೆ.
  16. give one his due ಒಬ್ಬನಲ್ಲಿರಬಹುದಾದ ಗುಣಗಳನ್ನು ಒಪ್ಪಿಕೊ, ಗುಣಕ್ಕೆ ಪುರಸ್ಕಾರ ನೀಡು.
  17. give one his head (ಕುದುರೆಯ ವಿಷಯದಲ್ಲಿಇದ್ದಂತೆ) ಲಗಾಮು ಬಿಡು; ಸ್ವೇಚ್ಛೆಯಾಗಿ ಬಿಡು; ಸ್ವತಂತ್ರವಾಗಿ ಹೋಗಲು ಬಿಡು.
  18. give oneself (ಹೆಂಗಸಿನ ವಿಷಯದಲ್ಲಿ) ತನ್ನನ್ನು (ಗಂಡಿಸಿಗೆ) ಒಪ್ಪಿಸಿಕೊ; ಸಂಭೋಗಕ್ಕೆ ಒಪ್ಪಿಸಿಕೊ.
  19. give oneself airs ದೊಡ್ಡಸ್ತಿಕೆ ತೋರಿಸು; ದೊಡ್ಡತನದ ವೇಷಹಾಕು; ಸೋಗು ಹಾಕು; ಪ್ರತಿಷ್ಠೆ ತೋರಿಸು.
  20. give person one’s blessings ಒಬ್ಬನನ್ನು ಹರಸು; ಒಬ್ಬನಿಗೆ ಆಶೀರ್ವಾದ ಮಾಡು.
  21. give person one’s hand
    1. (ಆಸರೆಗಾಗಿ) ಒಬ್ಬನಿಗೆ ಕೈ ನೀಡು.
    2. ಹಸ್ತಲಾಘವಕೊಡು.
    3. ಒಬ್ಬನ ಕೈ ಹಿಡಿ; ಒಬ್ಬನಿಗೆ ಸಹಾಯ ಮಾಡು.
    4. ಪಾಣಿಗ್ರಹಣ ಮಾಡು; ಮದುವೆಯಾಗು; ಕೈಹಿಡಿ.
  22. give person what for (ಆಡುಮಾತು)
    1. ದಂಡಿಸು; ಶಿಕ್ಷಿಸು.
    2. ಬಯ್ಯು; ತೆಗಳು.
  23. give the $^1$boot.
  24. give the $^3$lie to
  25. give the mitten (ಅಶಿಷ್ಟ)
    1. ಪ್ರಣಯಿಯನ್ನು ತಿರಸ್ಕರಿಸು; ನಿರಾಕರಿಸಿ ಕಳುಹಿಸಿ ಬಿಡು.
    2. (ಕೆಲಸದಿಂದ) ವಜಾಮಾಡು; ತೆಗೆದುಹಾಕು.
  26. give the sack = ನುಡಿಗಟ್ಟು \((25b)\).
  27. give to the world ಪ್ರಕಟಿಸು; ಪ್ರಕಾಶಮಾಡು; ಪ್ರಸಿದ್ಧಪಡಿಸು: the results of these enquiries have been given to the world ಈ ವಿಚಾರಣೆಗಳ ಫಲಿತಾಂಶಗಳು ಪ್ರಕಟಿಸಲ್ಪಟ್ಟಿವೆ.
  28. give up the ghost ಪ್ರಾಣಬಿಡು; ಮರಣ ಹೊಂದು; ಸಾಯು.
  29. give way
    1. ಹಿಮ್ಮೆಟ್ಟು; ಹಿಂದೆಗೆ; ಹೋರಾಡದಿರು.
    2. ದಾರಿಕೊಡು; ಸ್ಥಾನ ಮಾಡಿಕೊಡು; ಜಾಗ ಬಿಟ್ಟುಕೊಡು; ವ್ಯಕ್ತಿಗೆ,ವಸ್ತುವಿಗೆ – ಸ್ಥಾನ ಬಿಟ್ಟುಕೊಡುವಂತಾಗು: faith has given way to doubt ಶ್ರದ್ಧೆ ಸಂಶಯಕ್ಕೆ ದಾರಿಮಾಡಿಕೊಟ್ಟಿದೆ.
    3. (ಬೇರೆ ವಸ್ತುವಿನಿಂದ) ಸ್ಥಾನ ಬಿಡುವಂತಾಗು; ಸ್ಥಾನಚ್ಯುತನಾಗು.
    4. ಮುರಿದುಬೀಳು; ಬಿದ್ದುಹೋಗು; ಕುಸಿ; ಕಿತ್ತುಹೋಗು: the rope gave way ಹಗ್ಗ ಕಿತ್ತುಹೋಯಿತು.
    5. (ವ್ಯಕ್ತಿಗಳ ವಿಷಯದಲ್ಲಿ) ಮಣಿ; ಸೋಲೊಪ್ಪು: when he gives way, he does it with so bad a grace ಅವನು ಸೋಲೊಪ್ಪುವಾಗ ಘನತೆಯಿಂದ ಸೋಲೊಪ್ಪುವುದಿಲ್ಲ.
    6. (ದುಃಖ ಮೊದಲಾದವಕ್ಕೆ) ವಶವಾಗು; ಒಳಗಾಗು: he never gave way either to anger or alarm ಅವನು ಕೋಪಕ್ಕಾಗಲಿ ಭಯಕ್ಕಾಗಲಿ ಎಂದೂ ವಶವಾಗಲಿಲ್ಲ.
    7. ಬೆಲೆ – ಬೀಳು, ಇಳಿ, ಕಡಿಮೆಯಾಗು, ಕುಸಿ.
    8. ಹುಟ್ಟುಹಾಕಲು ಪ್ರಾರಂಭಿಸು ಯಾ ಜೋರಾಗಿ ಹುಟ್ಟುಹಾಕು: the steersman should encourage the rowers to give way ತಂಡೇಲನು ದೋಣಿ ನಡೆಸುವವರನ್ನು ಜೋರಾಗಿ ಹುಟ್ಟು ಹಾಕುವಂತೆ ಪ್ರೋತ್ಸಾಹಿಸಬೇಕು.
  30. would give one’s ears = ನುಡಿಗಟ್ಟು \((31)\).
  31. would give the world (ಒಂದು ವಸ್ತುವನ್ನು ಪಡೆಯಲು) ಬಯಸಿದ ವಸ್ತುವಿಗಾಗಿ, ಯಾ ಅದು ನಿಜವಾದರೆ ಏನು ಬೇಕಾದರೂ ಕೊಟ್ಟೇನು; ಏನು ತ್ಯಾಗವನ್ನಾದರೂ ಮಾಡಿಯೇನು; ಸರ್ವಸ್ವವನ್ನೂ ಧಾರೆಯೆರೆದೇನು: many a girl would give the world to have such a complexion ಎಷ್ಟೋ ಹುಡುಗಿಯರು ಅಂಥ ಮುಖಕಾಂತಿಗೋಸ್ಕರ ಏನು ಬೇಕಾದರೂ ಕೊಟ್ಟಾರು.
See also 1give
2give ಗಿವ್‍
ನಾಮವಾಚಕ

ಸ್ಥಿತಿಸ್ಥಾಪಕತೆ; ಒತ್ತಡಕ್ಕೆ ಸಗ್ಗುವ ಗುಣ: there is no give in a stone floor ಕಲ್ಲಿನ ನೆಲದಲ್ಲಿ ಸ್ಥಿತಿಸ್ಥಾಪಕತೆ ಇಲ್ಲ.