See also 2girdle  3girdle
1girdle ಗರ್ಡ್‍ಲ್‍
ನಾಮವಾಚಕ
  1. ನಡುಕಟ್ಟು; ನಡುಪಟ್ಟಿ; ಉಡಿದಾರ; ಡಾಬು; ಮೇಖಲೆ; ಒಡ್ಯಾಣ; ಕಟಿಬಂಧ; ಕಟಿಸೂತ್ರ.
  2. ಒಳಉಡುಪು; ಒಳಕವಚ; ಪೃಷ್ಠ, ಹೊಟ್ಟೆಗಳಿಗೆ ಆಕಾರಕೊಟ್ಟು ಸಣ್ಣದಾಗಿ ಕಾಣುವಂತೆ ಮಾಡಲು ಹೆಂಗಸರು ಧರಿಸುವ, ಸೊಂಟದವರೆಗೆ ಬರುವ, ಹಗುರವಾದ, ಎಲಾಸ್ಟಿಕ್‍ ಹಾಕಿದ ಒಳ ಉಡುಪು.
  3. ಮಂಡಲ; ವೇಷ್ಟನ; ನಡುಪಟ್ಟಿಯಂತೆ ಸುತ್ತುವರಿದಿರುವುದು.
  4. (ಸಾಣೆ ಹಿಡಿದ, ಚಿನ್ನದ ಕಟ್ಟಡ ಸುತ್ತುವರಿದ) ರತ್ನದ ನಡು ಅಂಚು, ಭಾಗ.
  5. (ಅಂಗರಚನಾಶಾಸ್ತ್ರ) ಅಸ್ಥಿಚಕ್ರ; ತೋಳು ಮತ್ತು ಕಾಲುಗಳಿಗೆ ಆಧಾರವಾಗಿರುವ, ಹೆಚ್ಚು ಕಡಿಮೆ ಸಂಪೂರ್ಣ ಚಕ್ರಾಕೃತಿಯ ಮೂಳೆ: shoulder girdle ಭುಜಾಸ್ಥಿ ಚಕ್ರ.
  6. ಸುತ್ತುಪಟ್ಟೆ; ಮರದ ಸುತ್ತಲೂ ತೊಗಟೆ ತೆಗೆದು ಮಾಡಿರುವ ಪಟ್ಟಿ, ಪಟ್ಟೆ.
See also 1girdle  3girdle
2girdle ಗರ್ಡ್‍ಲ್‍
ಸಕರ್ಮಕ ಕ್ರಿಯಾಪದ
  1. (ನಡುಕಟ್ಟಿನಿಂದ, ಸುತ್ತುವಲಯದಿಂದ) ಸುತ್ತುಗಟ್ಟು; ಸುತ್ತುವರಿ; ಬಳಸು; ನಡುಕಟ್ಟು, ಡಾಬು – ಹಾಕು.
  2. ಸುತ್ತು ಪಟ್ಟಿಯನ್ನು ಕೆತ್ತಿ ಮರವನ್ನು ಹೆಚ್ಚು ಫಲಬಿಡುವಂತೆ ಮಡು.
See also 1girdle  2girdle
3girdle ಗರ್ಡ್‍ಲ್‍
ನಾಮವಾಚಕ

(ಸ್ಕಾಟ್ಲೆಂಡ್‍ ಪ್ರಯೋಗ) (ರೊಟ್ಟಿ, ದೋಸೆ, ಮೊದಲಾದವನ್ನು ಸುಡುವ) ಗುಂಡುಕಾವಲಿ; ದುಂಡುಹೆಂಚು.