girl ಗರ್ಲ್‍
ನಾಮವಾಚಕ
  1. ಹೆಣ್ಣು (ಮಗು); ಹುಡುಗಿ.
  2. ಇನ್ನೂ ಮದುವೆಯಿಲ್ಲದ ಹೆಂಗಸು; ಕೊಡಗೂಸು; ಕನ್ಯೆ; ಬಾಲಿಕೆ; ಬಾಲೆ.
  3. ಮನೆಗೆಲಸದವಳು; ಕೆಲಸಗಿತ್ತಿ.
  4. (ಒಬ್ಬನ) ಪ್ರೇಯಸಿ; ನಲ್ಲೆ.
  5. ಹೆಣ್ಣು; ಸ್ತ್ರೀ: girl friend (ಹುಡುಗನ ಯಾ ಗಂಡಸಿನ) ಹೆಂಗೆಳೆತಿ; ಸಂಗಾತಿ; ಜತೆಗಾರ್ತಿ; ಸ್ನೇಹಿತೆ.
  6. (ಕಛೇರಿ, ಅಂಗಡಿ, ಕಾರ್ಖಾನೆ, ಮೊದಲಾದವುಗಳಲ್ಲಿ) ಕೆಲಸಮಾಡುವ ಹೆಂಗಸು.
  7. ಕಾರ್ಯದರ್ಶಿಣಿ ಯಾ ಸಹಾಯಕಿ.
ಪದಗುಚ್ಛ
  1. best girl (ಒಬ್ಬನ) ಪ್ರೇಯಸಿ; ನಲ್ಲೆ.
  2. girl $^1$friday.
  3. les girls (ಉಚ್ಚಾರಣೆ –ಲೇ ಗರ್ಲ್ಸ್‍). ಬಾಲೆಯರು; ಹುಡುಗಿಯರು; ಮೇಳಬಾಲೆಯರು; ಮುಖ್ಯವಾಗಿ ಸಮೂಹಗಾನದ ಯಾ ಸಮೂಹ ನೃತ್ಯದ ಹುಡುಗಿಯರು.
  4. old girl ಮುದಿ ಹುಡುಗಿ (ಹೆಂಗಸು, ಹೆಣ್ಣುಕುದುರೆ, ಮೊದಲಾದವುಗಳ ವಿಷಯದಲ್ಲಿ ಪ್ರೀತಿ ಯಾ ಅಗೌರವ ಸೂಚಕವಾದ ಮಾತು, ಯಾ ಸಂಬೋಧನೆಯಾಗಿ ಪ್ರಯೋಗ).
  5. the girls
    1. (ಒಂದು ಕುಟುಂಬದ ಬೆಳೆದ) ಹೆಣ್ಣು ಮಕ್ಕಳು.
    2. (ಮುಖ್ಯವಾಗಿ ಸಮಾನಾಸಕ್ತಿಯುಳ್ಳ) ಹೆಂಗಸರು; ಸ್ತ್ರೀಯರು.